ಸಿಎಜಿ ವರದಿ ಆಕ್ಷೇಪ: ಪ್ರಯಾಣಿಕರ ಬಳಕೆಗಾಗಿ ಯೋಗ್ಯವಾಗಿಲ್ಲ ರೈಲ್ವೆ ಆಹಾರ.

0
497

ಇತ್ತೀಚಿಗೆ ಸಿಎಜಿ ತಂಡ ಹಾಗೂ ರೈಲ್ವೆ ಇಲಾಖೆ ಜಂಟಿ ತಪಾಸಣೆ ನಡೆಸಿ ರೈಲಿನಲ್ಲಿ ಪ್ರಯಾಣಿಕರಿಗೆ ನೀಡುತ್ತಿರುವ ಊಟ ಮನುಷ್ಯರು ತಿನ್ನಲು ಯೋಗ್ಯವಿಲ್ಲ ಎಂದು ವರದಿಯನ್ನು ನೀಡಲಾಗಿದೆ. ಆಯ್ದ 74 ನಿಲ್ದಾಣಗಳು ಮತ್ತು 80 ರೈಲುಗಳಲ್ಲಿ ಅಧ್ಯಯನ ಮತ್ತು ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿದೆ. ಈ ವರದಿಯನ್ನು ಇಂದೇ ಸಂಸತ್ತಿನಲ್ಲಿ ವರದಿ ಮಂಡನೆಯಾಗಲಿದ್ದು, ಈ ವರದಿ ಭಾರಿ ಕೋಲಾಹಲಕ್ಕೆ ಕಾರಣವಾಗುವ ನಿರೀಕ್ಷೆ ಇದೆ.

ಭಾರತೀಯ ರೈಲ್ವೆಯ ಕೇಟರಿಂಗ್ ನೀತಿ ಪದೇಪದೇ ಬದಲಾಗಿರುವ ಕಾರಣದಿಂದ, ಪ್ರಯಾಣಿಕರಿಗೆ ಒದಗಿಸುವ ಕೇಟರಿಂಗ್ ಸೇವೆ ನಿರ್ವಹಿಸುವಲ್ಲಿ ಅನಿಶ್ಚಿತ ಸ್ಥಿತಿ ಇದೆ. ಇದರಿಂದಾಗಿ ಆಹಾರ ಪೂರೈಕೆ ಸೇರಿದಂತೆ ಪ್ರಯಾಣಿಕರಿಗೆ ಒದಗಿಸುವ ಆಹಾರ ಸೇವೆಗಳಲ್ಲಿ ಅನಿಶ್ಚಿತತೆ ಕಂಡು ಬಂದಿದೆ. ನೈರ್ಮಲ್ಯಕ್ಕೆ ಗಮನ ನೀಡುತ್ತಿಲ್ಲ. ಪಾನೀಯ ತಯಾರಿಸಲು ಶುದ್ಧೀಕರಿಸದ ನೀರನ್ನು ನೇರವಾಗಿ ಕೊಳಾಯಿಯಿಂದ ಬಳಸಲಾಗುತ್ತದೆ. ಮತ್ತು ರೈಲುಗಳಲ್ಲಿ ಪ್ರಯಾಣಿಕರು ಖರೀದಿಸುವ ಆಹಾರಕ್ಕೆ ಬಿಲ್‌ ಕೂಡ ನೀಡುತ್ತಿಲ್ಲ. ಆಹಾರ ಗುಣಮಟ್ಟ ಕಳಪೆಯಾಗಿದೆ. ಮಾರುಕಟ್ಟೆಗಿಂತ ಹೆಚ್ಚಿನ ಬೆಲೆಯಲ್ಲಿ ರೈಲಿನಲ್ಲಿ ಆಹಾರ ಮಾರಲಾಗುತ್ತಿದೆ. ಮರುಬಳಕೆ ಆಹಾರದ ಜತೆಗೆ ಅವಧಿ ಮುಗಿದ ಪ್ಯಾಕಿಂಗ್‌ ಆಹಾರ ಮತ್ತು ಅನಧಿಕೃತ ಬ್ರ್ಯಾಂಡ್‌ನ ನೀರಿನ ಬಾಟಲ್‌ಗಳನ್ನು ಮಾರಲಾಗುತ್ತಿದೆ ಎಂದು ದೃಡೀಕರಿಸಿದೆ.

ಅಷ್ಟೇ ಅಲ್ಲ, ರೈಲುಗಳು, ರೈಲ್ವೆ ಕೇಟರಿಂಗ್‌ ಘಟಕಗಳು, ನಿಲ್ದಾಣಗಳಲ್ಲಿ ಸ್ಚಚ್ಛತೆ ಇಲ್ಲವಾಗಿದೆ. ಟ್ಯಾಪ್‌ಗಳಲ್ಲಿ ಶುದ್ಧೀಕರಿಸದ ನೀರು ಪೂರೈಸಲಾಗುತ್ತಿದೆ. ಮುಚ್ಚಳ ಇಲ್ಲದ ಕಸದ ಬುಟ್ಟಿಗಳಿವೆ. ಆಹಾರ ತಯಾರಿ ಹಂತದಲ್ಲಿ ಸಾಮಗ್ರಿಗಳನ್ನು ಮುಚ್ಚಿಡದೆ ತೆರೆದೇ ಇರುತ್ತದೆ. ರೈಲುಗಳಲ್ಲಿ ಇಲಿ ಹಾಗೂ ಜಿರಲೆಗಳೂ ಕಂಡುಬಂದಿವೆ ಎಂದು ವರದಿಯಲ್ಲಿ ಕಳವಳ ವ್ಯಕ್ತವಾಗಿದೆ.

ರೈಲು ನಿಲ್ದಾಣಗಳಲ್ಲಿ ಮಾರಾಟ ಮಾಡುವ ತಿಂಡಿ ತಿನಿಸು ಅಷ್ಟೇ ಯಾಕೆ ನೀರಿನ ಬೆಲೆ ಮುಕ್ತ ಮಾರುಕಟ್ಟೆಗಿಂತ ಅಧಿಕ ಎಂದೂ ವರದಿ ಅಕ್ಷೇಪಿಸಿದೆ.