ಬಿಎಸ್ ಎನ್ ಎಲ್ ನಿಂದ ಬಂಪರ್ ಡೇಟಾ ಆಫರ್

0
1435

ಜಿಯೋ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಬಿಎಸ್‍ಎನ್‍ಎಲ್ ಇದೀಗ ಅತ್ಯಂತ ಅಗ್ಗದ ದರದಲ್ಲಿ ಮತ್ತೊಂದು ಆಫರ್ ನೀಡಿದೆ.

ಬಿಎಸ್ಎನ್ಎಲ್  ಸ್ಪೆಷಲ್ ಟಾರೀಫ್ ವೋಚರ್ ಅಡಿ ಬಿಎಸ್‍ಎನ್‍ಎಲ್ ಕೇವಲ 36ರೂಪಾಯಿಗೆ 1 ಜಿಬಿ ಡೇಟಾ ನೀಡಲಿದೆ.

ಅಲ್ಲದೇ 291 ಪ್ಲಾನ್ ಬಳಸುತ್ತಿರುವ ಗ್ರಾಹಕರಿಗೆ ಇಲ್ಲಿಯವರೆಗೆ 2 ಜಿಬಿ ಡೇಟಾ ಸಿಗುತ್ತಿತ್ತು. ಇನ್ನು ಮುಂದೆ ಈ ಪ್ಲಾನ್ ಬಳಸುವವರಿಗೆ 28 ದಿನಗಳವರೆಗೆ 8 ಜಿಬಿ ಡೇಟಾ ಸಿಗಲಿದೆ. 78 ರೂ. ಪ್ಲಾನ್ ಬಳಸುವ ಗ್ರಾಹಕರಿಗೆ ಡಬಲ್ ಡೇಟಾ ನೀಡಲು ಬಿಎಸ್‌ಎನ್‌ಎಲ್ ಮುಂದಾಗಿದ್ದು, 78 ಪ್ಲಾನ್ಗೆ 2 ಬಿಜಿಯಿಂದ 4 ಜಿಬಿ ಡೇಟಾ ಸಿಗಲಿದೆ.

36ರೂಪಾಯಿಗೆ 1 ಜಿಬಿ ನೀಡುವುದು ಟೆಲಿಕಾಂ ಇಂಡಸ್ಟ್ರಿಯಲ್ಲಿ ಅತೀ ಕಡಿಮೆ ಬೆಲೆ ಆಫರ್ ಎಂದು ಬಿಎಸ್‍ಎನ್‍ಎಲ್ ಹೇಳಿದೆ. ರಿಲಾಯನ್ಸ್ ಜಿಯೋ ಮಾರ್ಚ್ 31 2017 ರವರೆಗೆ ಗ್ರಾಹಕರಿಗೆ ಉಚಿಚ 4ಜಿ ಸೇವೆ ಆಫರ್ ನೀಡಿದೆ. 1 ಜಿಬಿ ಬಳಕೆ ನಂತರ ಇಂಟರ್ ನೆಟ್ ಸೇವೆ ನಿಧಾನಗೊಳ್ಳಲಿದೆ.