ಈ ಪೊಲೀಸ್ ಪೇದೆಗೆ ಒಂದು ಸಲ್ಯೂಟ್

0
1036

ಕಟ್ಟುನಿಟ್ಟಾಗಿ ನಿಯಮ ಪಾಲಿಸುವ ಪೊಲೀಸರು ಕಟುಕರಲ್ಲ , ಅವರಲ್ಲೂ ಹೃದಯವಂತಿಕೆ ಮನೆಮಾಡಿರುತ್ತದೆ ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಈ ಘಟನೆಯನ್ನು ಕಣ್ಣಾರೆ ಕಂಡಿರುವ ವ್ಯಕ್ತಿಯೊಬ್ಬರು ಬೆಂಗಳೂರು ಟ್ರಾಫಿಕ್ ಪೊಲೀಸ್ ಗೆ ಪಾತ್ರ ಬರೆದಿದ್ದರೆ, ಇಂಥ ಪೊಲೀಸರನ್ನು ನೇಮಕ ಮಾಡಿದ್ದಕ್ಕಾಗಿ ಇಲಾಖೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.

ಹೈಗ್ರೌಂಡ್ಸ್ ಟ್ರಾಫಿಕ್ ಪೊಲೀಸ್ ಆಗಿರುವ ಮಿ. ಕುಮಾರ್ ಈ ವ್ಯತಿ. ಇಂತಹ ಪೇದೆ ತಯಾರು ಮಾಡಿರುವ ಬೆಂಗಳೂರು ಪೊಲೀಸ್ ಗೆ ನಮ್ಮ ವಂದನೆ ಅಂತ ಹೇಳಿದರೆ.

4746c7ec-9dbf-437d-8912-ea31b23c94b9

ನವೆಂಬರ್ 9ರ ಮುಂಜಾನೆ 7.30ರಿಂದ 7.45ರ ಸುಮಾರಿಗೆ, ಗೋಲ್ಫ್ ಕೋರ್ಸ್ ಹತ್ತಿರವಿರುವ ವಿಂಡ್ಸರ್ ಮ್ಯಾನರ್ ವೃತ್ತದ ಬಳಿ ಮಹಿಳೆಯೊಬ್ಬರು ನನ್ನನ್ನು ತಡೆದರು. ಆ ಮಹಿಳೆಯನ್ನು ಅವರ ಮಕ್ಕಳೊಂದಿಗೆ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಕಾರಿನ ಡ್ರೈವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಅದೇ ಸಮಯದಲ್ಲಿ, ಇನ್ನಿಬ್ಬರು ಸಂಚಾರಿ ಪೊಲೀಸರನ್ನು ಕೂಡ ಕರೆದು, ಅವರಲ್ಲಿ ಕುಮಾರ್ ಅವರ ಸಹಾಯವನ್ನು ಯಾಚಿಸಿದರು.

ಕೂಡಲೆ ಕಾರ್ಯತತ್ಪರರಾದ ಕುಮಾರ್, ಡ್ರೈವರನ್ನು ಪಕ್ಕದ ಸೀಟಿನಲ್ಲಿ ಕುಳ್ಳಿರಿಸಿ ತಾವು ಡ್ರೈವರ್ ಸ್ಥಾನಕ್ಕೆ ಬಂದರು. ಸ್ವಲ್ಪವೂ ತಡಮಾಡದೆ ಹತ್ತಿರದಲ್ಲೇ ಇರುವ ಮಲ್ಲಿಗೆ ಆಸ್ಪತ್ರೆಗೆ ಕಾರನ್ನು ತೆಗೆದುಕೊಂಡು ಹೋದರು. ನಡೆದುದ್ದನ್ನು ಸಂಕ್ಷಿಪ್ತವಾಗಿ ಆಸ್ಪತ್ರೆ ಸಿಬ್ಬಂದಿಗೆ ವಿವರಿಸಿದರು. ತುರ್ತುನಿಗಾ ಘಟಕದ ಸಿಬ್ಬಂದಿ ಡ್ರೈವರನ್ನು ಪರೀಕ್ಷಿಸಿ ಹೃದಯ ನಿಗಾ ಘಟಕಕ್ಕೆ ಕರೆದುಕೊಂಡು ಹೋದರು.

 

ಇಷ್ಟಕ್ಕೆ ಸುಮ್ಮನಾಗದೆ ಕುಮಾರ್ ಅವರು ಹೃದಯ ನಿಗಾ ಘಟಕಕ್ಕೆ ತೆರಳಿ ಕೂಡಲೆ ಚಿಕಿತ್ಸೆ ಆರಂಭಿಸುವಂತೆ ಸೂಚಿಸಿದರು. ಹಣ ಕಟ್ಟಲು ಡ್ರೈವರ್ ಕುಟುಂಬಸ್ಥರು ಅಲ್ಲಿಲ್ಲದಿದ್ದರಿಂದ ಚಿಕಿತ್ಸೆ ನಿಲ್ಲಬಾರದು. ಆಗತ್ಯಬಿದ್ದರೆ ತಾವೇ ಖರ್ಚನ್ನು ಭರಿಸುವುದಾಗಿ ಆಸ್ಪತ್ರೆ ಸಿಬ್ಬಂದಿಗೆ ಕುಮಾರ್ ತಿಳಿಸಿದರು. ಡ್ರೈವರ್ ಮನೆಯವರಿಗೆ ಫೋನ್ ಮಾಡಿ ಶಾಂತವಾಗಿ ಮತ್ತು ಸಂಕ್ಷಿಪ್ತವಾಗಿ ನಡೆದುದ್ದನ್ನು ವಿವರಿಸಿದರು ಮತ್ತು ಗಾಬರಿಯಾಗಬಾರದೆಂದು ತಿಳಿಸಿದರು.