ವಿಜಯದಶಮಿಯಂದು ಪೂಜಿಸುವ ಬನ್ನಿಯ ಮಹತ್ವ; ಬನ್ನಿಯ ಜನ್ಮ: ಮತ್ತು ಶಮಿ ವೃಕ್ಷದ ಪೌರಾಣಿಕ ಹಿನ್ನೆಲೆ..

0
1322

ಭಾರತದಾದ್ಯಂತ ಬನ್ನಿಗೆ ವಿಶೇಷ ಮಹತ್ವವಿದೆ. ಬನ್ನಿಯನ್ನು ಶುಭದ ಸಂಕೇತವೆಂದು ಪೂಜಿಸುತ್ತಾರೆ. ಕರ್ನಾಟಕದಲ್ಲಿ ಬನ್ನಿ ಮರವನ್ನು ದಸರಾ ಸಂದರ್ಭದಲ್ಲಿ ಭಕ್ತಿಗೌರವಗಳಿಂದ ಪೂಜಿಸುತ್ತಾರೆ. ಬನ್ನಿಯನ್ನು ಬನ್ನಿ, ಶಮೀವೃಕ್ಷವೆಂದೂ, ಅದರ ಎಲೆಗಳನ್ನು ಚಿನ್ನವೆಂದು ಭಾವಿಸುತ್ತಾರೆ. ಬನ್ನಿ ಹಬ್ಬ ಅಥವಾ ಬನ್ನಿ ಮುಡಿಯುವುದು ಎಂದು ಕರೆಯುವುದು ವಾಡಿಕೆ. ಹಿಂದೆ ದಿಗ್ವಿಜಯ ಕೈಗೊಳ್ಳಲು ಸಜ್ಜು ಮಾಡುವ ಮೊದಲ ದಿನವೆಂದು, ಅಂದು ಯುದ್ಧ ಸಾಮಗ್ರಿಗಳಿಗೆ ಪೂಜೆ ಮಾಡಿ ಸೈನ್ಯದೊಡನೆ ಊರ ಮುಂದಿನ ಬನ್ನಿಯ ದಿಬ್ಬಕ್ಕೆ ಸೇರುತ್ತಿದ್ದಂತೆ, ಬನ್ನಿಯ ದಿಬ್ಬದಲ್ಲಿ ಬನ್ನಿಯನ್ನು ಮುಡಿದು ಊರುಗಳಿಗೆ ಬರುತ್ತಿದ್ದರಂತೆ. ವಿಜಯದಶಮಿಯ ಆಚರಣೆಯಲ್ಲಿ ಊರ ದೇವರುಗಳು ಪಲ್ಲಕ್ಕಿಯಲ್ಲಿ ಸಂಚರಿಸಿ, ಬನ್ನಿಕಟ್ಟೆಯಲ್ಲಿ ಸೇರಿ, ಬನ್ನಿಯನ್ನು ಮುಡಿಯುವುದು ಮೇಲಿನ ನಿದರ್ಶನಕ್ಕೆ ಸಾಕ್ಷಿ ಒದಗಿಸಿದೆ.

Also read: ನವರಾತ್ರಿಯ ವೈಶಿಷ್ಟ್ಯತೆಗಳು ಮತ್ತು 9 ದಿನದ ದೇವಿಯ ಪೂಜೆಯ ಹಿಂದಿರುವ ಇತಿಹಾಸ…

ಉತ್ತರ ಕರ್ನಾಟಕದ ಭಾಗದಲ್ಲಿ ವಿಜಯದಶಮಿಯಂದು ಜನರು ಪತ್ರಿಗಿಡದ ಎಲೆಯಲ್ಲಿ ಬನ್ನಿ ಎಲೆಗಳನ್ನು ಸೇರಿಸಿ ಮಾಡಿದ ವಸ್ತುವನ್ನು ಬಂಗಾರದ ಗಟ್ಟಿ ಎಂದೂ ಭಾವಿಸುತ್ತಾರೆ. ಬನ್ನಿ ಬಂಗಾರದ ಗಟ್ಟಿಯನ್ನು ಹಿಡಿದು ಜನರು ಮನೆ ಮನೆಗೆ ಹೋಗಿ ‘ನಾವು ನೀವು ಬಂಗಾರದಂಗೆ ಇರೋಣ’ ಎಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಅಂದು ಊರಿನ ಗೌಡರು ಹೊಲದಲ್ಲಿಯ ದೇವಿ ಗುಡಿಗೆ ಪಲ್ಲಕ್ಕಿಯಲ್ಲಿ ತೆರಳಿ ಬನ್ನಿಗಿಡವನ್ನು ಪೂಜಿಸಿ, ಬನ್ನಿಯನ್ನು ಮುಡಿಯುತ್ತಾರೆ. ನಂತರ ಊರಿನ ಜನರೆಲ್ಲ ಪರಸ್ಪರ ಬನ್ನಿ ಹಂಚಿಕೊಂಡು ನಲಿಯುತ್ತಾರೆ. ಬನ್ನಿ ಕೊಟ್ಟು ಬಂಗಾರ ಪಡೆಯುವುದು ಎಂದೇ ಪ್ರಸಿದ್ದಿಯಾಗಿರುವ #ಹಬ್ಬವು_ಹಳಸಿದ_ಸಂಬಂಧಗಳನ್ನು_ಬೆಸೆಯುತ್ತದೆ. ಅಲ್ಲದೆ ಹೊಸ_ಸ್ನೇಹಕ್ಕೂ ಕಾರಣವಾಗುತ್ತದೆ.

Also read: ಪುನವರಾತ್ರಿ ಹಬ್ಬದ ದಿನ ಈ ವಸ್ತುಗಳನ್ನು ನಿಮ್ಮ ಮನೆಗೆ ತಂದರೆ ಕುಬೇರರಾಗುತ್ತಿರ…

ಬನ್ನಿಯ_ಜನ್ಮ: ಮತ್ತು ಶಮೀ ವೃಕ್ಷದ ಪೌರಾಣಿಕ ಹಿನ್ನೆಲೆ:

ಜಾರ್ವ ಎಂಬ ಮಹಾ ತಪಸ್ವಿ ಹಾಗೂ ಆತನ ಪತ್ನಿ ಸುಮೇಧರಿಗೆ ‘ಶಮಿಕಾ‘ ಎಂಬ ಸುಂದರ ಮಗಳಿದ್ದಳು. ಮುದ್ದಾಗಿ ಬೆಳೆದ ಶಮೀಕಾಳಿಗೆ ಮದುವೆಯ ವಯಸ್ಸು ಬಂತು. ನಂತರ ತಂದೆ-ತಾಯಿಯರು ಧೌಮ್ಯ ಋಷಿಯ ಪುತ್ರ ಮಂದಾರನಿಗೆ ಮಗಳನ್ನು ಕೊಟ್ಟು ಮದುವೆ ಮಾಡಿದರು. ಕೌಶಿಕ ಮಹರ್ಷಿಯ ಶಿಷ್ಯ ಈ ಮಂದಾರ. ನವದಂಪತಿ ಒಮ್ಮೆ ವಾಯುವಿಹಾರದಲ್ಲಿದ್ದಾಗ ಆ ವನದಲ್ಲಿ ಸೊಂಡಿಲು ಹೊಂದಿದ ಭೃಶುಂಡಿ ಎಂಬ ಮುನಿಯನ್ನು ನೋಡಿದರು. ವಿಚಿತ್ರ ರೂಪ ನೋಡಿ ಅವರಿಗೆ ನಗು ಬಂತು. ದಂಪತಿ ನಕ್ಕ ವಿಷಯ ಮುನಿಯ ಗಮನಕ್ಕೂ ಬಂತು. ಕೂಡಲೇ ಮುನಿವರ್ಯ,‘ನನ್ನನ್ನು ನೋಡಿ ಯಾಕಾಗಿ ಅಪಹಾಸ್ಯದ ನಗೆ ಬೀರಿದಿರಿ’ ಎಂದು ಕೇಳಿದ. ಆದರೂ, ಆ ದಂಪತಿ ನಗುತ್ತಲೇ ಇದ್ದರು. ಭೃಶುಂಡಿ ಮುನಿಗೆ ಕೋಪ ತಡೆಯಲಾಗದೆ, ‘ನೀವು ಇಬ್ಬರೂ ಯಾವ ಪ್ರಾಣಿಗಳಿಗೂ ಪ್ರಯೋಜನಕ್ಕೆ ಬಾರದ ಮರಗಳಾಗಿ ಜನಿಸಿ‘ ಎಂದು ಶಾಪವಿತ್ತರು. ಶಾಪ ಕೇಳಿ ಬೆಚ್ಚಿದ ದಂಪತಿ ಭೀತಿಗೊಳಗಾಗಿ ಮುನಿಯ ಪಾದಕ್ಕೆರಗಿದರು. ‘ಅರಿವಿಲ್ಲದೆ ಮಾಡಿದ ತಪ್ಪಿಗೆ ಕ್ಷಮೆ ನೀಡಬೇಕು. ಶಾಪ ವಿಮೋಚನೆಗೆ ದಾರಿ ಏನೆಂದು ಹೇಳಬೇಕು’ ಎಂದು ಅಂಗಲಾಚಿ ಬೇಡಿಕೊಂಡರು. ಕೊನೆಗೆ ದಂಪತಿಯ ಬಗ್ಗೆ ಕನಿಕರ ತೋರಿದ ಭೃಶುಂಡಿ ಮುನಿ, ‘ಗಣಪತಿಯು ಯಾವಾಗ ಪ್ರಸನ್ನನಾಗುತ್ತಾನೋ ಆಗ ಶಾಪ ವಿಮೋಚನೆಯಾಗುವುದು‘ ಎಂದು ಸಮಾಧಾನ ಮಾಡಿದರು.

Also read: ಜೀವನದಲ್ಲಿ ನೀವು ಸುಖವಾಗಿ ಬಾಳಬೇಕೆ.? ಹಾಗಾದರೆ ಪ್ರತಿ ದಿನ ಸರ್ವಶ್ರೇಷ್ಠವಾದ ಶ್ರೀವಿಷ್ಣುಸಹಸ್ರನಾಮ ಪಾರಾಯಣ ಮಾಡಿ..!

ಹಾಗೆ ಮುನಿಯ ಶಾಪದಿಂದಾಗಿ ಶಮಿಕಳು ‘ಶಮಿ‘ ವೃಕ್ಷವಾಗಿಯೂ, ಮಂದಾರನು ‘ಮಂದಾರ‘ ವೃಕ್ಷವಾಗಿಯೂ ಪರಿವರ್ತನೆಗೊಂಡರು. ಇತ್ತ ನವ ದಂಪತಿ ಮನೆಗೆ ಬಾರದೇ ಇದ್ದುದರಿಂದ ಅವರನ್ನು ಹುಡುಕುತ್ತ ತಂದೆ ತಾಯಿ ಕಾಡನ್ನು ಪ್ರವೇಶಿಸಿದರು. ಹಾಗೆ ಒಳನಡೆದ ಅವರಿಗೆ ಆ ವನದಲ್ಲಿ ಮುನಿಯೊಬ್ಬರು ಕಾಣಸಿಕ್ಕಿದರು. ಅವರಲ್ಲಿ, ‘ನವ ದಂಪತಿಯನ್ನು ಕಂಡೀರಾ?‘ ಎಂದು ವಿಚಾರಿಸಿದರು. ಆಗ ಆ ಮುನಿ ನಡೆದ ವಿಷಯವನ್ನು ವಿವರಿಸಿದರು. ಅಲ್ಲಿಂದ ಬೀಳ್ಕೊಂಡು ಹೊರಟವರಿಗೆ ಎರಡು ಹೊಸ ಮರಗಳು ಕಾಣಸಿಕ್ಕವು. ಅವು ಮುನಿಯಿಂದ ಶಾಪಗ್ರಸ್ತರಾದ ತಮ್ಮ ಮಗಳು-ಅಳಿಯ ಎಂಬುದು ಕೂಡಲೇ ಅವರಿಗೆ ಮನವರಿಕೆಯಾಯಿತು. ಹಾಗಾಗಿ, ಅವುಗಳ ಬಳಿಗೆ ತೆರಳಿದ ಅವರು, ಮರದ ರೂಪದಲ್ಲಿದ್ದ ಮಗಳು-ಅಳಿಯನಿಗೆ ದೂರ್ವಾಸ ಮುನಿಗಳು ಹೇಳಿಕೊಟ್ಟಿದ್ದ ಗಣೇಶ ಮಂತ್ರವನ್ನು ಹೇಳಿಕೊಟ್ಟರು. ಮರದ ರೂಪದಲ್ಲಿದದ ಶಮೀಕ ಮತ್ತು ಮಂದಾರ ಶ್ರದ್ಧಾ ಭಕ್ತಿಯಿಂದ ಗಣಪತಿಯನ್ನು ಒಲಿಸಿಕೊಳ್ಳಲು ಗಣೇಶ ಮಂತ್ರ ಜಪಿಸತೊಡಗಿದರು. ಅವರ ಶ್ರದ್ಧಾ ಭಕ್ತಿಗೆ ಮೆಚ್ಚಿ ಪ್ರಸನ್ನನಾದ ಗಣಪತಿ ಅವರಿಗೆ ದರ್ಶನ ನೀಡಿದ. ಹೀಗೆ ಗಣಪತಿಯ ದರ್ಶನದಿಂದ ಶಾಪ ವಿಮೋಚಿತರಾದ ದಂಪತಿ ಮತ್ತೆ ಮನುಷ್ಯರೂಪ ಪಡೆದರು.

ಬನ್ನಿಮರದ ಉಪಯೋಗ ಮತ್ತು ಮಹತ್ವ:

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

 • ವಾಸ್ತುದೋಷ ಇರುವ ಮನೆಯಲ್ಲಿ ಶಮಿವೃಕ್ಷದ ಎಲೆಯನ್ನು ದೇವರ ಮನೆಯಲ್ಲಿಟ್ಟರೆ ದೋಷ ನಿವಾರಣೆ.
 • ಸಂತಾನಭಾಗ್ಯ ಇಲ್ಲದವರು ಈ ಶಮಿವೃಕ್ಷವನ್ನು ಬೆಳಗಿನ ಸಮಯದಲ್ಲಿ ಪ್ರದಕ್ಷಿಣಿ ಹಾಕಿದರೆ ಸಂತಾನ ಭಾಗ್ಯ ದೊರೆಯುವುದು.
 • ದೀರ್ಘವಾದ ಕೆಮ್ಮು ಇದ್ದರೆ ಈ ವೃಕ್ಷದ ಚಕ್ಕೆಯಿಂದ ಕಷಾಯ ಮಾಡಿ ಕುಡಿದರೆ ಗುಣಮುಖವಾಗುವುದು.
 • ವಿವಾಹಕ್ಕೆ ತಡೆಯಾದರೆ 48 ದಿನ ಈ ವೃಕ್ಷವನ್ನು ಪ್ರದಕ್ಷಿಣೆ ಹಾಕಬೇಕು. (ನಂಬಿಕೆ)
 • ಮಾಟ-ಮಂತ್ರ ಪ್ರಯೋಗವಾಗಿದ್ದರೆ ಈ ಮರಕ್ಕೆ 21 ದಿನ ಪೂಜೆ ಮಾಡಿದರೆ ಪ್ರಯೋಗದಿಂದ ಹೊರಬರಬಹುದು.
  (ನಂಬಿಕೆ)
 • ಮೂಲವ್ಯಾಧಿಯಿಂದ ಬಳಲುವವರು ಬನ್ನಿಯ ಎಲೆಯ ಕಷಾಯವನ್ನು ತಣ್ಣೀರಿನ ಟಬ್ಬಿನಲ್ಲಿ ಹಾಕಿ ಅದರಲ್ಲಿ ಕುಳಿತುಕೋಳ್ಳಬೇಕು
 • ಮುಖದ ಮೇಲಿನ ಅನಗತ್ಯ ರೋಮವು ಬೇಳೆಯುತ್ತಿದ್ದರೆ ಬನ್ನಿ ಕಾಯಿಯನ್ನು ನೀರಿನಲ್ಲಿ ತೇಯ್ದು ಲೇಪಿಸುತ್ತಿದ್ಧಲ್ಲಿ ಬೆಳವಣಿಗೆ ತಗ್ಗುತ್ತದೆ
 • ಬನ್ನಿ ತೋಗಟೆಯ ಕಷಾಯವು ಬೇದಿ, ಕೆಮ್ಮು, ತಲೆಸುತ್ತು, ಚರ್ಮ ರೋಗ, ರಕ್ತಸ್ರಾವ, ಜಂತುಹುಳುಗಳ ತೊಂದರೆಗೆ ಉಪಯುಕ್ತ
 • ಬನ್ನಿಯ ಕಾಯಿ ಪಿತ್ತ ವೃದ್ಧಿ ಮಾಡುವುದಲ್ಲದೆ ಮೆದುಳಿನ ಟಾನಿಕ್ ಆಗಿ ಕೆಲಸ ಮಾಡುತ್ತದೆ
 • ಬನ್ನಿ ಮರದ ತೊಗಟೆ ಕಷಾಯ ರುಮಾಡಿಸಂ ಇಂದ ಬಳಲುತ್ತಿರುವವರಿಗೆ ಉತ್ತಮ
 • ಬನ್ನಿ ಮರದ ಹೂವುಗಳನ್ನು ಸಕ್ಕರೆಯೊಂದಿಗೆ ಬೆರೆಸಿ ಸೇವಿಸಿದರೆ ಗರ್ಭಪಾತವನ್ನು ತಡೆಗಟ್ಟಬಹುದು
 • ತೊಗಟೆಯನ್ನು ಪುಡಿ ಮಾಡಿ ಪೇಸ್ಟನ್ನು ಚೇಳು ಕಡಿದ ಜಾಗಕ್ಕೆ ಹಚ್ಚಿದರೆ ವಿಷ ಪ್ರಭಾವ ಕಡಿಮೆ ಆಗುತ್ತದೆ
 • ತೊಗಟೆಯ ಪುಡಿಯನ್ನು ಅರಿಷಣ ಮತ್ತು ಹಾಲಿನೊಂದಿಗೆ ಕಳಿಸಿ ಹಚ್ಚಿದರೆ ಚರ್ಮ ಕಾಂತಿಯುತವಾಗುತ್ತದೆ.
 • ತೊಗಟೆಯ ಕಷಾಯವು ಆ‌ಮಶಂಕೆ, ಬೇದಿಗೆ ಉತ್ತಮ ಔಷಧಿ
 • ತೊಗಟೆಯ ಕಷಾಯದಿಂದ ಬಾಯಿ ಮುಕ್ಕಳಿಸಿದ್ದಲ್ಲಿ ಗಂಟಲು ನೋವು, ಹಲ್ಲು ನೋವು ಪರಿಹಾರವಾಗುತ್ತದೆ
 • ಅರ್ಧಗಂಟೆ ಅಥವಾ ಒಂದು ಗಂಟೆ ಈ ಶಮವೃಕ್ಷದ ಕೆಳಗೆ ಕುಳಿತು ಧ್ಯಾನ ಮಾಡಿದರೆ ದೀರ್ಘಕಾಲೀನ ರೋಗಗಳಿದ್ದರೆ ಗುಣವಾಗುವುದು.
 • ಹೃದ್ರೋಗ ಇದ್ದರೆ ಈ ಮರದ ಗಾಳಿಯನ್ನು ಪ್ರತಿದಿನ ಸೇವಿಸಿದ್ದರೆ ತೊಂದರೆ ನಿವಾರಣೆ ಆಗುವುದು.
 • ಶಮ ವೃಕ್ಷ ಇರುವ ಸ್ಥಳದಲ್ಲಿ ಬಾವಿ ತೋಡಿಸಿದರೆ ಸಹಿ ನೀರು ಸಿಗುತ್ತದೆ.