ಎಂಥ ಕಾಲ ಬಂತು ನೋಡಿ, ನಿದ್ದೆ ಬರಲಿಲ್ಲ ಅಂದ್ರೆ ನಿದ್ದೆ ಬರಿಸೊಕ್ಕು ಆಪ್ ಬಂದಿದೆ…

0
820

Kannada News | Health tips in kannada

ನಿದ್ದೆ ಬರದವರಿಗಾಗೇ ಬರ್ತಿದೆ ಸ್ಲೀಪರ್-ಕೋಚ್ ಆ್ಯಪ್

ಅಯ್ಯೋ ಇವತ್ತು ಲೇಟಾಯ್ತು ನಿದ್ದೆ ಬರ್ತಿಲ್ಲ…… 

ಅಂತ ಅನಿಸ್ತಿದೀಯಾ.. ಸರಿಯಾದ ಟೈಂಗೆ ಮಲಗೋಕೆ ಆಗ್ಲಿಲ್ಲ.. ಈಗ ನಿದ್ದೆ ಬರೋದೂ ಇಲ್ಲ ಅನ್ನೋದಾದ್ರೆ ಸ್ವಲ್ಪ ದಿನ ಕಾಯ್ರಿ ನಿಮ್ಮಂತವರಿಗೆ ಅಂತಾನೇ ನಮ್ ಬ್ರೌನ್ ಯೂನಿವರ್ಸಿಟಿ ರಿಸರ್ಚ್ ಸೆಂಟರ್ ಹೊಸ ಆ್ಯಪ್ ರೆಡಿ ಮಾಡ್ತಿದೆ.

ಈ ಆಧುನಿಕ ಯುಗದಲ್ಲಿ ಎಲ್ಲವೂ ಸ್ಮಾರ್ಟ್ ಕಣ್ರಿ.. ನಮಗೆ,ನಿದ್ದೆ ಒಂದ್ ಬಿಟ್ಟು ಎಲ್ಲವೂ ಸ್ಮಾರ್ಟ್ ಆಗೆ,ಆಗುತ್ತೆ. ಆದ್ರೆ ಎಲ್ಟೇನೇ ಮಾಡಿದ್ರು ಈ ಹಾಳಾದ್ ನಿದ್ದೆ,ಮಾತ್ರ ಬರಲ್ಲ. ಮನುಷ್ಯನ ದೇಹಕ್ಕೆ ಆಹಾರ ಎಲ್ಟು ಇಂಪಾರ್ಟೆಂಟೋ ನಿದ್ದೇನೂ ಅಷ್ಟೇ.. ಮನುಷ್ಯ ಪ್ರತಿ ನಿತ್ಯ 6 ರಿಂದ 7 ಗಂಟೆಗಳ ಕಾಲ ನಿದ್ದೆ ಮಾಡಿದರೆ ಲವ-ಲವಿಕೆಯಿಂದ ಇರಲು ಸಾಧ್ಯ. ಒತ್ತಡದ ಜೀವನ ಮತ್ತು ಇತರೆ ಕಾರಣಗಳಿಂದ ಕಡಿಮೆ ಅವಧಿಯ ನಿದ್ದೆ ಮಾಡ್ತೀವಿ.

ಆದ್ರೆ ಇನ್ಮುಂದೆ ನಿದ್ದೆ ಇಲ್ಲ ಅಂತ ಕೊರಗೋ ಹಾಗಿಲ್ಲ. ಯಾಕಂದ್ರೆ ಸುಖ ನಿದ್ರೆಗಾಗೇ ಆ್ಯಪ್ ಒಂದು ಬರ್ತಿದೆ. ಆರೆ ನಿದ್ದೆಗೂ ಆ್ಯಪ್ ಆ ಅಂತ ಆಶ್ಚರ್ಯ ಆಗ್ತಿದೀಯಾ.. ಹೂಂ.. ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ‘ಸ್ಲೀಪ್ ಕೋಚರ್’ ಎಂಬ ಆ್ಯಪ್ ವಿನ್ಯಾಸ ಮಾಡ್ತಿದ್ದಾರೆ. ಸುಖ ನಿದ್ದೆಗೆ ಏನು ಅವಶ್ಯತಕತೆಯಿದೆ ಅನ್ನೋದನ್ನ ಈ ಆ್ಯಪ್ ಮಾಡಲಿದೆ.

ಈ ಆ್ಯಪ್ ಮಾರುಕಟ್ಟೆಗೆ ಬಂದ್ರೆ ಎಲ್ಲಾ ಸ್ಮಾರ್ಟ್ ಜನರು ಇದನ್ನು ಬಳಸಿ ತಮ್ಮ ನಿದ್ದೆಯ ಅವಧಿಯನ್ನು ಹೆಚ್ಚಿಸಿಕೊಳ್ಳಬಹುದು. ಕೆಲವೊಮ್ಮೆ ಕಚೇರಿಯಲ್ಲಿ ಕಂಪ್ಯೂಟರ್​ಗಳ ಮುಂದೆ ಕೆಲಸ ಮಾಡುವಾಗ ಅದರಲ್ಲೇ ತಲ್ಲೀನರಾಗಿರ್ತೀವಿ. ನಮಗೆ ಅರಿವಿಲ್ಲದಂತೆ ಹೆಚ್ಚು ಸಮಯ ಕೆಲಸ ಮಾಡ್ತೀವಿ. ಇದರಿಂದ ಆಯಾಸಗೊಂಡು ಸರಿಯಾಗಿ ನಿದ್ದೆ ಮಾಡಲಾಗುವುದಿಲ್ಲ. ಹೆಚ್ಚು ಮೊಬೈಲ್​ನಲ್ಲಿ ಕೆಲಸ ಮಾಡಿದ್ರು ಕಣ್ಣಿಗೆ ಆಯಾಸವಾಗುತ್ತದೆ. ನಿದ್ರೆ ಮಾತ್ರ ಬರುವುದಿಲ್ಲ. ಅಂತವರು ನಿದ್ದೆ ಮಾಡಲು ಕೆಲ ಉಪಾಯಗಳನ್ನು  ಈ ಆ್ಯಪ್ ನಲ್ಲಿದೆ. ನಿದ್ರಾಹೀನತೆಯಿಂದ ಬಳಲುತ್ತಿರುವವರಿಗಾಗೇ ಈ ಆ್ಯಪ್​ನ್ನು ಸಿದ್ಧಪಡಿಸಲಾಗಿದೆ. ಈ ಆ್ಯಪ್​ನ್ನು  ಮೊಬೈಲ್ ಮತ್ತು ಕೆಲಸ ಮಾಡುವ ಕಂಪ್ಯೂಟರ್​ಗೆ ಅಳವಡಿಸಿ ಕೊಂಡರೆ ದೈಹಿಕ ಮತ್ತು ಮಾನಸಿಕ ಆಯಾಸವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುವುದು ಈ ಆ್ಯಪ್ ವಿನ್ಯಾಸಕರ ವಿಶ್ವಾಸ.

ಸುಖ ನಿದ್ರೆ ಮಾಡಲು ಕೆಲ ಸರಳ ವಿಧಾನಗಳು, ಸಲಹೆಗಳನ್ನು ಕೂಡ ಈ ಆ್ಯಪ್​ನಲ್ಲಿ ತಿಳಿಸಲಾಗಿದ್ದು, ಸ್ಮಾರ್ಟ್ ಫೋನ್ ಬಳಕೆದಾರರಿಗೆ ಇದು ವರದಾನವಾಗಲಿದೆ.

Also Read: ಬಿಸಿ ಹಾಲಿಗೆ ಬೆಲ್ಲ ಸೇರಿಸಿ ಸೇವಿಸಿ