ಬಿಎಸ್‌ಎನ್‌ಎಲ್‌ ನಿಂದ 3 ಹೊಸ ಕೊಡುಗೆ

0
763

ನವದೆಹಲಿ: ಬಿಎಸ್‌ಎನ್‌ಎಲ್ ಸಂಸ್ಥೆಯು ₹333 ರಿಂದ ₹395 ದರದಲ್ಲಿ ಮೂರು ಹೊಸ ಕೊಡುಗೆಗಳನ್ನು ಘೋಷಿಸಿದೆ.

ಈ ಕೊಡುಗೆಗಳಲ್ಲಿ ಒಂದು ದಿನಕ್ಕೆ 3 ಜಿಬಿವರೆಗೆ ಡೇಟಾ ಬಳಕೆ ಮತ್ತು ಅನಿಯಮಿತ ಕರೆ ಸೌಲಭ್ಯವನ್ನು ನೀಡಿದೆ.  ಕೊಡುಗೆ ಅವಧಿ 90 ದಿನಗಳಿಗೆ ಸೀಮಿತ.

‘ಟ್ರಿಪಲ್‌ ಏಸ್‌’ ಕೊಡುಗೆಯಲ್ಲಿ ₹333ಕ್ಕೆ 90 ದಿನಗಳ ಅವಧಿ ಇದ್ದು, 3 ಜಿಬಿವರೆಗೆ 3ಜಿ ವೇಗದಲ್ಲಿ ಅನಿಯಮಿತ ಡೇಟಾ ಸಿಗಲಿದೆ.

‘ದಿಲ್‌ ಖೋಲ್‌ಕೆ ಬೋಲ್‌’ ಕೊಡುಗೆಯಲ್ಲಿ ₹349 ಪಾವತಿಸಿದರೆ ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳು ಮತ್ತು ಪ್ರತಿ ದಿನ 3ಜಿ ವೇಗದಲ್ಲಿ 2ಜಿಬಿ ಡೇಟಾ ಸಿಗಲಿದೆ (ಪ್ರತಿ ಸೆಕೆಂಡ್‌ಗೆ 80ಕಿಲೊ ಬೈಟ್‌ನಂತೆ).

‘ನೇಲೆ ಪೆ ದೇಲಾ’ ಕೊಡುಗೆಯಲ್ಲಿ ₹395 ಪಾವತಿಸಿದರೆ ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ಗೆ 3,000 ನಿಮಿಷಗಳ ಕರೆ ಮತ್ತು ಬೇರೆ ನೆಟ್‌ವರ್ಕ್‌ಗಳಿಗೆ 1,800 ನಿಮಿಷದ ಕರೆ ಸೌಲಭ್ಯವಿದೆ. ‘3ಜಿ ’ ವೇಗದಲ್ಲಿ ಪ್ರತಿ ದಿನ 2ಜಿಬಿ ಡೇಟಾ ಬಳಸಬಹುದು. ಅವಧಿ 71 ದಿನ.

ಜಿಯೋ ಮಾರುಕಟ್ಟೆ ಪ್ರವೇಶದಿಂದ  ಕರೆ ಮತ್ತು ಡೇಟಾಕ್ಕೆ ಸಂಬಂಧಿಸಿದಂತೆ  ಸೇವಾದಾತ ಸಂಸ್ಥೆಗಳ ಮಧ್ಯೆ ದರ ಸಮರ ಆರಂಭವಾಗಿದೆ. ಗ್ರಾಹಕರನ್ನು ಆಕರ್ಷಿಸಲು ಎಲ್ಲಾ ಸಂಸ್ಥೆಗಳು ಹೊಸ ಕೊಡುಗೆಗಳನ್ನು ನೀಡಲಾರಂಭಿಸಿವೆ.