ಚುನಾವಣೆ ಹತ್ರ ಬರ್ತಿದ್ದಂತೆ ರಾಜಕೀಯ ಪಕ್ಷಗಳ ನಾಟಕಗಳು ಶುರು, ಈ ಲಿಸ್ಟ್-ಗೆ ಹೊಸ ನಾಟಕ ಸ್ಲಂ ವಾಸ್ತವ್ಯ; ಇದು ನಾಟಕಾನ ಅಥವಾ ನಿಜವಾಗ್ಲೂ ಸ್ಲಂ-ಗಳ ಬಗ್ಗೆ ಕಾಳಜಿ ಇದೆಯೋ?

0
458

ಬೆಂಗಳೂರು: ಚುನಾವಣೆ ಹತ್ರ ಬರುತ್ತಿದ್ದಂತೆ ವೋಟ್ ಬ್ಯಾಂಕ್ ಗಾಗಿ ರಾಜಕೀಯ ಮುಖಂಡರು ಕಸರತ್ತು ನಡೆಸಿದ್ದು, ಬಿಜೆಪಿ ಸ್ಲಂ ವಾಸ್ತವ್ಯದ ಮೊರೆ ಹೋಗಿದ್ದಾರೆ.

 yeddyurappa spend a night in Bangalore slum

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ವಿವಿಧ ಬಿಜೆಪಿ ಮುಖಂಡರು ಶನಿವಾರ ರಾತ್ರಿ ಕೊಳಗೇರಿ ನಿವಾಸಿಗಳ ಮನೆಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ನಗರದ ಲಕ್ಷ್ಮಣಪುರಿ ಸ್ಲಂನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಾಸ್ತವ್ಯ ನಡೆಸಿದರು.

 yeddyurappa spend a night in Bangalore slum

ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ ರಾವ್‌, ಸಂಸದ ಪಿ.ಸಿ.ಮೋಹನ್‌, ಬಿಜೆಪಿ ಸಂಘಟನಾ ಕಾರ್ಯದರ್ಶಿ ರವಿಕುಮಾರ್‌ ಜತೆ ಬಂದ ಯಡಿಯೂರಪ್ಪ ಎಲ್ಲೈ ಮಾರಿಯಮ್ಮನ್‌ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಆಟೋ ಚಾಲಕ ಮುನಿರತ್ನ-ದೀಪಾ ದಂಪತಿ ಮನೆಯಲ್ಲಿ ವಾಸ್ತವ್ಯ ಮಾಡಿದರು. ಬಿಜೆಪಿ ನಾಯಕರನ್ನು ಸ್ಥಳೀಯ ಮಹಿಳೆಯರು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು. ಆರತಿ ಎತ್ತಿ ಶಾಲು ಹೊದಿಸಿ ಸನ್ಮಾನಿಸಿದರು.

 yeddyurappa spend a night in Bangalore slum

ನಂತರ ಸುದ್ದಿಗಾರರ ಜತೆ ಮಾತನಾಡಿದ ಯಡಿಯೂರಪ್ಪ, ”ಈ ಹಿಂದೆ ನಾನು ದಲಿತರ ಮನೆಯಲ್ಲಿ ಉಪಾಹಾರ ಮಾಡಿದಾಗ ಇದೊಂದು ರಾಜಕೀಯ ಗಿಮಿಕ್‌ ಎಂದು ಟೀಕಿಸಿದ್ದರು. ಆದರೆ ಸಿದ್ದರಾಮಯ್ಯನವರೇ ರಾಜ್ಯದಲ್ಲಿ ಗಿಮಿಕ್‌ ಮಾಡುತ್ತಿದ್ದಾರೆ. ಈ ಸರಕಾರ ಸ್ಲಂಗಳ ಅಭಿವೃದ್ಧಿ ಮಾಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಬಗ್ಗೆ ಆದ್ಯತೆ ನೀಡಲಾಗುವುದು. ಸ್ಲಂಗಳಿಗೆ ಮೂಲ ಸೌಕರ‍್ಯ ಒದಗಿಸಲಾಗುವುದು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕೊಳೆಗೇರಿ ಪ್ರದೇಶಗಳಿಗೆ ಕುಡಿಯುವ ನೀರು, ವಿದ್ಯುತ್‌ ಸಂಪರ್ಕ ಕಲ್ಪಿಸಲಾಗುವುದು. ಬೆಂಗಳೂರಿನಲ್ಲಿ ಮಾತ್ರವಲ್ಲ ರಾಜ್ಯದ ಎಲ್ಲ ಜಿಲ್ಲೆಗಳ ಸ್ಲಂನಲ್ಲಿ ನಾನು ವಾಸ್ತವ್ಯ ಮಾಡುತ್ತೇನೆ” ಎಂದು ಹೇಳಿದರು. ಇನ್ನು ಇಷ್ಟೇ ಅಲ್ಲದೇ ರಾಜ್ಯದ ಎಲ್ಲ ಕೊಳೆಗೇರಿಗಳಲ್ಲಿ ವಾಸ್ತವ್ಯ ಮಾಡುತ್ತೇನೆ ಎಂದರು.

Also Read:  ಸಿದ್ದರಾಮಯ್ಯ ಮೋದಿಯಷ್ಟೇ ಸಾಧನೆ ಮಾಡಿದ್ದಾರೆ: ಕಾಗಿನೆಲೆ ಸ್ವಾಮಿಯವರು; ನಿಮಗೂ ಹಾಗೆ ಅನ್ನಿಸುತ್ತಾ??