ಭಾರತ- ಬಾಂಗ್ಲಾ ಗಡಿಯಲ್ಲಿ ಗೋ ಸಾಗಣಿಕೆಗೆ ಕಳ್ಳರ ಮಾಸ್ಟರ್ ಮೈಂಡ್; ನದಿಯಲ್ಲಿ ಧನಗಳನ್ನ ಸಾಗಿಸುವುದ್ದನ್ನು ಕಂಡು ಬೆಚ್ಚಿಬಿದ್ದ ಯೋಧರ ವಿಡಿಯೋ ವೈರಲ್..

0
119

ದೇಶದಲ್ಲಿ ಗೋ ಸಾಗಾಣಿ ದಂದೆ ಜೋರಾಗಿದ್ದು, ಇದರ ವಿರುದ್ಧ ಹಲವು ಹೋರಾಟಗಳು ಹಲ್ಲೆಗಳು ನಡೆಯುತ್ತಾನೆ ಇವೆ. ದೇಶದಲ್ಲಿ ಮಾತ್ರವಲ್ಲದೆ ಅನ್ಯದೇಶಗಳಿಗೂ ಗೋ ಮಾಂಸ ಮತ್ತು ಜೀವಂತ ಹಸುಗಳನ್ನು ಸಾಗಿಸುತಿದ್ದಾರೆ ಎನ್ನುವುದು ಕೇಳಿ ಬರುತ್ತಿತು, ಅಂತಹ ಪ್ರಕರಣವೊಂದು ಪತ್ತೆಯಾಗಿದ್ದು ಬಿಎಸ್‌ಎಫ್ ಯೋಧರು ನದಿಯಲ್ಲಿ ಜಾನುವಾರಗಳನ್ನು ಸಾಗಿಸುವುದ್ದನ್ನು ಪತ್ತೆ ಹಚ್ಚಿದ್ದು, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಅದು ದೇಶ್ಯಾದಂತ ಬಾರಿ ವೈರಲ್ ಆಗಿದೆ.

ನದಿಯಲ್ಲಿ ಗೋ ಸಾಗಣಿ?

ದೇಶದ ಗೋ ಗಳನ್ನೂ ಬಾಂಗ್ಲಾದೇಶ, ಮತ್ತು ಪಾಕಿಸ್ತಾನಕ್ಕೆ ಸಾಗಿಸುತ್ತಾರೆ. ಇದರ ವಿರುಧ್ಧ ಎಷ್ಟೇ ನಿಗಾವಹಿಸಿದರು ಕೂಡಾ ಹಸು ಸಾಗಾಟ ನಡೆಯುತ್ತಾನೆ ಇದೆ. ಅದರಂತೆ ಭಾರತ- ಬಾಂಗ್ಲಾದೇಶ ಗಡಿಯಲ್ಲಿ, ನಡೆಯುತ್ತಿದ್ದ ಗೋ ಸಾಗಣೆಯನ್ನು ತಡೆಯುವ ಮೂಲಕ ಬಿಎಸ್‌ಎಫ್ ಯೋಧರೊಬ್ಬರು ಭಾರಿ ಪ್ರಶಂಸೆ ಪಡೆದಿದ್ದಾರೆ. ಗಡಿಯಲ್ಲಿ ಗೋ ಸಾಗಣೆಗೆ ಕಳ್ಳರು ಬಳಸಿದ್ದ ಖತರ್ನಾಕ್ ಪ್ಲಾನ್ ನೋಡಿದ ಭಾರತೀಯ ಯೋಧರು ಒಂದು ಕ್ಷಣ ದಿಗ್ಬ್ರಾಂತರಾಗಿದ್ದಾರೆ. ಹಲವು ಬಾರಿ ಭಾರತೀಯ ಯೋಧರು ತಡೆಯುವಲ್ಲಿ ಸಫಲರಾಗಿದ್ದಾರೆ. ಈ ಭಾರಿ ಅವರಿಗೆ ಆಶ್ಚರ್ಯ ಎದುರಾಗಿತ್ತು. ಪಾಪಿಗಳು ಎರಡು ದನಗಳಿಗೆ ಕಾಲುಗಳನ್ನು ಕಟ್ಟಿ, ತಲೆಯನ್ನು ಬಾಳೆದಿಂಡಿನಲ್ಲಿ ತೂರಿಸಿ, ನದಿ ಮೂಲಕ ದನಗಳನ್ನು ಸಾಗಿಸಲಾಗುತ್ತಿತ್ತು. ಅವುಗಳನ್ನು ಕಂಡ ಯೋಧರು ಅವುಗಳನ್ನು ರಕ್ಷಿಸುವ ಮೂಲಕ ಮಾನವೀಯತೆ ಮರೆದಿದ್ದಾರೆ. ಭಾರತ- ಬಾಂಗ್ಲಾ ಗಡಿ ಗೋ ಸಾಗಣೆಗೆ ಕುಖ್ಯಾತವಾಗಿದೆ. ಅಲ್ಲಿ ಆಗಾಗ ಗೋ ಕಳ್ಳರಿಗೂ, ಸೈನಿಕರಿಗೂ ಜಟಾಪಟಿಯಾಗುತ್ತಿರುತ್ತದೆ.

ಮೋದಿ ಸರಕಾರದ ಮೊದಲ ಅವಧಿಯಲ್ಲಿ ಗೃಹ ಸಚಿವರಾಗಿದ್ದ ರಾಜನಾಥ್ ಸಿಂಗ್ ಬಿಎಸ್ಎಫ್ ಯೋಧರಿಗೆ ಗೋ ಕಳ್ಳರ ವಿರುದ್ಧ ಕ್ರಮ ಕೈಗೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಬಳಿಕ ಕಳ್ಳ ಸಾಗಾಣಿಕೆಯಲ್ಲಿ ಇಳಿಕೆಯಾಗಿದೆ. ಆದರೆ ಸಂಪೂರ್ಣವಾಗಿ ಇನ್ನು ನಿಯಂತ್ರಣಕ್ಕೆ ಬಂದಿಲ್ಲ. ಬೇರೆ ಬೇರೆ ಮಾರ್ಗೋಪಾಯಗಳ ಮೂಲಕ ಕಳ್ಳರು ತಮ್ಮ ಕೃತ್ಯವನ್ನು ಮುಂದುವರಿಸಿದ್ದಾರೆ. ಅದರಂತೆ ಅನ್ಯ ರಾಜ್ಯಗಳಿಗೆ- ದೇಶಗಳಿಗೆ ಗೋ ಸಾಗಾಣಿಕೆ ಮಾಡಿದರೆ ಡೈರೆಕ್ಟ್ ಆಗಿ ಸಿಗುವುದು ಪಕ್ಕ ಎಂದು ಧನಗಳನ್ನು ಕಡಿದು ಅದರ ಮಾಂಸವನ್ನು ಅಪಾರ ಪ್ರಮಾಣದಲ್ಲಿ ಸಾಗಿಸುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದಿವೆ.

ಇನ್ನೂ ಕೆಲವು ಅಂತು ನೀರಿನ ಟ್ಯಾಂಕ್, ಪೆಟ್ರೋಲ್ ಟ್ಯಾಂಕ್, ಸೇರಿದಂತೆ ಹಲವು ರೀತಿಯಲ್ಲಿ ಗೋ ಮಾಂಸವನ್ನು ಸಾಗಿಸುತ್ತಿದ್ದಾರೆ. ಇವರ ವಿರುದ್ದ ಹಲವು ಗೋ ರಕ್ಷಕ ದಳಗಳು ಪಾಪಿಗಳನ್ನು ಹಿಡಿದು ತಲಿಸಿದ್ದಾರೆ. ಎರಡು ದಿನಗಳ ಹಿಂದೆಯೇ ಮಹಾರಾಷ್ಟ್ರಕ್ಕೆ ಜಾನುವಾರುಗಳನ್ನು ಸಾಗಿಸುತ್ತಿದ್ದ 25 ಜನರನ್ನು ಖಲ್ವಾಸ್ ಪ್ರಾಂತ್ಯದ ಸಾನ್ವಲಿಖೇಡ ಗ್ರಾಮಸ್ಥರು ಭಾನುವಾರ ಹಿಡಿದಿದ್ದಾರೆ. ಬಳಿಕ ಅವರನ್ನು ಹಗ್ಗದಿಂದ ಕಟ್ಟಿದ್ದ ಗ್ರಾಮಸ್ಥರು, ಮೊಣಕಾಲೂರಿ ಕಿವಿ ಹಿಡಿದು ಕುಳಿತುಕೊಳ್ಳುವಂತೆ ಆರೋಪಿಗಳಿಗೆ ಹೇಳಿದರು. ಈ ವೇಳೆ ಅವರಿಗೆ ಥಳಿಸಿ, ಗೋ ಮಾತಾ ಕಿ ಜೈ ಎಂದು ಹೇಳುವಂತೆ ಒತ್ತಾಯಿಸಿದ್ದಾರೆ. ಹೀಗೆ ಪ್ರತಿನಿತ್ಯವೂ ಹಲವು ಕಡೆಯಲ್ಲಿ ಗೋ ಸಾಗಾಣಿಕೆ ಮಾಡುವರನ್ನು ಹಿಡಿದು ಶಿಕ್ಷಿಸಿದರು ಮತ್ತೆ ಇತಂಹ ಕೃತ್ಯವನ್ನು ಮಾಡುತ್ತಿದ್ದಾರೆ.