ತಲೆಯಲ್ಲಿ ಕೂದಲಿಲ್ಲವೆಂದು ಕೂದಲು ಕಸಿ ಮಾಡಿಸಿಕೊಳ್ಳುವ ಯೋಚನೆ ಇದ್ರೆ ಈ ಸ್ಟೋರಿ ಓದಿ..

0
2632

ತಲೆಗೆ ಕೂದಲು ಇದ್ದರೆ ವ್ಯಕ್ತಿಯಲ್ಲಿರುವ ಮನೋಬಲವೇ ಹೆಚ್ಚು, ಹಾಗಂತ ತಲೆಯಲ್ಲಿ ಕೂದಲು ಇಲ್ಲವೆಂದರೆ ಹಣವಿರುದಿಲ್ಲ ಆ ವ್ಯಕ್ತಿ ಕುರೂಪಿ ಎಂದು ತಿಳಿಯುವುದು ಬೇಡ. ಏಕೆಂದರೆ ಶ್ರೀಮಂತ ಪುರುಷರಿಗೆ ತಲೆಯಲ್ಲಿ ಕೂದಲು ಕಡಿಮೆಯಂತೆ. ಹುಟ್ಟುತ್ತಲೇ ಕೂದಲು ಕಡಿಮೆ ಇದ್ದರೆ ಇವನು ಜೀವನದಲ್ಲಿ ಬಾರಿ ಶ್ರೀಮಂತ ಎನ್ನುತ್ತಾರೆ. ಆದರೆ ಈಗೀಗ ಜನರು ತಲೆಯ ಕೂದಲುಗಳ ಬಗ್ಗೆ ಲಕ್ಷಾಂತರ ಹಣ ಕರ್ಚುಮಾಡುತ್ತಿದ್ದಾರೆ. ಕಳೆದ ಕೂದಲನ್ನು ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಇಂತಹವರಿಗೆ ಅಂತಾನೆ ಹಲವು ಔಷಧಿ ಕಂಪನಿಗಳು ಭರವಸೆ ನೀಡಿ ಅಗ್ಗದ ಔಷಧಿ ನೀಡಿ ಹಣ ಗಳಿಸುತ್ತಿದ್ದಾರೆ.

Also read: ಯಾರ ಸಹಾಯ ವಿಲ್ಲದೆ ಇರುವ ಮನೆ, ಆಸ್ತಿ ಮಾರಿ ಇಡಿ ಕುಟುಂಬವೇ ಕಿವುಡ-ಮೂಕ ಮಕ್ಕಳಿಗೆ ತರಬೇತಿ ಶಾಲೆ ತೆರೆದು ಉಚಿತ ಸೇವೆ ಸಲ್ಲಿಸುತ್ತಿರುವ ರಿಯಲ್ ಸ್ಟೋರಿ ಓದಿ…

ಹೌದು ಕೂದಲು ಬೆಳೆಸಲು ಜನರು ಏನೆಲ್ಲಾ ಮಾಡುತ್ತಿದ್ದಾರೆ ಎನ್ನುವುದಕ್ಕೆ ಹಲವು ಉದಾಹರಣೆಗಳು ಕಣ್ಣು ಮುಂದೆ ಇದ್ದರು ಮತ್ತೆ ಅಂತಹ ಸಾಹಸಕ್ಕೆ ಕೈಹಾಕಿ ಹಣದ ಜೊತೆಗೆ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಅಪ್ಪಟ ಸಾಕ್ಷಿ ಎಂದರೆ. ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಹೇರ್ ಟ್ರಾನ್ಸ್ ಪ್ಲಾಂಟೇಶನ್ ಮಾಡಿಸಿಕೊಂಡ. ಉದ್ಯಮಿಯೊಬ್ಬರು ಸಾವನ್ನಪ್ಪಿರುವ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ.

ಈ ಘಟನೆಗೆ ಒಳಗಾದ 43ವರ್ಷದ ಶ್ರವಣ್ ಕುಮಾರ್ ಚೌಧರಿ ಅವರು ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೂದಲು ಕಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, ಶುಕ್ರವಾರ ಉದ್ಯಮಿಯ ಮುಖ ಊದಿಕೊಳ್ಳತೊಡಗಿತ್ತು, ಅಲ್ಲದೇ ಉಸಿರಾಟದ ತೊಂದರೆ ಅನುಭವಿಸತೊಡಗಿದ್ದರು. ಕೂಡಲೇ ತಜ್ಞ ವೈದ್ಯರು ಬಂದು ಪರೀಕ್ಷಿಸಿದ್ದರು, ಇದಕ್ಕೆ ಹಲವು ಚಿಕಿತ್ಸೆ ನೀಡಿದರು ಆದರು ಪ್ರಯೋಜನ ವಿಲ್ಲದೆ ಶನಿವಾರ ಮುಂಜಾನೆ 6.45ರ ಹೊತ್ತಿಗೆ ಮೃತಪಟ್ಟಿದ್ದಾರೆ. ಈ ವಿಷಯವಾಗಿ ಹೇಳಿದ ವೈದ್ಯರು ಮಾರಕ ಅಲರ್ಜಿ ರಿಯಾಕ್ಷನ್ ನಿಂದಾಗಿ ಸಾವು ಸಂಭವಿಸಿರಬೇಕೆಂದು ವರದಿ ನೀಡಿದ್ದಾರೆ.

Also read: ಸತ್ತ ಮೇಲೂ ಗರ್ಭಕೋಶ ಕಸಿಯಿಂದ ತಾಯಿಯಾದ ಈ ಮಹಿಳೆಯ ಸ್ಟೋರಿ ಓದಿ, ನಿಮ ಕಣ್ಣಲ್ಲಿ ನೀರು ಬರುತ್ತೆ…

ವರದಿಯ ಪ್ರಕಾರ;

ಮನೆಯಲ್ಲಿ ಹೆಂಡತಿ, ಮಕ್ಕಳಿಗೆ ಹೇಳದೆ ಕೂದಲು ಕಸಿ ಮಾಡಿಸಿಕೊಳ್ಳಲು ಚೌಧರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದರು. ಸುಮಾರು 5 ಲಕ್ಷ ರೂಪಾಯಿ ಹಣವನ್ನು ಆಸ್ಪತ್ರೆಗೆ ಪಾವತಿಸಿದ್ದರು. ಅದರಂತೆ ಆಸ್ಪತ್ರೆಯಲ್ಲಿ ಚೌಧರಿಯ ಬೊಕ್ಕ ತಲೆಗೆ 9,500ರಷ್ಟು ಕೂದಲನ್ನು ಕಸಿ ಮಾಡಲಾಗಿತ್ತು..ಇದಕ್ಕಾಗಿ ಸುಮಾರು 15 ಗಂಟೆಗಳಷ್ಟು ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು ಎಂದು ವರದಿ ವಿವರಿಸಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಿಂಚ್ ಪೋಕ್ಲಿ ಆಸ್ಪತ್ರೆಗೆ ಈ ರೀತಿಯ ಹೇರ್ ಟ್ರಾನ್ಸ್ ಪ್ಲಾಂಟೇಶನ್ ನಡೆಸಲು ಅವಕಾಶ ಇದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಅಪರಾಧ ದಂಡ ಸಂಹಿತೆ ಕಲಂ 174ರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಸಾಕಿನಾಕಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Also read: ಈ ಸ್ಟೋರಿ ಓದಿದ ಮೇಲೆ ನೀವು ಖಂಡಿತ ಇನ್ಯಾವತ್ತೂ ಹೆಡ್ ಮಸಾಜ್ ಮಾಡಿಸಿ ಕೊಳ್ಳುವುದಿಲ್ಲ.. ಇಲ್ಲಿದೆ ನೋಡಿ ಮಸಾಜ್ ನಿಂದ ಆಗಿರುವ ದುರಂತ

ಈ ಹಿಂದೆ 2016ರಲ್ಲಿ ಇಂತಹದೆ ಘಟನೆ ಚೆನ್ನೈಯನಲ್ಲಿ ನಡೆದಿತ್ತು. 22ವರ್ಷದ ಸಂತೋಷ್ ಎನ್ನುವ ಮೆಡಿಕಲ್ ವಿದ್ಯಾರ್ಥಿಯೊಬ್ಬರು ಹೇರ್ ಟ್ರಾನ್ಸ್ ಪ್ಲ್ಯಾಂಟ್ ಮಾಡಿಸಿಕೊಂಡಿದರು. ಅದು ಯಶಸ್ವಿಯಾಗದೇ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಇವರಿಗೆ ಸುಮಾರು 10 ಗಂಟೆಗಳ ಶಸ್ತ್ರಚಿಕಿತ್ಸೆಯ ಬಳಿಕ ಜ್ವರ ಪ್ರಾರಂಭವಾಗಿದ್ದು, ಕೂದಲು ಕಸಿ ಮಾಡಿಸಿದ್ದ 2 ದಿನಗಳ ನಂತರ ಸಾವನ್ನಪ್ಪಿದ್ದ ಎಂದು ವರದಿ ತಿಳಿಸಿತ್ತು. ಈ ಸುದ್ದಿಯಂತೆ ಹೇರ್ ಟ್ರಾನ್ಸ್ ಪ್ಲ್ಯಾಂಟ್ ಮಾಡಿಸಿಸುವುದು ಅಪಾಯ ಅಂತ ನಮ್ಮ ವರದಿ ತಿಳಿಸುತ್ತಿಲ್ಲ. ಯಾವುದೇ ವಿಚಾರ ಅವರವರಿಗೆ ಬಿಟ್ಟಿದ್ದು. ಏನೋ ಆದರು ಮೊದಲು ಸರಿಯಾಗಿ ತಿಳಿದು ಸಲಹೆ ಪಡೆದುಕೊಂಡು ಚಿಕಿತ್ಸೆಗೆ ಮುಂದಾಗಿ.