ಗೂಂಡಾಗಿರಿ ಮಾಡಿದವರ ಹುಟ್ಟಡಗಿಸುತ್ತೇವೆ; ಹೊಸಕೋಟೆ ಜನರಿಗೆ ಎಚ್ಚರಿಕೆ ನೀಡಿದ್ರಾ ಬಿಎಸ್​ವೈ??

0
260

ಉಪ ಚುನಾವಣೆಯ ಅಬ್ಬರದ ಪ್ರಚಾರದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರತಿಯೊಂದು ಕ್ಷೇತ್ರಕ್ಕೆ ಬೇಟಿ ನೀಡಿ ಹುಲಿ ಗರ್ಜನೆ ಮಾಡುತ್ತಿದ್ದಾರೆ. ಅದರಂತೆ ಇಂದು ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಸಿಎಂ ಬಿಎಸ್​ವೈ, ಹೊಸಕೋಟೆಯಲ್ಲಿ ರೌಡಿಸಂ ಹೆಚ್ಚಾಗಿದೆ. ಯಾರೇ ಗೂಂಡಾಗಿರಿ ಮಾಡಿದರೂ ಅವರ ಹುಟ್ಟಡಗಿಸುತ್ತೇವೆ. ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್​ ಅವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ, ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.

Also read: ವಾಹನ ಸವಾರರಿಗೆ ಪೊಲೀಸ್ ಪೇದೆಗಳು ದಂಡ ಹಾಕುವಂತಿಲ್ಲ; ಬೈಕ್ ಸವಾರರನ್ನು ಬಲವಂತವಾಗಿ ನಿಲ್ಲಿಸುವಂತಿಲ್ಲ! ಹೈಕೋರ್ಟ್ ಮಹತ್ವದ ಆದೇಶ.!

ಹೌದು ಹೊಸಕೋಟೆಯಲ್ಲಿ ಉಪ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಸಿಎಂ ಬಿಎಸ್​ವೈ ಎಂಟಿಬಿ ನಾಗರಾಜ್ ಗೆದ್ದಾಗ ವೀರಶೈವ ಸಮುದಾಯ ಹೂವಿನ ಹಾರ ಹಾಕಿ ಸನ್ಮಾನಿಸಿದ್ದಕ್ಕೆ ಸಾರ್ಥಕವಾಯಿತು. ಕಾಂಗ್ರೆಸ್ಸಿಗರು ಅಭಿವೃದ್ಧಿಯ ಮಾತನಾಡುತ್ತಿಲ್ಲ. ರಾಜ್ಯದ ನೆರೆಗೆ ಸರ್ಕಾರ ದಾಖಲೆ ಪ್ರಮಾಣದಲ್ಲಿ ಸ್ಪಂದಿಸಿದೆ. ಎಂಟಿಬಿ ನಾಗರಾಜ್ ಅವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾರ್ಯಕರ್ತರು ಎಂಟಿಬಿ ನಾಗರಾಜ್ ಯಾಕೆ ರಾಜೀನಾಮೆ ನೀಡಿದರು ಎನ್ನುವುದನ್ನು ಜನರಿಗೆ ತಿಳಿಸಿ.ಕಾರ್ಯಕರ್ತರು ನಮ್ಮ ಚುನಾವಣೆ ಎಂದು ಮತದಾರರ ಮನವೊಲಿಸಿ.ದೀನ ದಲಿತರು ಬಡವರು ನಮಗೆ ಅನ್ಯಾಯ ಮಾಡೋದಿಲ್ಲ ಎನ್ನುವ ವಿಶ್ವಾಸ ನಮಗಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಟಿಬಿ ನಾಗರಾಜ್ ಅವರ ಧ್ಯೇಯ.

Also read: ಮಂಡ್ಯದ ಜನರು ನನ್ನನು ಕೈ ಬಿಟ್ಟಿದ್ದಾರೆ, ಮಹಿಳೆಯರನ್ನು ನೋಡಿ ನನಗೆ ಕಣ್ಣೀರು ತುಂಬಿಕೊಂಡಿದ್ದೆ ಎಂದು ಗಳಗಳನೆ ಅತ್ತ ಎಚ್‍ಡಿ ಕುಮಾರಸ್ವಾಮಿ.!

ಈ ಕ್ಷೇತ್ರದಲ್ಲಿ ಮೆಟ್ರೋ, ಏತ ನೀರಾವರಿ, ಕಾವೇರಿಯಂತಹ ಅನೇಕ ಅಭಿವೃದ್ಧಿ ಕೆಲಸ ಮಾಡಬೇಕಿದೆ. ಆ ಬಗ್ಗೆ ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಈ ವೇಳೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್, ಹೊಸಕೋಟೆಯಲ್ಲಿ 5000 ಮನೆಗಳನ್ನು ನಿರ್ಮಾಣ ಮಾಡಬೇಕಾಗಿದೆ. ನಾಡಪ್ರಭು ಕೆಂಪೇಗೌಡರ ವಂಶಸ್ಥರು ಇರುವ ಹೊಸಕೋಟೆ ಅಭಿವೃದ್ಧಿಗೆ ಸರ್ಕಾರ ಕೈ ಜೋಡಿಸಬೇಕು. ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಗಮನ ನೀಡುತ್ತೇನೆ. ನಂದಗುಡಿ ಮತ್ತು ಸೂಲಿಬೆಲೆ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರ ಸಹಾಯ ಮಾಡಬೇಕು ಎಂದು ಕೋರಿದರು. ಅದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಿಗೆ ನೀಡಿದ್ದಾರೆ.

Also read: ಆನ್ಲೈನ್ ಶಾಪಿಂಗ್ ಮಾಡವ ಮುನ್ನ ಎಚ್ಚರ; ಕಡಿಮೆ ಬೆಲೆಗೆ ಸಿಕ್ಕ ಡ್ರೆಸ್​ ಖರೀದಿಸಲು ಹೋಗಿ 80 ಸಾವಿರ ಕಳೆದುಕೊಂಡ ಮಹಿಳೆ.!

ದುಡ್ಡು ಬೇಕಿದ್ದರೆ ಫೋನ್ ಮಾಡಿ, ಕಳಿಸ್ತೀನಿ ಎಲ್ಲ ಅನರ್ಹ ಅಭ್ಯರ್ಥಿಗಳಿಗೆ ಎಷ್ಟು ಹಣ ಬೇಕೋ ಕೇಳಿ. ಎಲ್ಲ ಕಡೆ ಮಂತ್ರಿಗಳನ್ನ ಬಿಟ್ಟು ನೀವು ಚುನಾವಣೆ ಮುಗಿಸಿಯೇ ಬನ್ನಿ. ಮಂತ್ರಿಗಳಿಗೂ ಹಣ ಬೇಕಿದ್ದರೆ ಅಲ್ಲಿಂದಲೇ ಫೋನ್ ಮಾಡಿ ನಾನು ಕಳುಹಿಸ್ತೀನಿ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ ಎಂದು ಆರೋಪಿಸಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‍ವೈ ಎಷ್ಟು ದುಡ್ಡು ಸಾಗಿಸಿದರೂ ಯಾರು ಕೇಳಲ್ಲ. ಅದಕ್ಕೆ 15ಕ್ಕೆ 15 ಗೆಲ್ಲುತ್ತೀನಿ ಅಂತಿದ್ದಾರೆ. ಬಿಎಸ್‍ವೈ ಬಳಿ ಸರ್ಕಾರ, ಗುಪ್ತವಾರ್ತೆ ಇದೆ. ಆರ್ಥಿಕವಾಗಿ ಶಕ್ತಿಯಿದೆ ಅದಕ್ಕಾಗಿ ಎಷ್ಟು ಹಣ ಬೇಕು ಹೇಳಿ ಎಂದು ಅನರ್ಹ ಅಭ್ಯರ್ಥಿಗಳಲ್ಲಿ ಬಿಎಸ್‍ವೈ ಹೇಳಿದ್ದಾರೆ. ಅಷ್ಟೇ ಅಲ್ಲದೆ ಎಲ್ಲ ಕಡೆ ಮಂತ್ರಿಗಳನ್ನ ಬಿಟ್ಟು ನೀವು ಚುನಾವಣೆ ಮುಗಿಸಿ ಬನ್ನಿ. ಹಾಗೆಯೇ ಮಂತ್ರಿಗಳಿಗೂ ಹಣ ಬೇಕಿದ್ದರೆ ಫೋನ್ ಮಾಡಿ ನಾನು ಕಳುಹಿಸ್ತಿನಿ ಎಂದಿದ್ದಾರೆ. ಇಷ್ಟೆಲ್ಲ ಇರಬೇಕಾದ್ರೆ ನಾವೇನು ಮಾಡೋಕಾಗುತ್ತದೆ. ಬಿಎಸ್‍ವೈ ದುಡ್ಡಿನಿಂದ ಚುನಾವಣೆ ಮಾಡುತ್ತಿದ್ದಾರೆ ಅಂತ ಮಾಜಿ ಪ್ರಧಾನಿ ಆರೋಪಿಸಿದ್ದಾರೆ.