ಒಡೆದ ಕನ್ನಡಿ ಮನೆಯಲ್ಲಿ ಇರಬಾರದು ಎಂಬುದಕ್ಕೆ ವೈಜ್ಞಾನಿಕ ಕಾರಣ

0
7900

ಕನ್ನಡಿಯು ತನ್ನ ಮುಂದೆ ಇರುವ ವಸ್ತುವನ್ನು ಪ್ರತಿ ಫಲಿಸುತ್ತದೆ , ಕನ್ನಡಿ ವೈಜ್ಞಾನಿಕವಾಗಿ ಬಹಳ ಪ್ರಾಮುಖ್ಯತೆ ಹೊಂದಿದೆ , ಕೇವಲ ಮನುಷ್ಯರು, ಆನೆಗಳು ಹಾಗೂ ಇನ್ನು ಕೆಲವೇ ಜೀವಿಗಳು ತಮ್ಮ ಪ್ರತಿಬಿಂಬವನ್ನು ಗುರುತಿಸುತ್ತವೆ.

ಹೆಣ್ಣು ಮಕ್ಕಳ ಸೌಂದರ್ಯ ಸಾಧಕಗಳಲ್ಲಿ ಕನ್ನಡಿಗೆ ಮೊದಲ ಸ್ಥಾನ , ಊಟವನ್ನು ಬೇಕಾದರೆ ಮರೆತಾರು
ಆದರೆ ಕನ್ನಡಿಯನ್ನು ನೋಡುವುದು ಮರೆಯುವುದಿಲ್ಲ.

ಹಿಂದಿನ ಶಾಸ್ತ್ರಗಳಲ್ಲಿ ಕನ್ನಡಿ :

* ಕನ್ನಡಿಯು ನೋಡುಗನ ಆತ್ಮವನ್ನು ಸೆರೆ ಹಿಡಿಯುತ್ತದೆ ಎಂದು ನಂಬಲಾಗಿದೆ.
* ದೇವತೆಗಳು ಹಾಗೂ ರಾಕ್ಷಸರು ತಮ್ಮ ರೂಪವನ್ನು ಒಂದು ಪ್ರಕಾರದಿಂದ ಇನ್ನೊಂದು ಪ್ರಕಾರಕ್ಕೆ ಬದಲಾಯಿಸಿಕೊಳ್ಳಲು.
ಅಂದರೆ ಬೇರೊಬ್ಬ ವ್ಯಕ್ತಿಯ ರೂಪಕ್ಕೆ ಮಾರ್ಪಾಡುಗೊಳ್ಳ ಲು ಕನ್ನಡಿಯನ್ನು ಬಳಸುತ್ತಿದ್ದರು ಎಂಬ ನಂಬಿಕೆಯು ಇದೆ. ಅದೇ ಕಾರಣದಿಂದ ಒಡೆದ ಕನ್ನಡಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು , ಸರಿಯಾಗಿ ಮುಖ ಕಾಣದ ಕನ್ನಡಿಯನ್ನು ಮನೆಯಿಂದ ದೂರವಿರಿಸಬೇಕು ಎಂಬ ನಂಬಿಕೆ ಇದೆ.
* ಒಡೆದ ಕನ್ನಡಿಯಲ್ಲಿ ಮುಖವನ್ನು ನೋಡಿಕೊಳ್ಳಬಾರದು ,ಮುಖ ನೋಡಿಕೊಂಡರೆ 7 ವರ್ಷ ಕಷ್ಟ ಬರುತ್ತದೆ ಎಂಬ ಮೂಡನಂಬಿಕೆಯು ಸಹ ಇದೆ.
* ಕನ್ನಡಿಯು ದೇವತೆ ಲಕ್ಷ್ಮಿಯ ರೂಪ ,ಕನ್ನಡಿ ಲಕ್ಷೀ ಇಬ್ಬರು ಚಂಚಲ,
ಎಲ್ಲಿ ಒಂದು ವ್ಯಕ್ತಿಯ ಹಲವು ಮುಖಗಳು ಕಾಣು ತ್ತವೆಯೋ ಅಲ್ಲಿ ದೇವತೆ ಲಕ್ಷ್ಮಿ ನೆಲೆಸಿರುವುದಿಲ್ಲ
ಎಂಬ ನಂಬಿಕೆಯು ಇದೆ.

ಕೆಲವು ಆಶ್ಚರ್ಯಕರ ಸಂಗತಿಗಳು:

* ಮನೆಯಲ್ಲಿ ಕನ್ನಡಿ ಒಡೆದರೆ 7 ವರ್ಷ ಕೆಟ್ಟ ಸಮಯ ಅನುಭವಿಸ ಬೇಕಾಗುತ್ತದೆ .
* ಒಡೆದ ಕನ್ನಡಿಯನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಮರದ ಕೆಳಗೆ ಉಳ ಬೇಕು ಎಂಬ ಪ್ರತೀತಿ ಇದೆ.
* ಕನಸಲ್ಲಿ ಒಡೆದ ಕನ್ನಡಿಯನ್ನು ಕಂಡರೆ ಸಂಗಾತಿಯ ಸಾವು ಸಂಭವಿಸಿತ್ತದೆ ಎಂಬ ನಂಬಿಕೆಯು ಇದೆ.
* ಕನ್ನಡಿಯನ್ನು ಕನಸಲ್ಲಿ ಕಂಡರೆ ಒಳ್ಳೆಯ ಅದೃಷ್ಟ
ಖುಲಾಯುಸುತ್ತದೆ ಎಂಬ ನಂಬಿಕೆಯು ಇದೆ.

ವೈಜ್ಞಾನಿಕ ಕಾರಣಗಳು :

* ಹಿಂದಿನ ಕಾಲದಲ್ಲಿ ಕನ್ನಡಿಯನ್ನು ಮರಳನ್ನು ಬಳಸಿ ತಯಾರು ಮಾಡಲಾಗುತ್ತದೆ , ಮರಳನ್ನು ಶೋಧಿಸಿ ಮತ್ತಷ್ಟು ರಾಸಾಯನಿಕಗಳನ್ನು ಸೇರಿಸಿ ತಯಾರಿಸಲಾಗುತ್ತಿತ್ತು ಹಾಗೂ ಬಹಳ ಕಷ್ಟಕರ ವಿಧಾನವಾಗಿತ್ತು, ಕನ್ನಡಿ ದೊರಕುವುದು ತೀರಾ ವಿರಳ ಹಾಗೂ ಬಹಳ ಹಣ ನೀಡಬೇಕಿತ್ತು ಹಾಗಾಗಿ ಕನ್ನಡಿಯನ್ನು ಬಹಳ ನಾಜೂಕಾಗಿ ಬಳಸಬೇಕಿತ್ತು .

* ಕನ್ನಡಿ ಹೊಡೆದಾಗ ಕನ್ನಡಿಯ ಸಣ್ಣ ಸಣ್ಣ ಗಾಜಿನ ತುಣುಕುಗಳು ಕಾಲಿಗೆ ಮೆಟ್ಟಿಕೊಂಡಾಗ ತೀವ್ರವಾದ ಗಾಯಗಳು ಉಂಟು ಮಾಡುತ್ತವೆ, ಕೆಲವು ಸಣ್ಣ ಸಣ್ಣ ಗಾಜಿನ ತುಣುಕುಗಳನ್ನು ಕಾಲಿನಿಂದ ತೆಗೆಯುವುದು ತುಂಬ ಕಷ್ಟಕರ ಕೆಲಸವಾಗಿತ್ತು.

* ಒಂದು ವಸ್ತುವನ್ನು ಸರಿಯಾಗಿ ನಿಭಾಯಿಸಲು ಬರದವ ತನ್ನ ಜೀವನವನ್ನು ಹೇಗೆ ತಾನೇ ನಿಭಾಯಿಸ ಬಲ್ಲ ?
ಆದ ಕಾರಣ ನಮ್ಮ ಏಕಾಗ್ರತೆ ಹೆಚ್ಚಿಸಲು.

ಜೀವನ ಕ್ರಮವನ್ನು ಉತ್ತಮಪಡಿಸಲು ಕೆಲವು ಮೂಡ ನಂಬಿಕೆಗಳು ಹುಟ್ಟಿದವು.