ಜಿಯೋವಿನ ಏಳಿಗೆಗೆ ಮೋದಿ ಸರ್ಕಾರ ಬಿಎಸ್ಎನ್ಎಲ್ ಅನ್ನು ಬಲಿ ಕೊಡುತ್ತಿದೆಯೇ??

0
278

ಗಗನದಲ್ಲಿ ಹಾರಡುತ್ತಿದೆ ಜಿಯೋ ನೆಲ ಕಚ್ಚಿದ ಬಿಎಸ್ಎನ್ಎಲ್;

ದೇಶದಾದ್ಯಂತ ಟೆಲಿಕಾಂ ಜಗತ್ತಿನಲ್ಲಿಯೇ ಹೊಸ ಅಲೆ ಸೃಷ್ಟಿಸಿದ ಜಿಯೋ ದಿನದಿಂದ ದಿನಕ್ಕೆ ತನ್ನ ಖ್ಯಾತಿಯನ್ನು ಹೆಚ್ಚಿಸಿಕೊಳ್ನುತ್ತಿದೆ. ಆದರೆ ಇತ್ತ ಏರ್ಟೆಲ್, ವೊಡಾಫೋನ್, ಐಡಿಯಾ ಟೆಲಿಕಾಂ ಕಂಪನಿಗಳು ಜಿಯೋ ವಿರುದ್ಧ ಸಮರ ಸಾರಿ ಮತ್ತಷ್ಟು ಮೊಗೆದಷ್ಟು ಆಫರ್’ಗನ ಸುಕಿಮಳೆಯನ್ನೇ ಕರೆಯುತ್ತಿವೆ. ಇನ್ನು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಗೆ ಭಾರೀ ಹೊಡೆತ ಬಿದ್ದಿದ್ದು, ಲಾಭ ಎಂಬುದು ಮರೀಚಿಕೆಯಾಗಿದೆ.

Also read: ಇನ್ಮೇಲೆ ಮೆಟ್ರೋ ರೈಲಿನ ಟಿಕೆಟ್-ಗೆ ಕ್ಯೂ ನಿಲ್ಲ ಬೇಕಿಲ್ಲ, ನಿಮ್ಮ ಸ್ಮಾರ್ಟ್-ಫೋನ್ ಇಂದಾನೆ ಬುಕ್ ಮಾಡಬಹುದು…

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಿಯೋ ಏಳಿಗೆಗೆ ಶ್ರಮಿಸುತ್ತಿದೆ. ಬಿಎಸ್ಎನ್ಎಲ್ ಅನ್ನು ಸಂಪೂರ್ಣ ಖಾಸಗೀಕರಣಗೊಳಿಸಲು ಯತ್ನಿಸುತ್ತಿದೆ. ಇದರಿಂದ ಬಿಎಸ್ಎನ್ಎಲ್ ಅನ್ನು ಮೋದಿ ಸರ್ಕಾರ ಬಲಿ ಕೊಡುತ್ತಿದೆಯೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಸರಕಾರದ ಟೆಲಿಕಾಂ ಸಂಸ್ಥೆಯಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ದಿನದಿನಕ್ಕೂ ತನ್ನ ಲಾಭವನ್ನು ಕಳೆದುಕೊಳ್ಳುತ್ತಿದೆ. ಬಿಎಸ್ಎನ್ಎಲ್’’ನಿಂದ ಲಾಭ ನಿರೀಕ್ಷಿಸುವುದು ಕಷ್ಟ ಸಾಧ್ಯ; ಮಾರುಕಟ್ಟೆಯಲ್ಲಿ ಬಿಎಸ್ಎನ್ಎಲ್ ಗೆ ಯಶಸ್ಸು ಎಂಬುದು ಮರೀಚಿಕೆಯಾಗಿದೆ ಎಂದು ಫೆಡರಲ್ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

Also read: ಸಾವಿರಾರು ಕೋಟಿ ಒಡತಿಯಾಗಿದ್ದರೂ ಸಾಮಾನ್ಯರಂತೆ ಮೈಸೂರು ಮಾರುಕಟ್ಟೆಗೆ ಭೇಟಿ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರರಾದ ಸುಧಾ ಮೂರ್ತಿ!!

ಬಿಎಸ್ಎನ್ಎಲ್’’ ಅನ್ನು  ಸರ್ಕಾರ ಮಾರುವ ಮುನ್ನ ಲಾಭ ಪಡೆಯುವವರೆಗೂ ತಾಳ್ಮೆಯಿಂದಿರಬೇಕು. ಕಂರೆನಿಯ ಲಾಭದ ಕಡೆ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅನುಪಮ್ ಶ್ರೀವಾಸ್ತವ ಹೇಳಿದ್ದಾರೆ. ಆದಾಗ್ಯೂ, ಕಳೆದ ಎಂಟು ವರ್ಷಗಳಲ್ಲಿ ಕಂಪೆನಿಯು 7 ಶತಕೋಟಿ ಡಾಲರ್ಗಳಷ್ಟು ನಷ್ಟ ಅನುಭವಿಸಿದೆ. ಇದು ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ನಂತರ ದೇಶದ ಅತಿದೊಡ್ಡ ನಷ್ಟವನ್ನು ಉಂಟುಮಾಡುವ ರಾಜ್ಯದ ಕಂಪನಿ ಇದಾಗಿದೆ. ಇದಕ್ಕೆಲ್ಲಾ ಕಾರಣ ರಿಲಯನ್ಸ್ ಜಿಯೋದ ಆಫರ್ ಮತ್ತು ಉಚಿತ ಸೇವೆಗಳು ಎಂದು ಶ್ರೀವಾಸ್ತವ ತಿಳಿಸಿದರು.

Also read: #MeToo ಅಭಿಯಾನ: ಲೈಂಗಿಕ ಕಿರುಕುಳದ ಗಂಭೀರ ಆರೋಪ ಎದುರಿಸುತ್ತಿರುವ ಕೇಂದ್ರ ಮಂತ್ರಿ ಎಂ.ಜೆ.ಅಕ್ಬರ್-ರವರಿಂದ ಮೋದಿ ರಾಜಿನಾಮೆ ಕೇಳಬೇಕಲ್ಲವೇ??

ಈಗಾಗಲೇ ಜನರು 4 ಜಿ ಸಂಪರ್ಕದಲ್ಲಿದ್ದಾರೆ.. ಆದರೆ ಬಿಎಸ್ಎನ್ಎಲ್ ಇನ್ನು 3 ಜಿ ಹಾಗೂ ಲ್ಯಾಂಡ್’ಲೈನ್ ಸಂಪರ್ಕದ ಸೇವೆಗೆ ಗ್ರಾಹಕರನ್ನು ಸೆಳೆಯುತ್ತಿದೆ. ಬಿಲಿಯನೇರ್ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಬೆಂಬಲದೊಂದಿಗೆ ಜಿಯೋ ಕೇವಲ ಬಿಎಸ್ಎನ್ಎಲ್ ಮಾತ್ರವಲ್ಲ, ಇಡೀ ಟೆಲಿಕಾಂ ಕ್ಷೇತ್ರಲನ್ನೇ ನಲುಗಿಸಿದೆ ಎಂದರು. ಇದೆಲ್ಲದರ ನಡುವೆ ಏರ್‌‌ಟೆಲ್, ವೊಡಾಫೋನ್ ಮತ್ತು ಐಡಿಯಾ ಕಂಪೆನಿಗಳು ಈಗಾಗಲೇ ದರ ಸಮರಕ್ಕೆ ಇಳಿದಿದ್ದು, ಗ್ರಾಹಕರಿಗೆ ಮತ್ತಷ್ಟು ಸೌಲಭ್ಯಗಳನ್ನು ಕಡಿಮೆ ದರದಲ್ಲಿ ನೀಡುತ್ತಿವೆ.