ಟಿವಿ ವಿಕ್ಷಕರಿಗೆ ಬಿಗ್ ಶಾಕ್; ನಾಳೆ ಸಂಪೂರ್ಣವಾಗಿ ಭಾರತದ್ಯಾದಂತ ಟಿವಿ ಕೇಬಲ್ ಬಂದ್..

0
524

ನಾಳೆ ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಟಿವಿ ಕೇಬಲ್ ಬಂದ್..!

ಟಿವಿ ಚಾನಲ್ ಗಳಿಗೆ ಸಂಬಂಧಪಟ್ಟಂತೆ ಹಲವು ದಿನಗಳಿಂದ ಗೊಂದಲಗಳು ನಡೆಯುತ್ತಾನೆ ಇವೆ. ಈ ಹಿಂದೆ ಚಾನಲ್-ಗಳ ಬೆಲೆ ಏರಿಸುವುದ್ದಾಗಿ ಹೇಳಿ ಟಿವಿ ವಿಕ್ಷಕರಿಗೆ ಟ್ರಾಯ್‌ ಶಾಕ್ ನೀಡಿತ್ತು. ಈ ವಿಷಯಕ್ಕೆ ಸಂಬಧಪಟ್ಟಂತೆ ವ್ಯಾಪಕ ವಿರೋಧಗಳು ಕೇಳಿ ಬಂದವು ಆದಾದ ನಂತರ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಹೊಸ ನಿಯಮ ಜಾರಿ ಮಾಡಿ. ಗ್ರಾಹಕರು ಪ್ರತಿ ತಿಂಗಳು ಕೇವಲ 153 ರುಪಾಯಿ ಹಣ ನೀಡಿ 100 ಚಾನೆಲ-ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ತಿಳಿಸಿತ್ತು.

Also read: ಮುಂದಿನ ತಿಂಗಳಿಂದ 153 ರೂ. ನಲ್ಲಿ 100 ಚಾನೆಲ್​ಗಳನ್ನು ನೋಡಬಹುದು; ಜನವರಿ 31 ರೊಳಗೆ 100 ಚಾನೆಲ್ ಗಳನ್ನು ಆರಿಸಿಕೊಳ್ಳಿ..

ಈಗ ಅದೇ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಜಾರಿಗೊಳಿಸುತ್ತಿರುವ ತಮಗೆ ಬೇಕಾದ ಚಾನಲ್‍ಗಳನ್ನು ಗ್ರಾಹಕರೇ ಆಯ್ಕೆ ಮಾಡುವ ಕೇಬಲ್ ಮತ್ತು ಡಿಟಿಎಚ್ ನೀತಿ ವಿರೋಧಿಸಿ ನಾಳೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10ರವರೆಗೆ ಕೇಬಲ್ ಬಂದ್ ಮಾಡಲು ಕೇಬಲ್ ಟಿವಿ ಆಪರೇಟರ್ ಸಂಘಟನೆಗಳು ನಿರ್ಧರಿಸಿವೆ. ಗ್ರಾಹಕರು ಮತ್ತು ಕೇಬಲ್ ಆಪರೇಟರ್‍ಗಳ ಹಿತದೃಷ್ಟಿಯಿಂದ ದಕ್ಷಿಣ ಭಾರತದಾದ್ಯಂತ ಕೇಬಲ್ ಟಿವಿ ಬಂದ್ ಮಾಡಲು ತೀರ್ಮಾನಿಸಲಾಗಿದೆ. ಹಾಗಾಗಿ ಕರ್ನಾಟಕದಲ್ಲೂ ಅಂದು ಕೇಬಲ್ ಟಿವಿಗಳು ಬಂದ್ ಆಗಲಿವೆ ಎಂದು ಕೇಬಲ್ ಆಪರೇಟರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಪ್ಯಾಟ್ರಿಕ್ ರಾಜು ತಿಳಿಸಿದ್ದಾರೆ.

ಈ ನಿಯಮದಿಂದ ನಡೆಯುವ ಹೋರಾಟದ ಬಿಸಿ ದಕ್ಷಿಣ ಭಾರತ ಮಾತ್ರವಲ್ಲದೇ ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ನಾಳೆ ಕೇಬಲ್ ಟಿವಿ ಆಪರೇಟಿಂಗ್ ಸಿಸ್ಟಂ ಸ್ಥಗಿತಗೊಳಿಸಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಗ್ರಾಹಕರಿಗೆ ಮಾಧ್ಯಮಗಳ ಮೂಲಕ ಮಾಹಿತಿ ನೀಡಲಾಗಿದೆ. ಒಂದು ದಿನದ ಮಟ್ಟಿಗೆ ಸಾಂಕೇತಿಕವಾಗಿ ಟಿವಿ ಚಾನಲ್ ಬಂದ್ ಮಾಡಲಾಗುತ್ತಿದೆ. ಅದೇರೀತಿ ರಾಜ್ಯ ಕೇಬಲ್ ಆಪರೇಟರ್ಸ್ ಅಸೋಸಿಯೇಷನ್ ನಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ನಾಳೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ಕೇಬಲ್ ಸ್ಥಗಿತಗೊಳಿಸಲು ಒಮ್ಮತದ ತೀರ್ಮಾನ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಕೇಬಲ್ ಅಸೋಸಿಯೇಷನ್ ಅಧ್ಯಕ್ಷ:

ಈ ಹೋರಾಟಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ರಾಜ್ಯ ಕೇಬಲ್ ಅಸೋಸಿಯೇಷನ್ ಅಧ್ಯಕ್ಷರು ರಾಜ್ಯದ ತುಂಬೆಲ್ಲ ಕೇಬಲ್ ಆಪರೇಟರ್ಸ್ ಅಸೋಸಿಯೇಷನ್‍ ಸಭೆ ನಡೆಸಿ ಒಮ್ಮತದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ‘ಟ್ರಾಯ್ ನ ಹೊಸ ನೀತಿಯಿಂದ ಗ್ರಾಹಕರಿಗೆ ಹೊರೆಯಾಗಲಿದೆ. ಕಡಿಮೆ ಚಾನೆಲ್ ನೋಡಿ ಸಾವಿರದ ತನಕ ಹಣ ಕಟ್ಟುವಂತೆ ಗ್ರಾಹಕರ ಮೇಲೆ ಹೊರೆ ಹೊರಿಸಲಾಗಿದೆ. ಅಲ್ಲದೇ ಶೇ.18 ಜಿಎಸ್ ಟಿ ಸಹ ಗ್ರಾಹಕರ ಮೇಲೆ ಹೇರಲಾಗಿದೆ. ಅವರ ಮನೆಯಲ್ಲಿ ಕುಳಿತು ಟಿವಿ ನೋಡುವುದಕ್ಕೆ ತೆರಿಗೆ ಕಟ್ಟಬೇಕು’ ಅಲ್ಲದೇ 300 ರೂ.ಗೆ 400 ಕ್ಕೂ ಹೆಚ್ಚಿನ ಚಾನೆಲ್ ಗಳನ್ನು ಕೇಬಲ್ ಆಪರೇಟರ್ ಗಳು ನೀಡುತ್ತಿದ್ದಾರೆ. ಟ್ರಾಯ್ ಹೊಸ ನೀತಿಯಿಂದ ಗ್ರಾಹಕರು ಕೇಬಲ್ ಗಾಗಿ 1 ಸಾವಿರ ರೂ.ಗಿಂತಲೂ ಹೆಚ್ಚಿನ ಹಣವನ್ನು ಕಟ್ಟಬೇಕು. ಟ್ರಾಯ್ ಗ್ರಾಹಕ ವಿರೋಧಿ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸುವ ಸಲುವಾಗಿ ವಾಹಿನಿಗಳ ಪ್ರಸಾರವನ್ನು ಸ್ಥಗಿತಗೊಳ್ಳಿಸುತ್ತೇವೆ ಎಂದು ತಿಳಿಸಿದ್ದಾರೆ.

ಪ್ರಧಾನಿ ಮಧ್ಯ ಪ್ರವೇಶಕ್ಕೆ ಆಗ್ರಹ:

ಈ ಹಿಂದೆ ನಡೆದ ಹೋರಾಟದಲ್ಲಿ ಕೇಬಲ್‌ ಅಪರೇಟರ್‌ಗಳ ಮೇಲಾಗಲಿರುವ ಸಮಸ್ಯೆಗಳ ಬಗ್ಗೆ ಸಂಸದರ ಮೂಲಕ ಕೇಂದ್ರ ಸಚಿವ ಅರುಣ್‌ ಜೇಟ್ಲಿ ಅವರ ಗಮನ ಸೆಳೆಯಲಾಗಿತ್ತು. ಅಲ್ಲದೆ ಸಂಘದ ರಾಜ್ಯ ಘಟಕದ ವತಿಯಿಂದ ಮಾಹಿತಿ ಹಾಗೂ ಪ್ರಸಾರ ಸಚಿವ ರಾಜ್ಯವರ್ಧನ ಸಿಂಗ್‌ ರಾಥೋಡ್‌ ಅವರನ್ನು ಭೇಟಿ ಮಾಡುವ ಉದ್ದೇಶ ಹೊಂದಿದರು ಇಲ್ಲಿಯೂ ಕೂಡ ಸಮಸ್ಯೆ ಬಗೆಹರಿಯದಿದ್ದ, ಕಾರಣ ಕೇಬಲ್‌ ಅಪರೇಟರ್‌ಗಳು ಮುಷ್ಕರಕ್ಕೆ ಇಳಿಯುವುದು ಅನಿವಾರ್ಯವಾಗಲಿದೆ. ಹೀಗಾಗಿ ತುರ್ತಾಗಿ ಪ್ರಧಾನಿ ಮೋದಿ ಅವರು ಮಧ್ಯೆ ಪ್ರವೇಶಿಸಬೇಕು ಎಂದು ಕೇಬಲ್ ಆಪರೇಟರ್ಸ್ ಅಸೋಸಿಯೇಷನ್‍ ತಿಳಿಸಿದೆ.

Also read: ಬರುವ ಶೈಕ್ಷಣಿಕ ವರ್ಷದಿಂದಲೇ ಉನ್ನತ ವ್ಯಾಸಂಗದಲ್ಲಿ ಶೇಕಡ 10% ಮೀಸಲಾತಿ ಅನ್ವಯವಾಗಲಿದೆ!!