ಬಿಎಸ್​ವೈ ಕೊಟ್ರಲಪ್ಪ ಕೈ…!

0
1260

ಕಾವೇರಿ ವಿಚಾರ ಬಂದ್ರೆ ಕನ್ನಡಿಗರಿಗೆ ಅದೇನೋ ಸ್ವಾಭಿಮಾನ ಉಕ್ಕಿ ಅರಿಯುತ್ತೆ, ತೀರಾ emotional ಆಗಿಬಿಡ್ತಿವಿ, ಕನ್ನಡಿಗರಿಂದ ತಮಿಳುನಾಡಿನ ‘ಅಮ್ಮ’ ನ ಮೇಲೆ ಮೊದಲ ನಮ್ಮ ಬೈಗುಳದ ಚಾಟಿ ಏಟು ಬೀಳುತ್ತೆ ಅಲ್ವಾ…? ಕೆಲವೊಮ್ಮೆ ಕಾವೇರಿ ವಿಚಾರಕ್ಕೆ ಪ್ರಾಣಾನೇ ಕೊಡೊ ಮಟ್ಟಕ್ಕೂ ಹೋಗಿಬಿಡ್ತೇವೆ !! ನಾನೇಕೆ ಹೀಗೆಲ್ಲ ಹೇಳುತ್ತಿದ್ದೇನೆ ಅನ್ನೋದು ನಿಮಗೆ ತಿಳಿಯದಿರುವ ವಿಚಾರವೇನಲ್ಲ. ನಮಗೆ ಕಾವೇರಿ ಜೀವ ನಾಡಿ, ನಮ್ಮೆಲ್ಲರ ಉಸಿರು.

ನಿಮಗೆ ಗೊತ್ತಿರುವ ಹಾಗೆ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ನಿಮ್ಮ ಮನಸ್ಸಿನ ಮೂಲೆಯಲ್ಲಿ ಒಂದು ಪ್ರೆಶ್ನೆ ಉದ್ಬವವಾಗಿರಬಹುದು, ಇಷ್ಟೆಲ್ಲಾ ಗಲಾಟೆಗಳು ನೆಡೆದರು, ರೈತರು ಕಣ್ಣೀರ ಕೂಡಿ ಹರಿಸುತ್ತಿದ್ದರೂ, ಪ್ರತಿಭಟನೆಯಲ್ಲಿ ಇಬ್ಬರ ಪ್ರಾಣ ಪಕ್ಷಿ ಹಾರಿ ಹೋದರೂ, ಈ so ಕಾಲ್ಡ್ ಬಿಜೆಪಿ ಲೀಡರ್ಸ್ ಪತ್ತೆ ಇಲ್ವಲ್ಲ, ಏಕೆ…? ಎಂಬುದು

ಕಾವೇರಿ ಎಂಬ ದಾಳ ಹಿಡಿದು ರಾಜಕೀಯ ಮಾಡಲು ಹೊರಟಿರುವ ಬಿಜೆಪಿ ಮಂದಿ ಕಾಂಗ್ರೆಸ್ಸನ್ನು ಮುಂಬರುವ ಚುನಾವಣೆಯಲ್ಲಿ ದೂಳೀಪಟ ಮಾಡಿಯೇ ತೀರಬೇಕು ಎಂದು ಶಪಥಗೈದಂತೆ ಕಾಣುತ್ತಿದ್ದೆ, ಅತ್ತ ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬಗ್ಗೆ ತಲೆಕೆಡಿಸಿಕೊಂಡು ಕಾವೇರಿಯನ್ನು ಮರೆತಿದ್ದರೆ, ಇತ್ತ ಬಿಎಸ್ವೈ “ಕೇಂದ್ರಕ್ಕೂ ಕಾವೇರಿಗೂ ಯಾವುದೇ ಸಂಬಂಧವಿಲ್ಲ, ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ. ವಿಧಾನಮಂಡಲದಲ್ಲಿ ಸಿಎಂ ನಿರ್ಧಾರವನ್ನು ಬೆಂಬಲಿಸುತ್ತೇವೆ ” ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿ ಸುಮ್ಮನಾಗಿಬಿಟ್ಟಿದ್ದಾರೆ.

ಅಲ್ಲ ಬಿಎಸ್ವೈ ಸಾಹೇಬ್ರೆ, ಕುಮಾರಸ್ವಾಮಿ ತನಗೆ ಮೋಸ ಮಾಡಿದರೆಂದು ಅಲವತ್ತುಕೊಂಡು ಅಧಿಕಾರ ಗಿಟ್ಟಿಸಿದ್ದ ನೀವು, ಇಂದು ನೀವೇ ಇವತ್ತು ಇಡೀ ರಾಜ್ಯಕ್ಕೆ ವಂಚನೆ ಮಾಡಿದಿರಲ್ಲ..!! ಅದು ಅಲ್ಲದೆ, ನೀವು ನಿಮ್ಮ ಬಿಜೆಪಿ ಮಹಾದಾಯಿ ಯೋಜನೆಯ ಅನುಷ್ಠಾನಕ್ಕೆ ಅಡ್ಡ ಬಂದಿರಿ… ಒಂದು ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಯೋಜನೆ ಅನುಷ್ಠಾನವಾದ್ರೆ, ಅದು ಕಾಂಗ್ರೆಸ್ಸಿಗೆ ವರದಾನವಾಗಲಿದೆ” ಎಂದು ಮೋದಿಯ ತಲೆಯಲ್ಲಿ ಹುಳ ಬಿಟ್ಟವರು ಬಿಜೆಪಿಯವರೇ ತಾನೇ…?

Newsism ತಂಡದ ಕಳಕಳಿಯ ಪ್ರಾರ್ಥನೆ ಇನ್ನಾದರೂ ರಾಜಕೀಯ ಬಿಟ್ಟು ಕನ್ನಡಿಗರ ಕಷ್ಟಕ್ಕೆ ಕಿವಿ ಕೊಡಿ, ನಿಮಗೂ ಗೊತ್ತಿದೆ, ಈಗ ಕಾವೇರಿ ವಿಷಯದಲ್ಲಿ ಏನಾಗುತ್ತಿದೆ ಎಂದು ಕರ್ನಾಟಕ ನೋಡುತ್ತಿದೆ. ಜಾತಿ-ಧರ್ಮ, ಪ್ರಾಂತ್ಯ-ಪಂಗಡಗಳನ್ನು ಮೀರಿ ಒಂದಾಗಬೇಕು ಕನ್ನಡಿಗರು. ನಮ್ಮದನ್ನು ನಾವು ಉಳಿಸಿಕೊಳ್ಳಲು ಯಾರ ಅಪ್ಪಣೆ ಬೇಕಿಲ್ಲ. ಪಕ್ಷಬೇಧ ಮರೆತು ನಾವೆಲ್ಲರೂ ಒಂದಾಗಬೇಕು.

-ಗಿರೀಶ್ ಗೌಡ