ಸಿನಿಮಯ ರೀತಿಯಲ್ಲಿ ಪೊಲೀಸ್ ಕಾರ್ಯಾಚರಣೆ; ಹಣಕ್ಕಾಗಿ ಮಾಡೆಲ್ ಯುವತಿಯನ್ನು ಕೊಲೆ ಮಾಡಿದ ಓಲಾ ಚಾಲಕನ ಬಂಧನ..

0
300

ಕಳೆದ ಜುಲೈ ತಿಂಗಳ 31 ರಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹಿಂಭಾಗದ ಕಾಂಪೌಂಡ್ ಹತ್ತಿರ ಬೆಳಗ್ಗೆ ಅಪರಿಚಿತ ಮಹಿಳೆಯ ಶವಯೊಂದು ಪತ್ತೆಯಾಗಿತ್ತು, ಅದು ನೋಡಲು ಮರ್ಡರ್ ಮಾಡಿದ ರೀತಿಯಲ್ಲಿ ಕತ್ತು ಸಿಳಲಾಗಿತ್ತು, ತಲೆಗೆ ಇಟ್ಟಿಗೆಯಿಂದ ಹೊಡೆದ ರೀತಿಯಲ್ಲಿತ್ತು, ಆದರೆ ಮೃತಪಟ್ಟ ಮಹಿಳೆಯ ಬಗ್ಗೆ ಮಾಹಿತಿ ಕೂಡ ಇರಲಿಲ್ಲ, ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಪ್ರಕರಣದ ಸಂಪೂರ್ಣ ಮಾಹಿತಿ ಕಲೆಹಾಕುವಲ್ಲಿ ಯಶಸ್ವಿಯಾಗಿದ್ದು. ಕೊಲೆ ಮಾಡಿದ್ದು ಮಂಡ್ಯ ಮೂಲದ 22 ವರ್ಷದ ಎಚ್‌.ಎಂ.ನಾಗೇಶ್‌ ಈ ಕೃತ್ಯ ಮಾಡಿದ್ದು ಆರೋಪಿಯನ್ನು ಬಂಧಿಸಿದ್ದಾರೆ.

ಹಣಕ್ಕಾಗಿ ಮಾಡೆಲ್ ಕೊಲೆ;

ಹೌದು ಕಾಡಯರಪ್ಪನಹಳ್ಳಿ ಗ್ರಾಮದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹಿಂಭಾಗದ ಕಾಂಪೌಂಡ್ ಹತ್ತಿರ ನಡೆದ ಕೊಲೆ ನೋಡಿ ಕಾಡಯರಪ್ಪನಹಳ್ಳಿ ಗ್ರಾಮದ ನಿವಾಸಿ ಮುನಿರಾಜು ಎಂಬುವರು ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣವನ್ನು ಬೆನ್ನುಹತ್ತಿದ ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ. ಭೀಮಾಶಂಕರ ಎಸ್. ಗುಳೇದ ಅವರು ಎರಡು ತಂಡಗಳನ್ನು ರಚಿಸಿದ್ದರು. ಒಂದು ತಂಡವು ಮೃತಳ ಕೈಯಲ್ಲಿದ್ದ ಟೈಟನ್ ವಾಚ್ ಹಾಗೂ ಅವರು ಧರಿಸಿದ್ದ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಮೇಲಿದ್ದ ಬಾರ್ ಕೋಡ್ ಆಧಾರದ ಮೇಲೆ ದೇಶದಾದ್ಯಂತ ಶಾಪಿಂಗ್ ಮಾಲ್‍ ಮತ್ತು ಆನ್‍ಲೈನ್ ಮಾರಾಟ ಸಂಸ್ಥೆಗಳ ಮೂಲಕ ಮಾಹಿತಿಯನ್ನು ಕಲೆ ಹಾಕಿತ್ತು. ಇದರನ್ವಯ ಮೃತ ಮಹಿಳೆಯು ಧರಿಸಿದ್ದ ಉಂಗುರ ಹಾಗೂ ಮುಖ ಚಹರೆಯು ಮೇಲ್ನೋಟಕ್ಕೆ ಉತ್ತರ ಭಾರತ ಹಾಗೂ ಪಶ್ಚಿಮ ಬಂಗಾಳ ರಾಜ್ಯದ ಮಹಿಳೆಯರಿಗೆ ಹೋಲಿಕೆಯಾಗುತ್ತಿತ್ತು.

ವಾಚ್ ನಲ್ಲಿತ್ತು ಯುವತಿಯ ಮಾಹಿತಿ;

ಎರಡನೇ ತಂಡವು ಪಶ್ಚಿಮ ಬಂಗಾಳ ಮತ್ತು ದೆಹಲಿಗೆ ತೆರಳಿ ಮೃತಳ ಬಗ್ಗೆ ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ತೊಡಗಿತ್ತು. ಪಶ್ಚಿಮ ಬಂಗಾಳದ ಕೊಲ್ಕತ್ತಾ ನಗರಕ್ಕೆ ಹೋದ ತಂಡವು ಎಲ್ಲಾ ಪೊಲೀಸ್ ಠಾಣೆಗಳಿಗೂ ಭೇಟಿ ನೀಡಿ ಅಪರಿಚಿತ ಮಹಿಳೆಯ ಕೊಲೆ ಪ್ರಕರಣದ ಬಗ್ಗೆ ವಿಚಾರಿಸುತ್ತಿರುವಾಗ ಅಲ್ಲಿನ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಓರ್ವ ಮಹಿಳೆ ಕಾಣೆಯಾದ ಬಗ್ಗೆ ಮಾಹಿತಿ ದೊರೆತಿತ್ತು. ಆ ಮಹಿಳೆಯ ಚಹರೆಯು ಬಾಗಲೂರು ಪೊಲೀಸ್ ಠಾಣೆಯ ಕೊಲೆ ಪ್ರಕರಣದ ಅಪರಿಚಿತ ಮಹಿಳೆಯ ಚಹರೆಗೆ ಹೋಲಿಕೆಯಾಗುತ್ತಿದ್ದರಿಂದ ಆಕೆಯ ಸಂಬಂಧಿಕರನ್ನು ಸಂಪರ್ಕಿಸಿದ್ದರು. ಮೃತಳ ಭಾವಚಿತ್ರ, ಧರಿಸಿದ್ದ ಬಟ್ಟೆ, ವಾಚ್ ಮತ್ತು ಉಂಗುರವನ್ನು ತೋರಿಸಿದಾಗ ಆಕೆ ತನ್ನ ಪತ್ನಿ ಪೂಜಾಸಿಂಗ್ ದೇ ಎಂದು ಪತಿ ಸೌದೀಪ್ ದೇ ಗುರುತಿಸಿರುತ್ತಾರೆ.

ಕೇವಲ 500 ರೂ ಗೆ ಕೊಲೆ?

ಅದರಂತೆ ಪತಿ ನೀಡಿದ ಮಾಹಿತಿಯಂತೆ ಪೂಜಾಸಿಂಗ್ ಮಾಡೆಲಿಂಗ್‌ ನಂತರ ಬ್ಯೂಟಿಶಿಯನ್‌ ಆಗಿ ಕೆಲಸ ಮಾಡುತ್ತಿದ್ದಳು ಇವಳು ಬೆಂಗಳೂರಿಗೆ ಬಂದು ಹೊಸೂರು ರಸ್ತೆ ಬಳಿಯ ಹೋಟೆಲ್‌ನಲ್ಲಿ ಇದ್ದಳು. ಎರಡು ದಿನಗಳ ಬಳಿಕ ವಾಪಸ್‌ ಕೋಲ್ಕೋತಾಗೆ ತೆರಳಲು ಓಲಾ ಕ್ಯಾಬ್‌ ಬುಕ್‌ ಮಾಡಿದ್ದರು. ವಿಮಾನ ನಿಲ್ದಾಣದಿಂದ ಕ್ಯಾಬ್ ನಲ್ಲಿ ಹೋಗುವಾಗ ಜುಲೈ 31 ಮುಂಜಾನೆ 5.30ಕ್ಕೆ ಹೋಗುವಾಗ ನಾಗೇಶ್ ಆಕೆಯ ಬಳಿ ಹಣ ದೋಚುವ ಪ್ಲಾನ್ ಮಾಡಿದ್ದ. ಪ್ಲಾನ್ ನಂತೆ ಹಣ ದೋಚಲು ಮುಂದಾದ ವೇಳೆ ವಿರೋಧಿಸಿದ ಪೂಜಾಳನ್ನ ಜಾಕ್ ರಾಡ್ ನಿಂದ ಹೊಡೆದು ಹತ್ಯೆ ಮಾಡಿದ್ದಾನೆ.ಆ ವೇಳೆ ಡ್ರೈವರ್ ಕೈಗೆ ಸಿಕ್ಕಿದ್ದು ಕೇವಲ 500 ರು. ಮಾತ್ರ ಎಂದು ಈಶಾನ್ಯ ವಿಭಾಗ ಡಿಸಿಪಿ ಭೀಮಾಶಂಕರ್‌ ಎಸ್‌.ಗುಳೇದ್‌ ಮಾಹಿತಿ ನೀಡಿದ್ದಾರೆ. ಕೊಲೆ ಮಾಡಿದ್ದು ಹಣಕ್ಕಾಗಿ ಎಂದು ಡ್ರೈವರ್ ಕೂಡ ಒಪ್ಪಿಕೊಂಡಿದ್ದಾನೆ.