ಮಾರ್ಚ್ 15ಕ್ಕೆ ರಾಜ್ಯ ಬಜೆಟ್ ಮಂಡನೆ: ಸಿಎಂ

0
470

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮಾರ್ಚ್ 15ಕ್ಕೆ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಮಾರ್ಚ್ 15 ರಿಂದ ಮಾರ್ಚ್ 28ರ ವರೆಗೆ ಬಜೆಟ್ ಅಧಿವೇಶನ ನಡೆಯಲಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ 4ನೇ ಆಯವ್ಯಯ ಮಂಡಿಸಲಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಗೆ ಇನ್ನೂ 14 ತಿಂಗಳಷ್ಟೇ ಬಾಕಿಯಿರುವುದರಿಂದ ಬಜೆಟ್ ಚುನಾವಣೆ ಪೂರಕವಾಗಿದೆ.

2016-17 ನೇ ಸಾಲಿನಲ್ಲಿ. 1.63 ಲಕ್ಷ ಕೋಟಿ ಮೊತ್ತದ ಬಜೆಟ್ ಸಿದ್ದರಾಮಯ್ಯ ಮಂಡಿಸಲಿದ್ದಾರೆ. 2ಲಕ್ಷ ಕೋಟಿ ಬಜೆಟ್ ಗಾತ್ರವಾಗಲಿದೆ.

ಸಿದ್ದರಾಮಯ್ಯ ರೈತರ ಸಾಲಮನ್ನಾ ಯೋಜನೆ ಬಜೆಟ್ ನಲ್ಲಿ ತರುವ ಉದ್ದೇಶ ಹೊಂದಿದ್ದಾರೆ. ಇದರಿಂದ ಬರದಿಂದ ಕಂಗೆಟ್ಟಿರುವ ರೈಐತರಿಗೆ ರೀಲೀಫ್ ಸಿಗಲಿದೆ, ಒಟ್ಟಾರೆ 12ನೇ ಬಜೆಟ್ ಅನ್ನು ಸಿದ್ದರಾಮಯ್ಯ ಮಂಡಿಸುತ್ತಿದ್ದಾರೆ.