ಕಡೆಗೂ ಬ್ಯಾಂಕ್-ಗಳ ತಳುಕು; ಬ್ಯಾಂಕಿಂಗ್ ಕೇತ್ರದಲ್ಲಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡ ಮೋದಿ ಸರ್ಕಾರ..

0
429

ಬ್ಯಾಂಕ್​ ಆಫ್ ಬರೋಡಾ, ದೇನಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್​ಗಳ ವಿಲೀನವನ್ನು ವಿರೋಧಿಸಿ ಯುಎಫ್​ಬಿಯು ಮುಷ್ಕರಕ್ಕೆ ಕರೆ ನೀಡಿ ದೇಶದೆಲ್ಲಡೆ ಬ್ಯಾಂಕ್ ನೌಕರರು ಹೋರಾಟ ನಡೆಸಿದ್ದರು. ಇದ್ಯಾವುದಕ್ಕೂ ಬಗ್ಗದ ಕೇಂದ್ರ ಸರ್ಕಾರ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ವಿಜಯ ಬ್ಯಾಂಕ್‌, ದೇನಾ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್‌ ಬರೋಡಾ ವಿಲೀನಕ್ಕೆ ಕೇಂದ್ರ ಸಚಿವ ಸಂಪುಟ ಹಸಿರು ನಿಶಾನೆ ತೋರಿ ಈ ವಿಲೀನದೊಂದಿಗೆ ಬ್ಯಾಂಕ್-ಗಳ ಶಕ್ತಿಯನ್ನು ಹೆಚ್ಚಿಸಿದೆ.

ಹೌದು ದೇಶದಲ್ಲಿ ಮೂರೂ ಸರಕಾರಿ ಬ್ಯಾಂಕ್​ಗಳು ಏಕಕಾಲದಲ್ಲಿ ವಿಲೀನಗೊಂಡಿದ್ದು ಇದೇ ಮೊದಲು ಬಾರಿ. ಈ ಪ್ರಕ್ರಿಯೆಯಿಂದ ಬ್ಯಾಂಕ್ ಆಫ್ ಬರೋಡಾ ಮೂರನೇ ಅತಿದೊಡ್ಡ ಸರಕಾರಿ ಬ್ಯಾಂಕ್ ಎನಿಸಲಿದೆ. ಈ ಹಿಂದೆ ಸ್ಟೇಟ್ ಬ್ಯಾಂಕ್ ಮೈಸೂರು ಬ್ಯಾಂಕನ್ನು ಎಸ್​ಬಿಐನೊಂದಿಗೆ ವಿಲೀನಗೊಳಿಸಲಾಗಿತ್ತು. ವೈಶ್ಯ ಬ್ಯಾಂಕ್ ಕೂಡ ಕೆಲವಾರು ಬಾರಿ ವಿಲೀನ ಪ್ರಕ್ರಿಯೆಯಲ್ಲಿ ಭಾಗಿಯಾಗಿದೆ. ಆದರೆ, ಮೂರು ಸರಕಾರಿ ಬ್ಯಾಂಕ್​ಗಳು ಏಕಕಾಲದಲ್ಲಿ ವಿಲೀನಗೊಂಡಿದ್ದು ಈ ವಿಲೀನದೊಂದಿಗೆ ಬ್ಯಾಂಕ್ ಆಫ್ ಬರೋಡಾ(BOB)ದ ಶಕ್ತಿ ಗಣನೀಯವಾಗಿ ಹೆಚ್ಚಾಗಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಐಸಿಐಸಿಐ ನಂತರ ಬಿಓಬಿ ಮೂರನೇ ಅತಿದೊಡ್ಡ ಸರಕಾರಿ ಸ್ವಾಮ್ಯದ ಬ್ಯಾಂಕ್ ಎನಿಸಲಿದೆ.

3 ತಿಂಗಳಿಂದ ತಯಾರಿ:

ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದ ಪರ್ಯಾಯ ಪ್ರಕ್ರಿಯೆ ಸಮಿತಿ ಆಲ್ಟರ್ನೇಟಿವ್ ಮೆಕ್ಯಾನಿಸಮ್ ಪ್ಯಾನೆಲ್ (Alternative Mechanism Panel) ಮೂರು ತಿಂಗಳ ಹಿಂದೆಯೇ ಈ ಮೂರು ಬ್ಯಾಂಕ್​ಗಳ ವಿಲೀನಕ್ಕೆ ನಿರ್ಧಾರ ಕೈಗೊಂಡಿತ್ತು ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್‌, ವಿಲೀನದ ನಂತರ ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ ನೌಕರರು ಬ್ಯಾಂಕ್‌ ಆಫ್‌ ಬರೋಡಾಗೆ ವರ್ಗಾವಣೆಯಾಗಲಿದ್ದಾರೆ. ದೇನಾ ಬ್ಯಾಂಕ್‌ನ 1000 ಷೇರು ಹೊಂದಿರುವವರಿಗೆ ಬ್ಯಾಂಕ್‌ ಆಫ್‌ ಬರೋಡಾದ 110 ಈಕ್ವಿಟಿ ಷೇರು ದೊರೆಯಲಿದೆ. ಅದೇ ರೀತಿ ವಿಜಯ ಬ್ಯಾಂಕ್‌ನ 1000 ಷೇರು ಹೊಂದಿರುವವರಿಗೆ 402 ಈಕ್ವಿಟಿ ಷೇರು ದೊರೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದಲ್ಲೇ ಹುಟ್ಟಿದ ಬ್ಯಾಂಕ್:

ಕರ್ನಾಟಕದಲ್ಲಿ ಬ್ಯಾಂಕಿಂಗ್ ಕ್ಷೇತ್ರ ಅತ್ಯಂತ ಪ್ರಬಲವಾಗಿದ್ದು ಸಮೃದ್ಧ ಇತಿಹಾಸ ಹೊಂದಿದೆ. ಭಾರತದಲ್ಲಿ ಬಹುತೇಕ ಅಗ್ರಗಣ್ಯ ಬ್ಯಾಂಕ್​ಗಳು ಶುರುವಾಗಿದ್ದು ಕರ್ನಾಟಕದಲ್ಲಿ, ಅದರಲ್ಲೂ ಕರಾವಳಿಯಲ್ಲೇ. ಈ ರಾಜ್ಯದಲ್ಲಿ ಪ್ರಾರಂಭವಾದ ಮೊದಲ ಬ್ಯಾಂಕುಗಳಲ್ಲಿ ವಿಜಯ ಬ್ಯಾಂಕ್ ಕೂಡ ಒಂದು. 1931ರ ಅಕ್ಟೋಬರ್ 23ರಂದು ಮಂಗಳೂರಿನಲ್ಲಿ ಎ.ಬಿ. ಶೆಟ್ಟಿ ನೇತೃತ್ವದಲ್ಲಿ ಬಂಟ ಸಮುದಾಯದ ರೈತರೇ ಈ ವಿಜಯ ಬ್ಯಾಂಕ್ ಸ್ಥಾಪನೆ ಮಾಡಿದ್ದರು. ಅಗಾಧವಾಗಿ ಬೆಳೆದಿರುವ ವಿಜಯ ಬ್ಯಾಂಕ್ ದೇಶಾದ್ಯಂತ 2 ಸಾವಿರಕ್ಕೂ ಹೆಚ್ಚು ಶಾಖೆಗಳನ್ನ ಹೊಂದಿದ್ದು ಉತ್ತಮಸ್ಥಿತಿಯಲ್ಲಿದೆ.

ವಿಲೀನತೆಯ ಲಾಭ ಏನು?

ಬ್ಯಾಂಕ್​​ಗಳ ಸಾಲ ಹಂಚಿಕೆ ಸಾಮರ್ಥ್ಯ ಹೆಚ್ಚಲಿದೆ.
ರಾಷ್ಟ್ರೀಯ ಯುವ ಸಶಕ್ತೀಕರಣ ಯೋಜನೆಗೆ -ಠಿ;1160 ಕೋಟಿ
ಎನ್​ಪಿಎ ಸುಳಿಯಲ್ಲಿ ಸಿಲುಕಿರುವ ದೇನಾ ಬ್ಯಾಂಕ್​ಗೆ ಮರುಜೀವ
ಜಾಗತಿಕ ಬ್ಯಾಂಕ್​ಗಳ ಜತೆ ಸ್ಪರ್ಧೆ, ಸಂಪುಟದ ಇತರ ನಿರ್ಣಯಗಳು
ಅಸ್ಸಾಂನ ವಿಧಾನಸಭೆ, ಸ್ಥಳೀಯ ಸಂಸ್ಥೆ, ಸರ್ಕಾರಿ ಉದ್ಯೋಗಗಳಲ್ಲಿ ಆಸ್ಸಾಮಿಗಳಿಗೆ ಮೀಸಲು ನೀಡುವ ಕುರಿತು ಉನ್ನತ ಮಟ್ಟದ ಸಮಿತಿ ರಚನೆ
ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ ಜಾರಿಗೆ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ರಚನೆ. ಹೀಗೆ ಹಲವಾರು ಇತರೆ ಪ್ರಯೋಜನಗಳು ಸಿಗಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.