ಕಾಡುಗಳ್ಳ ವೀರಪ್ಪನ್‍ನಿಂದ ಡಾ. ರಾಜಕುಮಾರ್ ಬಿಡುಗಡೆ ಮಾಡಿದ್ದರ ಹಿಂದೆ ಕಾಫಿ ಕಿಂಗ್ ಸಿದ್ಧಾರ್ಥ್ ಅವರೇ ಮುಖ್ಯ ವ್ಯಕ್ತಿಯಂತೆ..

0
279

ಕಾಫಿ ಡೇ ಮಾಲೀಕ, ಸಿದ್ಧಾರ್ಥ್ ಹಲವು ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡ ಕಾರಣ ಇಡಿ ದೇಶದ ಜನರು ಶೋಕಾಚರಣೆಯಲ್ಲಿ ನಿರತರಾಗಿದ್ದಾರೆ. ಸಹಜ ವ್ಯಕ್ತಿತ್ವ, ಸಹಾಯದ ಗುಣ ಹೊಂದಿರುವ ಸಿದ್ಧಾರ್ಥ್ ಅಗಲಿಯಿಂದ ಇಡಿ ಕಾಫಿ ನಾಡು ಕಣ್ಣಿರಿನಲ್ಲಿ ಮುಳುಗಿದೆ. ಅದರಂತೆ ನಾಡಿನ ಜನರಿಗೆ ಸಿದ್ಧಾರ್ಥ್ ಅವರು ಮಾಡಿದ ಕೆಲಸಗಳು ಈಗ ಒಂದದ್ದಾಗಿ ಕೇಳಿಬರುತ್ತಿದ್ದು. ವರ ನಟ ಡಾ. ರಾಜ್‍ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್‍ನಿಂದ ಬಿಡುಗಡೆ ಮಾಡಿದ್ದರ ಹಿಂದೆ ಸಿದ್ಧಾರ್ಥ್ ಅವರ ಕೈವಾಡ ತುಂಬಾನೇ ಇದೆ. ಎನ್ನುವುದು ಈಗ ವೈರಲ್ ಆಗಿದೆ.

Also read: ಕೆಲ ವರ್ಷಗಳ ಹಿಂದೆ ಬಹಳ ಯಶಸ್ವಿಯಾಗಿದ್ದ ಸಿದ್ಧಾರ್ಥ್, ಇತ್ತೀಚೆಗೆ ಸೋಲು ಕಂಡಿದ್ದು ಹೇಗೇ? ಇಲ್ಲಿದೆ ನೋಡಿ ಪೂರ್ತಿ ಡೀಟೈಲ್!!

ರಾಜಕುಮಾರ್ ಬಿಡುಗಡೆಗೊಳಿಸಿದ್ದು ಸಿದ್ಧಾಥ್?

ಹೌದು 19 ವರ್ಷಗಳ ಹಿಂದೆ ಗಾಜನೂರಿನಿಂದ ಅಪಹರಣಕ್ಕೀಡಾಗಿದ್ದ ಸಂದರ್ಭದಲ್ಲಿ ಕಾಡುಗಳ್ಳ ವೀರಪ್ಪನ್‍ನಿಂದ ಬಿಡುಗಡೆ ಮಾಡಿದ್ದರ ಹಿಂದೆ ಸಿದ್ಧಾರ್ಥ್ ಪ್ರಮುಖ್ಯ ಪಾತ್ರವಹಿಸಿದ್ದಾರೆ. ಅಪಹರಣದ ಬಳಿಕ ರಾಜಣ್ಣನ ಕುಟುಂಬಸ್ಥರೊಂದಿಗೆ ಸಭೆ ನಡೆಸಿದ ಸಿದ್ಧಾರ್ಥ್ ಅವರು, ತಮಿಳುನಾಡು ಸರ್ಕಾರದ ಸಹಾಯ ಪಡೆದಿದ್ದರು. ಸಿಎಂ ಆಗಿದ್ದ ಎಸ್‍ಎಂ ಕೃಷ್ಣ ಅವರು ಆದಿಕೇಶವಲು ಜೊತೆ ಚೆನ್ನೈಗೆ ಹೋಗಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದರು ಎನ್ನಲಾಗಿದೆ. ಅದರ ಹಿಂದೆ ಇರುವ ಮಾಹಿತಿಯಂತೆ ಜುಲೈ 30ರ ಭಾನುವಾರ. ವರನಟ ಡಾ.ರಾಜ್‌ಕುಮಾರ್‌ ಅವರು ತಮ್ಮ ಪತ್ನಿ ಪಾರ್ವತಮ್ಮ ಅವರೊಂದಿಗೆ ತಮಿಳುನಾಡಿನ ತಾಳವಾಡಿಗೆ ತೆರಳಿದ್ದರು. ರಾತ್ರಿ ತೋಟದ ಮನೆಯಲ್ಲಿ ತಂಗಿದ್ದರು. ರಾತ್ರಿ ಊಟದ ಬಳಿಕ ಸುಮಾರು 9.30ರ ವೇಳೆಗೆ ರಾಜ್‌ ಕುಮಾರ್‌ ಟಿ.ವಿ.ನೋಡುತ್ತಿದ್ದಾಗ ಏಕಾಏಕಿ ತೋಟದ ಮನೆಗೆ ಮುತ್ತಿಗೆ ಹಾಕಿದ ಶಸ್ತ್ರ ಸಜ್ಜಿತ ಕಾಡುಗಳ್ಳ ವೀರಪ್ಪನ್‌ ಮತ್ತು ಆತನ ಸಹಚರರು ಡಾ.ರಾಜ್‌, ಅವರ ಅಳಿಯ ಎಸ್‌.ಎ. ಗೋವಿಂದರಾಜ್‌, ಸಂಬಂಧಿ ನಾಗೇಶ್‌ ಮತ್ತು ನಾಗಪ್ಪ ಮಾರಡಗಿ ಅವರನ್ನು ಅಪಹರಿಸಿದರು.

Also read: ದಿಢೀರ್ ನಾಪತ್ತೆಯಾಗಿರುವ ಮಾಜಿ ಸಿಎಂ ಎಸ್ ಎಂ ಕೃಷ್ಣ ಅಳಿಯ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಬರೆದ ಪತ್ರದಲ್ಲಿದೇ ರೋಚಕ ವಿಷಯ.!!

ಈ ಸುದ್ದಿ ರಾಜ್ಯದ ಜನತೆಗೆ ದೊಡ್ಡ ಆಘಾತ ತಂದೊಡ್ಡಿತ್ತು. ಇದಾದ ಸ್ವಲ್ಪ ಸಮಯದ ಬಳಿಕ ವೀರಪ್ಪನ್‌ ತನ್ನ ಬೇಡಿಕೆಗಳ ಕುರಿತಾದ ಕ್ಯಾಸೆಟ್‌ ಒಂದನ್ನು ಪಾರ್ವತಮ್ಮ ರಾಜ್‌ಕುಮಾರ್‌ ಅವರಿಗೆ ಕಳುಹಿಸಿಕೊಟ್ಟು, ಅದನ್ನು ರಾಜ್ಯದ ಮುಖ್ಯಮಂತ್ರಿಗೆ ನೀಡುವಂತೆ ಹೇಳಿದ್ದ. ಅಲ್ಲದೆ, ಅದರಲ್ಲಿರುವ ಬೇಡಿಕೆಗಳನ್ನು ಈಡೇರಿಸಿದರೆ ಡಾ.ರಾಜ್‌ ಅವರನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದ. ತಕ್ಷಣ ಪಾರ್ವತಮ್ಮ ಅವರು ದೂರವಾಣಿ ಮೂಲಕ ಆಗ ಮುಖ್ಯಮಂತ್ರಿಯಾಗಿದ್ದ ಎಸ್‌.ಎಂ.ಕೃಷ್ಣ ಅವರಿಗೆ ವಿಷಯ ತಿಳಿಸಿದ್ದಲ್ಲದೆ, ವೀರಪ್ಪನ್‌ ಕಳುಹಿಸಿದ್ದ ಕ್ಯಾಸೆಟ್‌ ಜತೆ ನೇರವಾಗಿ ಮುಖ್ಯಮಂತ್ರಿಗಳನ್ನು ಭೇಟಿಯಾದರು.

Also read: ಉದ್ಯಮಿ ಸಿದ್ಧಾರ್ಥ್ ನದಿಗೆ ಹಾರಿದ ಸ್ಥಳದಿಂದ 4-5 ಕಿ.ಮೀ ದೂರದಲ್ಲಿ ಸಿಕ್ಕ ಮೃತದೇಹ; ಮೃತದೇಹ ಪತ್ತೆ ಮಾಡಿದ ಮೀನುಗಾರ ಹೇಳಿದ ಸತ್ಯವೇನು??

ಈ ಸಮಯದಲ್ಲಿ ಮುಂದೆ ಬಂದ ಸಿದ್ಧಾರ್ಥ್ ರಾಜ್ ಕುಮಾರ್ ಅವರ ಕುಟುಂಬಸ್ಥರೊಂದಿಗೆ ಸಭೆ ನಡೆಸಿ ತಕ್ಷಣವೇ ಸಹಾಯಕ್ಕಾಗಿ ತಮಿಳುನಾಡು ಸರ್ಕಾರಕ್ಕೆ ಮನವಿಮಾಡಿ ಸಹಾಯ ಪಡೆದರು. ಅಷ್ಟೇ ಅಲ್ಲದೆ ಸಿಎಂ ಆಗಿದ್ದ ಎಸ್‍ಎಂ ಕೃಷ್ಣ ಅವರು ಆದಿಕೇಶವಲು ಜೊತೆ ಚೆನ್ನೈಗೆ ಹೋಗಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಬಳಸಿಕೊಂಡು ರಾಜ್ ಬಿಡುಗಡೆಗೆ ಪ್ರಯತ್ನಗಳು ಸಿದ್ದಾರ್ಥ್ ನೇತೃತ್ವದಲ್ಲಿ ನಡೆದಿದ್ದವು. ಬಳಿಕ ವೀರಪ್ಪನ್ ಸಂಪರ್ಕದಲ್ಲಿದ್ದ ತಮಿಳುನಾಡಿನ ಧನು, ನೆಡುಮಾರನ್ ಹಾಗೂ ಕೊಳತ್ತೂರು ಮಣಿಯನ್ನು ಸಂಪರ್ಕಿಸಿ ಕೊನೆಗೂ ರಾಜ್‍ಕುಮಾರ್ ಅವರನ್ನು ಬಿಡುಗಡೆ ಮಾಡಲಾಯಿತು. ಇದೆಲ್ಲ ಪರಿಶ್ರಮದ ಹಿಂದೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಪ್ರಾಮುಖ್ಯ ಪಾತ್ರವಹಿಸಿದ್ದರು ಎನ್ನಲಾಗಿದೆ.