ಹೆಚ್ಚು ಖಾರವನ್ನು ತಿನ್ನಲು ಬಯಸುವವರು ಇಂದೇ ಟ್ರೈ ಮಾಡಿ ಬಟರ್ ಚಿಕನ್ ಮಸಾಲ….

0
1219

ಬೇಕಾಗುವ ಸಾಮಾಗ್ರಿಗಳು.

 • ಚಿಕನ್ 1/2ಕೆ.ಜಿ.
 • ಮೊಸರು 1ಕಪ್‌
 • ಕೆಂಪು ಮೆಣಸಿನ ಪುಡಿ
 • ಮೆಂತ್ಯಸೊಪ್ಪು
 • ನಿಂಬೆರಸ
 • ಶುಂಠಿ ಬೆಳ್ಳುಳ್ಳಿ ಪೇಸ್ಟ್
 • ಉಪ್ಪು ರುಚಿಗೆ ತಕ್ಕಷ್ಟು
 • ಬೆಣ್ಣೆ 2ಟೇಬಲ್ ಚಮಚ
 • ಈರುಳ್ಳಿ 2
 • ದನಿಯಾ ಪುಡಿ 1ಚಮಚ
 • ಶುಂಠಿ ಬೆಳ್ಳುಳ್ಳಿ ಪೇಸ್ಟ್‌ 1ಚಮಚ,
 • ಟೊಮೆಟೊ 4
 • ಗೋಡಂಬಿ 1/4ಕಪ್‌
 • ಬಾದಾಮಿ 6
 • ಹಸಿರುಮೆಣಸಿನಕಾಯಿ 4
 • ಕೆಂಪು ಮೆಣಸಿನ ಪುಡಿ 1ಟೇಬಲ್ ಚಮಚ
 • ಮೆಂತ್ಯಸೊಪ್ಪು 1ಟೇಬಲ್ ಚಮಚ
 • ಕಾಶ್ಮೀರಿ ಕೆಂಪು ಮೆಣಸಿನ ಪುಡಿ 1ಚಮಚ
 • ಕ್ರೀಮ್ 1/4ಕಪ್‌
 • ಪಲಾವ್ ಎಲೆ 1
 • ಕೊತ್ತಂಬರಿ ಪುಡಿ 1ಟೇಬಲ್ ಚಮಚ
 • ಉಪ್ಪು ರುಚಿಗೆ

ತಯಾರಿಸುವ ವಿಧಾನ:

 • ಮೊದಲು ಕೋಳಿಮಾಂಸದ ತುಂಡುಗಳನ್ನು ಚೆನ್ನಾಗಿ ತೊಳೆಯಿರಿ. ನಂತರ ಮೊಸರು 1ಕಪ್‌, ಕೆಂಪು ಮೆಣಸಿನ ಪುಡಿ 1/2ಟೇಬಲ್ ಚಮಚ, ಮೆಂತ್ಯಸೊಪ್ಪು 2ಟೇಬಲ್ ಚಮಚ, ನಿಂಬೆರಸ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು ರುಚಿಗೆ ತಕ್ಕಷ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮಾಂಸದೊಂದಿಗೆ ಸೇರಿಸಿ ಚೆನ್ನಾಗಿ ಕಲೆಸಿ ಅದನ್ನು 3ರಿಂದ4 ಗಂಟೆ ಫ್ರಿಜ್ಡ್‌ನಲ್ಲಿ ನೆನೆಯಲು ಇಡಿ.
 • ನಂತರ ಪಾತ್ರೆಯೊಂದರಲ್ಲಿ ಬೆಣ್ಣೆ ಹಾಕಿ ಬಿಸಿಮಾಡಿ, ಅದಕ್ಕೆ ಫ್ರಿಜ್‌ನಲ್ಲಿ ಇರಿಸಿದ ಕೋಳಿಮಾಂಸದ ಮಿಶ್ರಣವನ್ನು ಸೇರಿಸಿ, ಮಧ್ಯಮ ಉರಿಯಲ್ಲಿ 5 ನಿಮಿಷಗಳ ಕಾಲ ಬೇಯಿಸಿ.
 • ನಂತರ ಇನ್ನೊಂದು ಪಾತ್ರೆಯೊಂದರಲ್ಲಿ 2 ಚಮಚ ಬೆಣ್ಣೆ ಹಾಕಿ, ಅದಕ್ಕೆ ಹೆಚ್ಚಿದ ಈರುಳ್ಳಿ, ಜೀರಿಗೆ ಪುಡಿ ಮತ್ತು ಹಸಿಮೆಣಸು ಹಾಕಿ ಹುರಿಯಿರಿ. ನಂತರ ಇದಕ್ಕೆ ಟೊಮೆಟೊ, ದನಿಯಾ ಪುಡಿ, ಶುಂಠಿ – ಬೆಳ್ಳುಳ್ಳಿ ಪೇಸ್ಟ್‌, ಹೆಚ್ಚಿದ ಮೆಂತ್ಯ ಸೊಪ್ಪು, ಕೆಂಪು ಮೆಣಸಿನ ಪುಡಿ, ಗೋಡಂಬಿ, ಬಾದಾಮಿ ಮತ್ತು ಪಲಾವ್ ಎಲೆ, ಉಪ್ಪು ಸೇರಿಸಿ. ನಂತರ ಎಲ್ಲದರ ಮಿಶ್ರಣವನ್ನು 10 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬಟರ್ ಮಸಾಲ ತಯಾರಿಸಿಕೊಳ್ಳಿ. ಈ ಮಸಾಲವನ್ನು ತಣ್ಣಗಾಗಲು ಬಿಡಿ. ನಂತರ ಅದನ್ನು ಮಿಕ್ಸರ್‌ಗೆ ಹಾಕಿ ನುಣ್ಣಗೆ ಪೇಸ್ಟ್ ಮಾಡಿ ಕೊಳ್ಳಿ.
 • ಈಗ ಇನ್ನೊಂದು ಪಾತ್ರೆಗೆ 6 ಚಮಚ ಬೆಣ್ಣೆಯನ್ನು ಹಾಕಿ, ಅದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿ, ನಂತರ ಅದನ್ನು ಚೆನ್ನಾಗಿ ಕುದಿಸಿ, ಆ ಮಿಶ್ರಣಕ್ಕೆ ಕಾಶ್ಮೀರಿ ಕೆಂಪು ಮೆಣಸಿನ ಪುಡಿ ಸೇರಿಸಿ 4 ನಿಮಿಷಗಳ ಕಾಲ ಕುದಿಸಿ.
 • ಇದಕ್ಕೆ ಬೇಯಿಸಿದ ಮಾಂಸದ ತುಂಡುಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅದಕ್ಕೆ 1–1/2 ಗ್ಲಾಸ್ ನೀರು ಸೇರಿಸಿ. ಈಗ ಉಪ್ಪು ಸರಿಯಾಗಿದೆಯೇ ಎಂದು ನೋಡಿ ಮಧ್ಯಮ ಉರಿಯಲ್ಲಿ ಬೇಯಿಸಿ. ಸುಮಾರು 12ರಿಂದ 13 ನಿಮಿಷದವರೆಗೆ ಬೇಯಿಸಿಬೇಕು. ನಂತರ ಗ್ಯಾಸ್ ಆಫ್ ಮಾಡಿ ಗ್ರೇವಿಗೆ ಕ್ರೀಮ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ಈಗ ರುಚಿಯಾದ ಬಟರ್ ಮಸಾಲ ಚಿಕನ್ ಸವಿಯಲು ಸಿದ್ದ.