ಮಂಡ್ಯದ ಫಲಿತಾಂಶದ ಸಮೀಕ್ಷೆಯ ವರದಿ ನೋಡಿದ ಸಿಎಂ ಗೆ ಜೋರಾದ ಎದೆಬಡಿತ; ಮತ್ತೊಂದು ಸುತ್ತಿನ ಸಮೀಕ್ಷೆಗೆ ಸೂಚನೆ ನೀಡಿದ ಕುಮಾರಸ್ವಾಮಿ..

0
473

ರಾಜ್ಯದಲ್ಲಿ ಬಾರಿ ಸುದ್ದಿ ಎಬ್ಬಿಸಿದ ಮಂಡ್ಯದ ಚುನಾವಣೆಯ ಮತದಾನ ಮುಕ್ತಾಯವಾಗಿ ಈಗ ಪಲಿತಾಂಶದ ಸುದ್ದಿ ಹರಿದಾಡುತ್ತಿದೆ. ಎರಡು ಪಕ್ಷಗಳ ಬೆಂಬಲಿಗರು ಸುಮಲತಾ ಗೆಲ್ಲುತ್ತಾರೆ ಎಂದು ಬೆಟ್ಟಿಂಗ್ ಕಟ್ಟಿದ್ದರೆ, ನಿಖಿಲ್ ಅಭಿಮಾನಿಗಳು ಕೂಡ ಆಸ್ತಿ, ಹಣ, ಕುರಿ ಕೋಳಿಯನ್ನು ಬೆಟ್ಟು ಕಟ್ಟುತ್ತಿದ್ದಾರೆ. ಇದರ ಬಗ್ಗೆ ಈಗಾಗಲೇ ಎರಡು ಸಮೀಕ್ಷೆಗಳು ಹೊರಬಿದಿದ್ದು, ನಿಖಿಲ್ ಗೆಲವುದು ಸತ್ಯವೆಂದು ತಿಳಿಸಿವೆ. ಆದರು ಕೂಡ ಸೋಲಿನ ಭಯದಲ್ಲೀರುವ ಸಿಎಂ ಕುಮಾರಸ್ವಾಮಿ. ದಿನಕೊಂದು ಸಮೀಕ್ಷೆ ನಡೆಸಿದ್ದು ಎಲ್ಲಿ ಸೋಳುತ್ತೇನೋ ಅನ್ನೂ ಭೀತಿಯಲ್ಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

Also read: ಶಾಲಾ ಮಕ್ಕಳಿಗೆ ಹಾಗೂ ಪಾಲಕರಿಗೆ ಸಿಹಿ ಸುದ್ದಿ; ಬ್ಯಾಗ್ ತೂಕ ಮಿತಿಗೊಳಿಸಿದ ಸರ್ಕಾರ ಬ್ಯಾಗ್ ರಹಿತ ದಿನ ಆಚರಣೆಗೆ ಆದೇಶ..

ಹೌದು ಮಂಡ್ಯ ಚುನಾವಣೆ ಮುಗಿದರು ಕೂಡ ಕಾವು ಮಾತ್ರ ಇನ್ನೂ ಆರುವ ಲಕ್ಷಣಗಳು ಕಾಣಿಸುತ್ತಿಲ್ಲ. ಮಂಡ್ಯದ ಫಲಿತಾಂಶದ ಬಗ್ಗೆ ತೀರಾ ತಲೆ ಕೆಡಿಸಿಕೊಂಡಿರುವ ಸಿಎಂ ಕುಮಾರಸ್ವಾಮಿ ಇದೀಗ ಅಧಿಕಾರಿಗಳಿಗೆ ಮತ್ತೊಂದು ಸುತ್ತಿನ ಸಮೀಕ್ಷೆಗೆ ಆದೇಶಿಸಿದ್ದಾರೆ. ಈ ಹಿಂದೆ ಮಂಡ್ಯ ಫಲಿತಾಂಶದ ಕುರಿತು ಕುಮಾರಸ್ವಾಮಿಗೆ ಗುಪ್ತಚರ ಇಲಾಖೆ ವರದಿ ನೀಡಿದ್ದು ಇದು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ತಲೆನೋವಾಗಿ ಪರಿಣಮಿಸಿದೆ.ಮಂಡ್ಯದ ಫಲಿತಾಂಶದ ಬಗ್ಗೆ ತೀರಾ ತಲೆ ಕೆಡಿಸಿಕೊಂಡಿರುವ ಸಿಎಂ ಕುಮಾರಸ್ವಾಮಿ ಇದೀಗ ಅಧಿಕಾರಿಗಳಿಗೆ ಮತ್ತೊಂದು ಸುತ್ತಿನ ಸಮೀಕ್ಷೆಗೆ ಆದೇಶಿಸಿದ್ದಾರೆ.

ಎಲ್ಲಾ ಚುನಾವಣೆಯಲ್ಲೂ ಜಾತಿ ಆಧಾರದಲ್ಲಿ ಗೆಲುವಿನ ಲೆಕ್ಕಾಚಾರ ನಡೆಯುವ ಮಂಡ್ಯದ ಕಣದಲ್ಲಿ ಮೊದಲ ಬಾರಿಗೆ ಅಭಿವೃದ್ಧಿ ಹಾಗೂ ಸ್ವಾಭಿಮಾನದ ಹೆಸರಲ್ಲಿ ಚುನಾವಣೆ ನಡೆದಿತ್ತು. ಸ್ವತಂತ್ರ್ಯ ಅಭ್ಯರ್ಥಿ ಸುಮಲತಾ ಅಂಬರೀಶ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಸಾಕಷ್ಟು ಪೈಪೋಟಿ ನೀಡಿದ್ರು ಇದು ಸಾಮಾನ್ಯವಾಗಿ ಕುಮಾರಸ್ವಾಮಿಯವರ ತಲೆ ಕೆಡಿಸಿತ್ತು. ಚುನಾವಣೆ ಮುಗಿಯುತ್ತಿದ್ದಂತೆ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಒಂದು ಸುತ್ತಿನ ಸಮೀಕ್ಷೆ ನಡೆಸಲು ಸೂಚನೆ ನೀಡಿದ್ದರು.ಅದರಂತೆ ಸಮೀಕ್ಷೆ ನಡೆಸಿದ್ದ ಅಧಿಕಾರಿಗಳು ಸಹ ಕಡಿಮೆ ಅಂತರದಲ್ಲಿ ನಿಖಿಲ್ ಗೆಲುವು ಖಚಿತ ಎಂದು ವರದಿ ನೀಡಿದ್ದರು.

Also read: ಮೆಟ್ರೋ ಪ್ರಯಾಣಿಕರೆ ಹುಷಾರ್; ಮೆಟ್ರೋ ನಿಲ್ದಾಣದಲ್ಲಿ ನೆಲಕ್ಕೆ ಹಾಕಿರುವ ಗ್ರಾನೈಟ್ ಮೇಲೆ ನೋಡಿಕೊಂಡು ನಡೆದಾಡಿ ಇಲ್ಲದಿದ್ದರೆ ಕೈ ಕಾಲು ಮುರಿಯುತ್ತೆ..

ಆದರೆ ಇದೇ ಮೊದಲ ಬಾರಿಗೆ ಮಂಡ್ಯದಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಅಧಿಕವಾಗಿತ್ತು. ಅಲ್ಲದೆ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದರು. ಅದರಂತೆ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಬಹುತೇಕ ಮಹಿಳೆಯರು ಸುಮಲತಾ ಅಂಬರೀಶ್ ಪರ ಒಲವು ತೋರಿಸಿದ್ದರು. ಶೇ.50 ರಷ್ಟು ಮಹಿಳೆಯರು ಸುಮಲತಾ ಪರ ಮತ ಚಲಾಯಿಸಿದ್ದರೂ ಸಹ ಮಂಡ್ಯದಲ್ಲಿ ನಿಖಿಲ್ ಗೆಲುವು ಅಸಾಧ್ಯ. ಏಕೆಂದರೆ ಈಗಾಗಲೆ ಬಿಜೆಪಿ, ರೈತ ಸಂಘ, ರೆಬೆಲ್ ಕಾಂಗ್ರೆಸ್ ನಾಯಕರು ಹಾಗೂ ಜಿಲ್ಲೆಯ ಯುವಕ ಯುವತಿಯರು ಸುಮಲತಾ ಕೈ ಹಿಡಿದ್ದಾರೆ. ಇದು ಸಹ ಕುಮಾರಸ್ವಾಮಿಯವರ ಚಿಂತೆಗೆ ಕಾರಣವಾಗಿದ್ದು, ಇದೇ ಕಾರಣಕ್ಕೆ ಮಹಿಳೆಯರನ್ನು ಆಧರಿಸಿ ಮತ್ತೊಂದು ಸಮೀಕ್ಷೆ ನಡೆಸುವಂತೆ ಗುಪ್ತಚರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಗುಪ್ತಚರ ಇಲಾಖೆಯಿಂದ ಮೂರು ವರದಿ

Also read: BJPಗೆ 200 ಸೀಟೂ ದಾಟಲ್ಲ, ಕಾಂಗ್ರೆಸ್-ನೊಂದಿಗೆ ಬೇರೆ ಪ್ರಾದೇಶಿಕ ಪಕ್ಷಗಳು ಮೈತ್ರಿ ಮಾಡಿ ದೇವೇಗೌಡರವರು ಮತ್ತೆ ಪ್ರಧಾನಿ ಆಗ್ತಾರೆ : ಪ್ರಕಾಶ್ ಅಂಬೇಡ್ಕರ್!! ಇದು ಸಾಧ್ಯಾನಾ??

ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಗುಪ್ತಚರ ಇಲಾಖೆಯೇ 3 ಭಿನ್ನ ವರದಿಗಳನ್ನು ನೀಡಿರುವುದು ಅಸಮಾಧಾನಗೊಳ್ಳುವಂತೆ ಮಾಡಿದ್ದು, ಕಾಂಗ್ರೆಸ್ ನಾಯಕರ ವಿರುದ್ಧವೂ ದೂರು ನೀಡಲು ಕಾರಣ ಎನ್ನಲಾಗಿದೆ. ಪ್ರಮುಖವಾಗಿ ನಿಖಿಲ್ ರಾಜಕೀಯ ಭವಿಷ್ಯದ ಮೇಲೆ ಇದು ಹೆಚ್ಚು ಪ್ರಭಾವ ಉಂಟು ಮಾಡುವ ಕಾರಣದಿಂದ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಆದರೆ ಗುಪ್ತಚರ ಇಲಾಖೆ ಕೆಲ ಸ್ಯಾಂಪಲ್‍ಗಳ ಮೇಲೆಯೇ ವರದಿ ಸಿದ್ಧಪಡಿಸಿದೆ ಎನ್ನಲಾಗಿದ್ದು, ಫಲಿತಾಂಶ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಒಟ್ಟಾರೆಯಾಗಿ ಮಹಿಳೆಯರ ನಿರ್ಧಾರ ಏನು ಎಂಬುದರ ಆಧಾರದಲ್ಲಿ ಈ ಬಾರಿಯ ಮಂಡ್ಯದ ಚುನಾವಣಾ ಫಲಿತಾಂಶ ನಿರ್ಧಾರವಾಗಲಿದೆ. ಫಲಿತಾಂಶ ಕುಮಾರಸ್ವಾಮಿಗೆ ಶುಭಾವಾಗಲಿದೆಯಾ ಸುಮಲತಾ ಅವರಿಗೆ ಶುಭಾವಾಗಲಿದೆಯಾ ಎಂಬುವುದು ಮೇ 23ರ ಪಲಿತಾಂಶದಲ್ಲಿ ತಿಳಿಯಲಿದೆ.