ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಆಫರ್; ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ನಗದು ರಹಿತ ಹೆಚ್ಚುವರಿ ಚಿಕಿತ್ಸೆಗೆ ರಾಜ್ಯ ಆರೋಗ್ಯ ಇಲಾಖೆ ಆದೇಶ..

0
246

ರಾಜ್ಯ ಸರ್ಕಾರ ತನ್ನ ನೌಕರರಿಗೆ ವಿಶೇಷ ಕೊಡುಗೆಯನ್ನು ನೀಡಿದ್ದು, ಕಾಯಿಲೆಗಳಿಗೆ ತುತ್ತಾದ ನೌಕರರು ಹಾಗೂ ಕುಟುಂಬದವರು ಹಣವಿಲ್ಲದೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಈ ಯೋಜನೆಯಿಂದ ಜ್ಯೋತಿ ಸಂಜೀವಿನಿ’ ಮತ್ತು ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಒದಗಿಸುತ್ತಿರುವ ಹೆಚ್ಚುವರಿ ಚಿಕಿತ್ಸಾ ವಿಧಾನಗಳನ್ನು ಸೇರಿಸಲಾಗಿದೆ. ಇದರಿಂದ ಸರ್ಕಾರೀ ನೌಕರರಿಗೆ ಹಣವಿಲ್ಲದೆ ಮೂರನೆ ಹಂತದ ಚಿಕಿತ್ಸೆ ದೊರೆಯುತ್ತದೆ.

Also read: ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಭತ್ಯೆಯಲ್ಲಿ 5 ಪಟ್ಟು ಹೆಚ್ಚಳ..

ಹೌದು ರಾಜ್ಯ ಆರೋಗ್ಯ ಇಲಾಖೆಯ ಆದೇಶದಂತೆ ಗಂಭೀರ ಹಾಗೂ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾದ ರಾಜ್ಯ ಸರ್ಕಾರಿ ನೌಕರರಿಗೆ 2014ರಿಂದ ‘ಜ್ಯೋತಿ ಸಂಜೀವಿನಿ’ ಯೋಜನೆಯಡಿ ತೃತೀಯ ಹಂತದ 449 ಗಂಭೀರ ಹಾಗೂ ಮಾರಣಾಂತಿಕ ಕಾಯಿಲೆಗಳ ಚಿಕಿತ್ಸೆ , 50 ತುರ್ತು ಚಿಕಿತ್ಸಾ ವಿಧಾನದ ಸೇವೆ ಪಡೆಯುತ್ತಿದ್ದ ಸರ್ಕಾರಿ ನೌಕರರಿಗೆ ರಾಜ್ಯ ನಗದು ರಹಿತ ಚಿಕಿತ್ಸೆ ನೀಡಲು ಮುಂದಾಗಿದ್ದು, ಇದರಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆಯಲ್ಲಿ ಗುರುತಿಸಿರುವ 900 ತೃತೀಯ ಹಂತದ ಚಿಕಿತ್ಸಾ ವಿಧಾನ ಹಾಗೂ 169 ತುರ್ತು ಚಿಕಿತ್ಸಾ ವಿಧಾನಗಳನ್ನು ‘ಜ್ಯೋತಿ ಸಂಜೀವಿನಿ’ ಯೋಜನೆಯಡಿ ನಗದು ರಹಿತವಾಗಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

Also read: ಇನ್ಮೇಲಿಂದ ಜ್ಯೋತಿ ಸಂಜೀವಿನಿ ಯೋಜನೆಯಡಿ ಸರ್ಕಾರಿ ನೌಕರರು ಹಾಗು ಅವರ ಕುಟುಂಬದವರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ಪಡೆಯಬಹುದು!!

ಈ ಹಿಂದೆ ರಾಜ್ಯ ನೌಕರರಿಗೆ ಹೃದ್ರೋಗ, ಕ್ಯಾನ್ಸರ್‌, ನರರೋಗ, ಮೂತ್ರಪಿಂಡದ ಕಾಯಿಲೆ, ಸುಟ್ಟಗಾಯ, ಗಂಭೀರ ಸ್ವರೂಪದ ಅಪಘಾತ ಮತ್ತು ಚಿಕ್ಕ ಮಕ್ಕಳ ಕಾಯಿಲೆಗಳಿಗೆ ಸಂಬಂಧಿಸಿದ ಒಟ್ಟು ಏಳು ಬಗೆಯ ತೃತೀಯ ಹಂತದ ಸಂಕೀರ್ಣ ಅನಾರೋಗ್ಯ ಸಮಸ್ಯೆಗಳ 449 ಚಿಕಿತ್ಸಾ ವಿಧಾನ ಅಥವಾ 50 ತುರ್ತು ಪ್ರಕರಣಗಳಿಗೆ ಜ್ಯೋತಿ ಸಂಜೀವಿನಿ ಯೋಜನೆ ಪ್ರಕಾರ ನಗದು ರಹಿತ ಚಿಕಿತ್ಸೆ ನೀಡಲಾಗುತ್ತಿತ್ತು. ಅದರಂತೆ ನವೆಂಬರ್‌ 15, 2018ರಂದು ಕೇಂದ್ರ ಸರ್ಕಾರದ ಆಯುಷ್ಮಾನ್‌ ಭಾರತ್‌ ಯೋಜನೆಯೊಂದಿಗೆ ಆರೋಗ್ಯ ಕರ್ನಾಟಕ ಯೋಜನೆ ಸೇರಿಕೊಂಡು ‘ಆಯುಷ್ಮಾನ್‌ ಭಾರತ್‌- ಆರೋಗ್ಯ ಕರ್ನಾಟಕ’ ಯೋಜನೆಯಾಗಿ ಬದಲಾಗಿದೆ. ಈ ಯೋಜನೆಯಲ್ಲಿ 1614 ಪ್ರಥಮ ಹಾಗೂ ದ್ವಿತೀಯ ಹಂತದ ಚಿಕಿತ್ಸಾ ವಿಧಾನ, 900 ತೃತೀಯ ಹಂತದ ಚಿಕಿತ್ಸಾ ವಿಧಾನ, 169 ತುರ್ತು ಚಿಕಿತ್ಸಾ ವಿಧಾನ ಲಭ್ಯವಿದೆ.

ಸರ್ಕಾರ ಹೊಸದಾಗಿ ಜಾರಿಗೆ ತಂದ ಯೋಜನೆಗಳಲ್ಲಿ ಹೆಚ್ಚುವರಿ ಚಿಕಿತ್ಸೆಗಳು ಹಾಗೂ ಮೊದಲಿದ್ದ ದರಗಳನ್ನು ಜ್ಯೋತಿ ಸಂಜೀವಿನಿ ಯೋಜನೆಯಡಿ ಅಳವಡಿಸಿಕೊಳ್ಳಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಸಲ್ಲಿಸಿದ್ದ ಪ್ರಸ್ತಾವನೆಗೆ ಆರೋಗ್ಯ ಇಲಾಖೆ ಹಸಿರು ನಿಶಾನೆ ತೋರಿಸಿದೆ. ಇದರಿಂದ ಈ ಎಲ್ಲ ಹೊಸ ಯೋಜನೆಗಳು ಜಾರಿ ಮಾಡಿದೆ ಈ ಯೋಜನೆಗಳ ಅನುಷ್ಠಾನದ ಬಗ್ಗೆ ಸದ್ಯದಲ್ಲೇ ನಿಯಮಗಳನ್ನು ಪ್ರಕಟಿಸಲಾಗುವುದು ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು.

Also read: ಮೋದಿ ಸರಕಾರದ ಅಟಲ್ ಪಿಂಚಣಿ ಮೂಲಕ ಕೇವಲ ಸರ್ಕಾರಿ ನೌಕರರಲ್ಲದೇ ಬೇರೆಯವರೂ ಹೇಗೆ ತಿಂಗಳಿಗೆ ಸಾವಿರಾರು ರುಪಾಯಿ ಪಿಂಚಣಿ ಪಡೆಯಬಹುದು ಎಂದು ಓದಿ!!

ಕನಿಷ್ಟ ಪ್ರತಿ ಏಳು ಚಿಕಿತ್ಸೆಗಳಿಗೂ ಪ್ರತ್ಯೇಕ ಪ್ಯಾಕೇಜ್‌ ದರವನ್ನು ಸರ್ಕಾರ ನಿಗದಿಪಡಿಸಿದ್ದು, ನೋಂದಾಯಿತ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಸಿಗಲಿದೆ. ಇದರಲ್ಲಿ ಸಮಾಲೋಚನೆ, ತಪಾಸಣೆ, ಚಿಕಿತ್ಸಾ ವೆಚ್ಚ, ಆಹಾರ, ಆಸ್ಪತ್ರೆಯ ವೆಚ್ಚ, ಔಷಧಗಳು ಮತ್ತು ನಂತರದ ಸೇವೆಗಳನ್ನು 10 ದಿನಗಳವರೆಗೆ ಇರುತ್ತದೆ. ಇಂಪ್ಲಾಂಟ್ಸ್‌, ಸ್ಟೆಂಟ್‌ ಅಳವಡಿಕೆಗಳಿಗೆ ನಿಗದಿಯಾಗಿರುವ ಗರಿಷ್ಠ ಮಿತಿಯನ್ನು ಮೀರಿದಲ್ಲಿ ಹೆಚ್ಚಿನ ಹಣವನ್ನು ನೌಕರರು ಕಟ್ಟಬೇಕಾಗುತ್ತದೆ. ಎಂದು ಎಸ್‌ಎಎಸ್‌ಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯಾರಿಗೆ ಈ ಸೌಲಭ್ಯ?

ಸರ್ಕಾರ ನೀಡಿರುವ ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಫಲಾನುಭವಿಗಳು ರಾಜ್ಯ ಸರಕಾರದ ನೌಕರರಾಗಿರಬೇಕು.
ನೌಕರರು ಸರಕಾರದ ಸೇವಾ ನಿಯಮಾವಳಿಗಳ ಅಡಿಯಲ್ಲಿ ಬರುವ ಅವರ ಕುಟುಂಬದ ಅವಲಂಬಿತ ಸದಸ್ಯರು ಈ ಯೋಜನೆಯ ಸೌಲಭ್ಯ ಪಡೆಯಬಹುದು.
ನೌಕರರ ಹೆಂಡತಿ ಅಥವಾ ಗಂಡ, ತಂದೆ ಮತ್ತು ತಾಯಿ, ಮಲತಾಯಿ, ಮಕ್ಕಳು, ದತ್ತು ಮಕ್ಕಳು ಮತ್ತು ಮಲ ಮಕ್ಕಳಾಗಿದ್ದರೆ ಇವರು ಸಂಪೂರ್ಣವಾಗಿ ನೌಕರನಿಗೆ ಅವಲಂಬಿತವಾಗಿರಬೇಕು.

Also read: ನಕಲಿ ದಾಖಲಾತಿ ಮಾಡಿಸಿಸುವವರೆ ಎಚ್ಚರ! ಸಿಕ್ಕಿಬಿದ್ದ ಈ ಸರ್ಕಾರಿ ನೌಕರರಿಗೆ ಕೆಲಸವೂ ಇಲ್ಲ, ಡಿಗ್ರಿಯೂ ರದ್ದಾಗಿದೆ..

ಸರ್ಕಾರ ತಿಳಿಸಿರುವ ಎಲ್ಲಾ ವಿವರಗಳು ಸರಕಾರಿ ನೌಕರನಿಂದ ದೃಢೀಕರಿಸಲ್ಪಟ್ಟಿರಬೇಕು. ನೌಕರರು ಬೇರೆ ಇನ್ನಾವುದೇ ಸರಕಾರಿ ಪ್ರಾಯೋಜಿತ ಯೋಜನೆಯ ಫಲಾನುಭವಿಯಾಗಿದ್ದಲ್ಲಿ ಈ ಯೋಜನೆಯ ಲಾಭ ಪಡೆಯಲು ಅನರ್ಹನಾಗಿರುತ್ತಾರೆ.