M.com, CA, ICWA ಪದವೀಧರರಿಗೆ ಬಿಎಸ್‌ಎನ್‌ಎಲ್ ನಲ್ಲಿ ಭರ್ಜರಿ ಉದ್ಯೋಗ ಅವಕಾಶ..!!

0
611

ಭಾರತ್ ಸಂಚಾರ್ ನಿಗಮ್ ನಿಯಮಿತ(ಬಿಎಸ್ಎನ್ಎಲ್) ಜ್ಯೂನಿಯರ್ ಅಕೌಂಟ್ ಅಧಿಕಾರಿಗಳ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಿ ಪ್ರಕಟಣೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಒಟ್ಟು ಹುದ್ದೆಗಳ ಸಂಖ್ಯೆ 996. ಕರ್ನಾಟಕದಲ್ಲಿ 62 ಹುದ್ದೆಗಳಿಗೆ ಅವಕಾಶವಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15/10/2017

ಬಿಎಸ್ಎನ್ಎಲ್ ನೇಮಕಾತಿ ಹುದ್ದೆಗಳ ವಿವರ

ಜ್ಯೂನಿಯರ್ ಅಕೌಂಟ್ಸ್ ಅಧಿಕಾರಿ-996 ಹುದ್ದೆಗಳು (ಭಾರತದಾದ್ಯಂತ, ಕರ್ನಾಟಕದಲ್ಲಿ 62)

ವೇತನ ಶ್ರೇಣಿ:
ರೂ.16400 – 40500/- ಪ್ರತಿ ತಿಂಗಳಿಗೆ

ವಿದ್ಯಾರ್ಹತೆ:
ಜ್ಯೂನಿಯರ್ ಅಕೌಂಟ್ಸ್ ಆಫೀಸರ್ಸ್ ಹುದ್ದೆಗೆ ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳು ಎಂ.ಕಾಂ/ಸಿಎ/ ಐಸಿಡಬ್ಲ್ಯೂಎಯನ್ನು ಮಾನ್ಯತೆ ಪಡೆದಿರುವ ವಿದ್ಯಾಸಂಸ್ಥೆ/ ವಿಶ್ವವಿದ್ಯಾಲಯಗಳಿಂದ ಪಡೆದಿರತಕ್ಕದ್ದು.

ವಯೋಮಿತಿ:
ಜನವರಿ 1, 2017ರಂತೆ 20 ರಿಂದ 30ರ ವಯಸ್ಸಿನೊಳಗಿರಬೇಕು. ಮೀಸಲಾತಿಗೆ ಒಳಪಡುವವರಿಗೆ ಸರ್ಕಾರಿ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.

ಅರ್ಜಿ ಶುಲ್ಕ
ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ರೂ.1000/-
ಪ.ಜಾ/ಪ.ಪಂ/ಅಂಗವಿಕಲ ಅಭ್ಯರ್ಥಿಗಳಿಗೆ ರೂ.500/-

ಆಯ್ಕೆ ವಿಧಾನ
ಬಿಎಸ್ಎನ್ಎಲ್ ವತಿಯಿಂದ ಆನ್-ಲೈನ್ ಪರೀಕ್ಷೆ ನಡೆಸುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಶೈಕ್ಷಣಿಕ ಅರ್ಹತೆ, ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ ವೈಯಕ್ತಿಕ ಸಂದರ್ಶನ ಹಾಗೂ ದಾಖಲೆಗಳ ಪರಿಶೀಲನೆ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ