ಯಡಿಯೂರಪ್ಪ ಪತ್ನಿ ಅನುಮಾನಾಸ್ಪದ ಸಾವಿನ ಬಗ್ಗೆ ಎಚ್ ಡಿಕೆ ಪ್ರಸ್ತಾಪ; ಇನ್ನು ಎರಡ್ಮೂರು ತಿಂಗಳಲ್ಲಿ ಬಿಎಸ್‌ವೈ ಸರ್ಕಾರ ಪತನ ಕುಮಾರಸ್ವಾಮಿ ಭವಿಷ್ಯ.!

0
184

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಎಸ್ ಯಡಿಯೂರಪ್ಪ ಸರ್ಕಾರದ ವಿರುದ್ಧ ನಾಲ್ಕು ಸ್ಪೋಟಕ ಹೇಳಿಕೆಗಳನ್ನು ನೀಡಿದ್ದು. ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ “ಯಾವುದೇ ಸಮಯದಲ್ಲಿ ಕುಸಿಯಬಹುದು, ಏಕೆಂದರೆ ಈ ಸರ್ಕಾರ ಯಾವ ಮಾರ್ಗದಲ್ಲಿ ಸಾಗುತ್ತಿದೆ, ಮತ್ತು ಅದರ ನಡವಳಿಕೆಯನ್ನು ನೋಡುತ್ತಾ, ಹೋದರೆ ಸರ್ಕಾರವು ಯಾವುದೇ ಸಮಯದಲ್ಲಿ ಬಿಳ್ಳಬಹುದು ಎಂದು ಚನ್ನಪಟ್ಟಣದಲ್ಲಿ ಭವಿಷ್ಯ ನುಡಿದಿದ್ದು, ಹೆಂಡತಿಯನ್ನು ಕೊಂದವರು ಅಧಿಕಾರ ಮಾಡುತ್ತಿದ್ದಾರೆ ಎನ್ನುವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ.

Also read: ತೆರೆಗೆ ಬರಲಿದೆ ಕಾಂಗ್ರೆಸ್ ಟ್ರಬಲ್ ಶೂಟರ್, ಕನಕಪುರ ಬಂಡೆ ಡಿ.ಕೆ ಶಿವಕುಮಾರ್ ಜೀವನಾಧಾರಿತ ಚಿತ್ರ?

ಹೌದು ಎಚ್‌.ಡಿ.ಕುಮಾರಸ್ವಾಮಿ, ರಾಜ್ಯ ಬಿಜೆಪಿ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಹೇಳುವುದಕ್ಕೆ ಜ್ಯೋತಿಷ್ಯ ಯಾಕೆ ಬೇಕು ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಸರ್ಕಾರದ ಆಯುಷ್ಯದ ಬಗ್ಗೆ ಕೋಡಿ ಮಠದ ಶ್ರೀಗಳು ನುಡಿದಿರುವ ಭವಿಷ್ಯದ ಬಗ್ಗೆ ಮಂಡ್ಯ ಜಿಲ್ಲೆಯ ಚನ್ನಪಟ್ಟಣ ಹಾಗೂ ಮೈಸೂರುಗಳಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಾನೇನು ಜ್ಯೋತಿಷಿಯಲ್ಲ. ನಾನು ಆಶಾವಾದಿ, ನಿರಾಶವಾದಿಯಲ್ಲ. ಸರ್ಕಾರ ಹೆಚ್ಚು ದಿನ ಇರುವುದಿಲ್ಲ, ಸದ್ಯದಲ್ಲೇ ನಿಮಗೆ ಎಲ್ಲಾ ವಿಚಾರ ತಿಳಿಯಲಿದೆ. ಸರ್ಕಾರದ ನಡವಳಿಕೆ ನೋಡಿದರೇ ಈ ಸರ್ಕಾರ ಸ್ಥಿರವಲ್ಲ ಎಂದು ತಿಳಿಯುತ್ತದೆ. ಕಾದು ನೋಡಿ ಎಂದರು.

ಚನ್ನಪಟ್ಟಣದಲ್ಲಿ ಇಂದು ಮಾತನಾಡಿರುವ ಕುಮಾರಸ್ವಾಮಿ, ನನಗೆ ಯಾವ ಇಡಿ, ಐಟಿ ದಾಳಿಯ ಬಗ್ಗೆಯೂ ಭಯವಿಲ್ಲ. ನಾನು ಪಾಪದ ಹಣ ಸಂಪಾದಿಸಿದ್ದರೆ ಭಯ ಪಡಬೇಕಾಗಿತ್ತು. ಆದರೆ, ಆ ರೀತಿ ನಾನು ಮಾಡಿಲ್ಲವಾದ್ದರಿಂದ ನನಗೇನೂ ಭಯವಿಲ್ಲ ಎಂದು ಹೇಳಿದ್ದಾರೆ. ನನ್ನ ಬಳಿಯೂ ಪಾಪದ ಹಣ ಇದ್ದಿದ್ದರೆ ಮೈತ್ರಿ ಸರ್ಕಾರದ ಶಾಸಕರನ್ನು ರಾಜೀನಾಮೆ ಕೊಡದಂತೆ ಹಿಡಿದಿಟ್ಟುಕೊಳ್ಳುತ್ತಿದ್ದೆ. ಈಗಿನ ರಾಜಕಾರಣ ನೋಡಿದರೆ ಇದರ ಸಹವಾಸವೇ ಬೇಡ ಅನ್ನಿಸುತ್ತದೆ. ಬಡವರ ನೋವಿಗೆ ಸ್ಪಂದಿಸಬೇಕೆಂಬ ಒಂದೇ ಕಾರಣಕ್ಕೆ ನಾನು ರಾಜಕೀಯದಲ್ಲಿದ್ದೇನೆ ಎಂದಿದ್ದಾರೆ.

Also read: ದೇಶದ ಆರ್ಥಿಕತೆ ಏರಿಕೆಗೆ ನಿರ್ಮಲಾ ಸೀತಾರಾಮನ್ ಪ್ಲಾನ್ ಸಕ್ಸಸ್; ದಾಖಲೆ ಬರೆದ ಸೆನ್ಸೆಕ್ಸ್, ಒಂದೇ ದಿನ 5 ಲಕ್ಷ ಕೋಟಿ ಲಾಭ

ಯಡಿಯೂರಪ್ಪ ಸಿಎಂ ಆಗಿದ್ದಾಗ ಬೆಸ್ಕಾಂನಲ್ಲಿ ಭಾರೀ ಹಗರಣ ನಡೆದಿತ್ತು. ಹಗರಣದ ತನಿಖೆ ಮಾಡಿಸಿ ಎಂದು ಡಿ.ಕೆ. ಶಿವಕುಮಾರ್​ ಅವರಿಗೆ ಹೇಳಿದ್ದೆ. ಆದರೆ, ಯಡಿಯೂರಪ್ಪನವರ ವಿರುದ್ಧ ಡಿಕೆಶಿ ತನಿಖೆ ಮಾಡಿಸಿರಲಿಲ್ಲ. ಅದೇ ಡಿಕೆಶಿ ವಿರುದ್ಧ ಐಟಿ ದಾಳಿ ಮಾಡಲು ಯಡಿಯೂರಪ್ಪ 2 ವರ್ಷದ ಹಿಂದೆ ಪತ್ರ ಬರೆದಿದ್ದರು. ಯಡಿಯೂರಪ್ಪನವರನ್ನು ರಕ್ಷಿಸಿದ್ದಕ್ಕೆ ಡಿಕೆ ಶಿವಕುಮಾರ್​ಗೆ ಈ ಸ್ಥಿತಿ ಬಂದಿತು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಬಿಎಸ್ ವೈ ಪತ್ನಿಯ ಸಾವು ಅನುಮಾನಾಸ್ಪದ

Also read: ಹಲವು ನಿರಾಶೆಗಳ ನಂತರ ಉಕ್ರೇನ್‌ನಲ್ಲಿ ಅರೆ-ಕ್ರಯೋಜೆನಿಕ್ ಎಂಜಿನ್ ಪರೀಕ್ಷೆಗೆ ಮುಂದಾದ ಇಸ್ರೋ; ಏನಿದು ಕ್ರಯೋಜೆನಿಕ್ ಎಂಜಿನ್??

“ಒಂದಡಿಗೆ ಒಂದಡಿ ಇರುವ ನೀರಿನ ಟ್ಯಾಂಕ್ ನಲ್ಲಿ ಕಾಲು ಜಾರಿ ಬಿದ್ದು, ಸಾಯುವಂಥದ್ದು ಉಂಟೇನ್ರೀ? ಅಂಥದ್ದೇ ಜನ ಮೆಚ್ಚಿಕೊಂಡಿದ್ದಾರೆ. ಆ ರೀತಿ ಮಾಡಿದವರಿಗೆ ಕಾಲ ಇದು. ಅವರು ಇದೀಗ ದೇಶ ಕಾಯುವವರು, ರಾಜ್ಯ ಕಾಯುವವರು” ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಅವರು ನೀರಿನ ಸಂಪ್ ನಲ್ಲಿ ಬಿದ್ದು ಮೃತಪಟ್ಟ ವಿಚಾರವನ್ನು ನೇರವಾಗಿ ಪ್ರಸ್ತಾವ ಮಾಡದೆ, ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು ನಾನು ಸಿಎಂ ಆದ ಸಂಧರ್ಭದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿದ್ದೇನೆ. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಉತ್ತಮ ಶಿಕ್ಷಣ ತೃಪ್ತಿ ತಂದಿಲ್ಲ. ಕೆಲ ರಾಜಕಾರಣಿಗಳು ಭಾಷಣಕ್ಕೆ ಮಾತ್ರ ಮೀಸಲಾಗಿದ್ದಾರೆ. ಉದ್ಯೋಗ ಸೃಷ್ಟಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದಾರೆ. ಓದಿದ ಮಕ್ಕಳಿಗೆ ಉದ್ಯೋಗ ನೀಡುವಲ್ಲಿ ವಿಫಲರಾಗಿದ್ದೇವೆ. ನಾನು ಸಿಎಂ ಆಗಿದ್ದು ಕೆಲವರಿಗೆ ಸಹಿಸಲು ಆಗಲಿಲ್ಲ. ಎಂದು ಹೇಳಿಕೆ ನೀಡಿದ್ದಾರೆ.