ಉದ್ಯಮಿ ಸಿದ್ಧಾರ್ಥ್ ನದಿಗೆ ಹಾರಿದ ಸ್ಥಳದಿಂದ 4-5 ಕಿ.ಮೀ ದೂರದಲ್ಲಿ ಸಿಕ್ಕ ಮೃತದೇಹ; ಮೃತದೇಹ ಪತ್ತೆ ಮಾಡಿದ ಮೀನುಗಾರ ಹೇಳಿದ ಸತ್ಯವೇನು??

0
698

ಮೃತದೇಹ ಪತ್ತೆ ಮಾಡಿದ ಮೀನುಗಾರ:

ಉದ್ಯಮಿ ಕೆಫೆ ಕಾಫಿ ಡೇ ಸ್ಥಾಪಕ ಸಿದ್ಧಾರ್ಥ್​ ಹೆಗಡೆ ಮೃತಪಟ್ಟಿರುವುದು ಅಧಿಕೃತವಾಗಿದೆ. ಕಳೆದ 35 ಘಂಟೆಗಳಿಂದ ಸಿದ್ಧಾರ್ಥ್ ಮೃತದೇಹ ಪತ್ತೆಗಾಗಿ ಶೋಧ ನಡೆಸಿತ್ತು. ಇಂದು ಬೆಳಗ್ಗೆ 7 ಘಂಟೆಯ ಸುಮಾರಿಗೆ ಮೀನು ಹಿಡಿಯಲು ಹೋದ ಮೀನುಗಾರರಿಗೆ ನೇತ್ರಾವತಿ ನದಿ ಹಿನ್ನೀರಿನಲ್ಲಿ ಅವರ ಶವ ಪತ್ತೆ ಆಗಿದೆ. ಆದರೆ ಉದ್ಯಮಿ ನೀರಿನಲ್ಲಿ ಮುಳುಗಿದ್ದಾರೆ. ಎನ್ನುವುದು ಒಂದೇ ಕಡೆಯಾದರೆ ಇನ್ನೊಂದು ಕಡೆ ಅವರನ್ನು ಯಾರೋ ಅಪಹರಿಸಿದ್ದಾರೆ ಎನ್ನುವ ಅನುಮಾನ ಕೂಡ ಇತ್ತು. ಆದರೆ ಇಂದು ಅವರ ಮೃತದೇಹದ ಸಿಕ್ಕಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದು ಅಧಿಕ್ರುತವಾಗಿದೆ.

ಸಿದ್ಧಾರ್ಥ್ ಮೃತದೇಹ ಪತ್ತೆಯಾಗಿದ್ದು ಹೇಗೆ?

ನೇತ್ರಾವತಿ ನದಿಯಲ್ಲಿ ಮೀನು ಹಿಡಿಯಲು ಹೋದ ಸಂಧರ್ಭದಲ್ಲಿ ಒಂದು ಡೆಡ್ ಬಾಡಿ ತೇಲುತ್ತಿತ್ತು ಅದನ್ನು ಕಂಡ ರಿತೇಶ್ ಎಂಬವರು ಅನುಮಾನದ ಮೇರೆಗೆ ಡೆಡ್ ಬಾಡಿಯನ್ನು ದಡಕ್ಕೆ ತಂದಿದ್ದಾರೆ. ಇದರ ಬಗ್ಗೆ ಮೀನುಗಾರ ಮಾಹಿತಿ ನೀಡಿದ್ದು ಹೇಗೆ ದೇಹ ಪತ್ತೆಯಾಯಿತು ಎಂದು ಹೇಳಿದ್ದು ಹೀಗಿದೆ. ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಮೀನು ಹಿಡಿಯಲು ಮೂವರು ದೋಣಿಯಲ್ಲಿ ಹೋಗುತ್ತಿದ್ದೆವು. ಮೃತದೇಹ ತೇಲುತ್ತಿರುವುದನ್ನು ಕಂಡು ಇದು ಸಿದ್ಧಾರ್ಥ್ ಅವರದ್ದೇ ಆಗಿರಬಹುದೆಂದು ಅನುಮಾನದಲ್ಲಿ ದೋಣಿಯ ಬದಿಯಲ್ಲಿ ಶವವನ್ನು ಹಿಡಿದುಕೊಂಡು ದಡಕ್ಕೆ ತಂದಿದ್ದೇವೆ. ಆ ನಂತರ ಪೊಲೀಸರಿಗೆ ತಿಳಿಸಿದ್ದೇವೆ. ತಕ್ಷಣವೇ ರೌಂಡ್ಸ್ ನಲ್ಲಿರುವ ಪೊಲೀಸರಿಬ್ಬರು ಬಂದರು. ಅವರು ತಮ್ಮ ಮೇಲಾಧಿಕಾರಿಗಳಿಗೆ ತಿಳಿಸಿದರು ನಂತರ ಅವರೆಲ್ಲ ಬಂದಿರು ಸಿದ್ಧಾರ್ಥ್ ಇವರೇ ಎಂದು ಗುರುತ್ತಿಸಿದರು.

ನದಿಗೆ ಹಾರಿದ ಸ್ಥಳದಿಂದ ಮೃತದೇಹ ಸಿಕ್ಕಿದ ಜಾಗಕ್ಕೆ ಸುಮಾರು 4-5 ಕಿ.ಮೀ ದೂರವಿದೆ. ಅಲ್ಲಿ ಮೃತದೇಹ ಸಿಕ್ಕಿದೆ. ನಿನ್ನೆ ಮೀನುಗಾರಿಕಾ ಸಂಸ್ಥೆಯಿಂದ ಕರೆ ಬಂದಿತ್ತು. ಸ್ಥಳೀಯರಾಗಿರುವ ನಮಗೆ ಶೋಧ ಕಾರ್ಯ ಮಾಡಬೇಕೆಂಬ ಸೂಚನೆ ನೀಡಲಾಗಿತ್ತು. ಹೀಗಾಗಿ 4 ದೋಣಿಗಳ ಮೂಲಕ ತೆರಳಿ ನಿನ್ನೆ ಹುಡುಕಾಡಿದ್ದೇವೆ, ಅವರು ಹಾರಿದ ಭಾಗದಲ್ಲಿ 20-25 ಅಡಿ ಆಳವಿದ್ದು, ಮೃತದೇಹ ಸಿಕ್ಕಿದ ಭಾಗದಲ್ಲಿ 5-6 ಅಡಿ ಆಳವಿರಬಹುದು. ನೀರಿನೊಳಗೆ ಬಿದ್ದ ದೇಹ 18-24 ಗಂಟೆ ಮೇಲೆ ಬರಲು ಬೇಕಾಗುತ್ತದೆ ಎಂಬುದು ನಮ್ಮ ಅಂದಾಜು. ಇಷ್ಟು ಗಂಟೆಯ ಬಳಿಕ ಮೃತದೇಹ ಊದಿಕೊಳ್ಳುತ್ತದೆ. ಹೀಗಾಗಿ ಅದು ನೀರಿನಿಂದ ಮೇಲೆ ಬರುತ್ತವೆ. ಸಿದ್ದಾರ್ಥ್ ಅವರನ್ನು ಪತ್ತೆ ಹಚ್ಚಿದ್ದಕ್ಕಾಗಿ ಪೊಲೀಸ್ ಇಲಾಖೆ ಹಾಗೂ ಶಾಸಕ ಯು.ಟಿ ಖಾದರ್ ಅವರು ನಮಗೆ ಧನ್ಯವಾದ ತಿಳಿಸಿದ್ದಾರೆ ಎಂದು ರಿತೇಶ್ ಹೇಳಿದ್ದಾರೆ.

ಇನ್ನೂ ತಂದೆಗೆ ತಿಳಿದಿಲ್ಲ ಮಗನ ಸಾವಿನ ಸುದ್ದಿ?

ಸಿದ್ಧಾರ್ಥ ಅವರ ತಂದೆ ಗಂಗಯ್ಯ ಹೆಗ್ಡೆ ಕೋಮಾ ಸ್ಥಿತಿಯಲ್ಲಿದ್ದು, ಮೈಸೂರಿನ ಗೋಪಾಲಗೌಡ ಶಾಂತವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅವರ ಮಗನ ಸಾವಿನ ಸುದ್ದಿ ಅವರಿಗೆ ತಿಳಿದಿಲ್ಲ. ಕೇಳುವ ಸ್ಥಿತಿಯಲ್ಲಿವೂ ಇಲ್ಲ ಎಂದು ವ್ಯೆದ್ಯರು ತಿಳಿಸಿದ್ದಾರೆ. ಅವರು ಮನೆಯಲ್ಲಿ ಕಾಲು ಜಾರಿ ಬಿದ್ದು ಕೋಮಾಗೆ ಜಾರಿದ್ದಾರೆ. ಗುರುವಾರವಷ್ಟೇ ಸಿದ್ದಾರ್ಥ ಮೈಸೂರಿಗೆ ಆಗಮಿಸಿ, ತಂದೆ ಆರೋಗ್ಯ ವಿಚಾರಿಸಿದ್ದರು. ಮತ್ತೆ ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ್ದರು. ಅದೇ ಅವರ ಕೊನೇ ಭೇಟಿಯಾಗಿದೆ. ಈಗಾಗಲೇ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮಂಗಳೂರಿನಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಸಂಜೆ 6.30 ರ ವೇಳೆಗೆ ಅವರ ಹುಟ್ಟೂರಿನಲ್ಲೇ ಅಂತ್ಯಕ್ರಿಯೆ ನಡೆಯಲಿದೆ.

Also read: ಕೆಲ ವರ್ಷಗಳ ಹಿಂದೆ ಬಹಳ ಯಶಸ್ವಿಯಾಗಿದ್ದ ಸಿದ್ಧಾರ್ಥ್, ಇತ್ತೀಚೆಗೆ ಸೋಲು ಕಂಡಿದ್ದು ಹೇಗೇ? ಇಲ್ಲಿದೆ ನೋಡಿ ಪೂರ್ತಿ ಡೀಟೈಲ್!!