ಬಿಎಸ್​ಎನ್​ಎಲ್​ ಇಲಾಖೆ, ಮ್ಯಾನೇಜ್ಮೆಂಟ್ ಟ್ರೈನಿ 300 ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
588

ಉದ್ಯೋಗದ ನಿರಿಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಭಾರತ್ ಸಂಚಾರ್ ನಿಗಮ್ (ಬಿಎಸ್ಎನ್ಎಲ್) ಇಲಾಖೆ ಮ್ಯಾನೇಜ್ಮೆಂಟ್ ಟ್ರೈನಿ 300 ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಜನವರಿ 26, 2019 ರ ಒಳಗೆ ಅರ್ಜಿ ಸಲ್ಲಿಸಬೇಕು.


Also read: ಕೆಪಿಎಸ್‌ಸಿ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ 381 ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

  • ಹೆದ್ದೆಯ ಹೆಸರು: ಮ್ಯಾನೇಜ್ಮೆಂಟ್ ಟ್ರೈನಿ.
  • ಅರ್ಜಿ ಸಲ್ಲಿಕೆಯ ಪ್ರಾರಂಭ ದಿನಾಂಕ: 26 ಡಿಸೆಂಬರ್ 2018.
  • ಅರ್ಜಿ ಕೊನೆಯ ದಿನಾಂಕ – ಜನವರಿ 26, 2019.
  • ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಶೇ.60 ರಷ್ಟು ಅಂಕಗಳೊಂದಿಗೆ ಟೆಲಿಕಮ್ಯುನಿಕೇಷನ್​, ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನ , ಎಲೆಕ್ಟ್ರಾನಿಕ್ಸ್​ ಕಂಪ್ಯೂಟರ್ / ಐಟಿ ಎಲೆಕ್ಟ್ರಿಕಲ್​ನಲ್ಲಿ ಪದವಿ ಮಾಡಿರಬೇಕು.(ಅಭ್ಯರ್ಥಿಗಳು ಹೆಚ್ಚುವರಿಯಾಗಿ MBA ಅಥವಾ MTech ಪದವಿ ಹೊಂದಿರಬೇಕು).


Also read: ಭಾರತೀಯ ವಾಯುಪಡೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿಯ ಪ್ರಕಟಣೆ..

  • ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 30 ವರ್ಷ ದಾಟಿರಬಾರದು. ಜೊತೆಗೆ ಸರ್ಕಾರದ ನಿಯಮಗಳಿಗನುಸಾರ ಮೀಸಲಾತಿ ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
  • ವೇತನ: ಈ ಹುದ್ದೆಗಳಿಗೆ ಇಲಾಖೆಯು ಮಾಸಿಕ ಸಂಬಳ ತಿಂಗಳಿಗೆ 24,900 ರಿಂದ 50,500 ವರೆಗೆ ನೀಡಲಿದೆ. ಅಲ್ಲದೆ ಐಡಿಎ, ಎಚ್ಆರ್​ಎ, ವೈದ್ಯಕೀಯ ಪ್ರಯೋಜನಗಳ ಅನುಕೂಲವನ್ನು ಕಂಪೆನಿಯು ಒದಗಿಸಲಿದೆ.
  • ನೇಮಕಾತಿ ಪ್ರಕ್ರಿಯೆ: ಈ ಹುದ್ದೆಗಳಿಗೆ ಆನ್​ಲೈನ್​ ಮೂಲಕ ಪರೀಕ್ಷೆಗಳಿರಲಿದೆ. ಅಲ್ಲದೆ ಗ್ರೂಪ್ ಡಿಸ್ಕಶನ್ ಮತ್ತು ಇಂಟರ್​ವ್ಯೂ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ:

ಮ್ಯಾನೇಜ್ಮೆಂಟ್​ ಟ್ರೈನಿ ಹುದ್ದೆಗಳಿಗೆ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಬಿಎಸ್ಎನ್​ಎಲ್​ ಅಧಿಕೃತ ವೆಬ್​​ಸೈಟ್​ bsnl.co.in.ನಲ್ಲಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿಗಾಗಿ: http://www.externalbsnlexam.com ಈ ಲಿಂಕ್​ನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.