ಭಾರತ ಪ್ರವೇಶಿಸಲು ಗಡಿಯಲ್ಲಿ ಕಾದಿರುವ ೧೦೦ ಉಗ್ರರು!

0
566

ನವದೆಹಲಿ: ಪಾಕಿಸ್ತಾನದ ಪ್ರಧಾನಿ ನವಾಜ್ ಷರಿಷ್ ಭಾರತದ ಸರ್ಜಿಕಲ್ ದಾಳಿಗೆ ತಿರುಗೇಟು ನೀಡುತ್ತೇವೆ ಎಂದು ಸಂಸತ್ ನಲ್ಲಿ ಹೇಳಿಕೆ ನೀಡಿದ ಬೆನ್ನಲ್ಲೇ ೧೦೦ ಉಗ್ರರು ಭಾರತ ಪ್ರವೇಶಿಸಲು ಸಜ್ಜಾಗಿರುವ ಆಘಾತ ಕಾರಿ ಅಂಶ ಬೆಳಕಿಗೆ ಬಂದಿದೆ.

ಪಾಕಿಸ್ತಾನದ ಗಡಿ ಎಲ್ ಒಸಿಯಲ್ಲಿ ರಾತ್ರೊರಾತ್ರಿ ಕಾರ್ಯಾಚರಣೆ ನಡೆಸಿದ ಭಾರತೀಯ ಯೋಧರು ೭ ಉಗ್ರರ ತಾಣ ಧ್ವಂಸಗೊಳಿಸಿ ೩೮ ಉಗ್ರರು ಹಾಗೂ ೯ ಪಾಕ್ ಸೈನಿಕರನ್ನು ಹತ್ಯೆಗೈಸಿತ್ತು. ಈ ವಿಷಯ ಇನ್ನೂ ಚರ್ಚೆಯ ಹಂತದಲ್ಲಿರುವಾಗಲೇ ಪಾಕ್ ದೊಡ್ಡ ಪ್ರಮಾ ಣದಲ್ಲಿ ಮತ್ತೊಂದು ದುಷ್ಕ್ರತ್ಯಕ್ಕೆ ಸಜ್ಜಾಗಿದೆ.
ಸೆಪ್ಟೆಂಬರ್ ೨೯ರ ದಾಳಿಯಲ್ಲಿ ೧೨ ಪೊಲೀಸರು ಮೃತ ಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸರು ವಾದಿಸುತ್ತಿ ದ್ದಾರೆ. ಇದೆಲ್ಲದರ ನಡುವೆ ಪಾಕ್ ಸೈನಿಕರು ೧೦೦ ಉಗ್ರರನ್ನು ಜಮ್ಮು-ಕಾಶ್ಮೀರದ ಗಡಿಯಲ್ಲಿ ನುಗ್ಗಿಸಲು ವ್ಯವಸ್ಥಿತ ಸಂಚು ರೂಪಿಸುತ್ತಿದೆ.

ಈ ಉಗ್ರರು ಭಾರತೀಯ ಸೇನಾ ನೆಲೆ, ನಿರ್ದಿಷ್ಟಪಡಿಸಿದ ನಾಗರೀಕರು ಹಾಗೂ ಇನ್ನಿತರ ಕೇಂದ್ರಗಳನ್ನು ಗುರಿ ಯಾಗಿಸಿಕೊಂಡಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

international-border
ಭಾರತದ ಸೀಮಿತ ದಾಳಿ ನಂತರ ಕೂಡ ಭಾರತ ಹಲವಾರು ಕಡೆ ಕಾರ್ಯಾಚರಣೆ ನಡೆಸಿದ್ದು, ಲಿಪಾ, ಖೆಲ್, ಬರ್ಮಾಪುರ್ ಮುಂತಾದ ಕಡೆಗಳಲ್ಲಿ ಉಗ್ರರನ್ನು ಹತ್ಯೆಗೈದಿದೆ.