ಕೆನರಾ ಬ್ಯಾಂಕ್‌ನ ಅಂಗಸಂಸ್ಥೆಯಾದ ಕೆನ್‌ಫಿನ್‌ ಹೋಮ್ಸ್‌ ಲಿಮಿಟೆಡ್‌ ನಲ್ಲಿ ಉದ್ಯೋಗ ಅವಕಾಶ

0
885

ರಾಜ್ಯದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾದ ಕೆನರಾ ಬ್ಯಾಂಕ್‌ನ ಅಂಗಸಂಸ್ಥೆಯಾದ ಕೆನ್‌ಫಿನ್‌ ಹೋಮ್ಸ್‌ ಲಿಮಿಟೆಡ್‌ ಕ್ಲರಿಕಲ್‌ ಕೇಡರ್‌ನ ಪ್ರೊಬೆಷನರಿ ಅಸಿಸ್ಟೆಂಟ್‌ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್‌ 14, 2017 (ಸಂಜೆ 5 ಗಂಟೆ ಮೊದಲು ಅರ್ಜಿ ಸಲ್ಲಿಸಬೇಕು)

ಹೆಚ್ಚಿನ ಮಾಹಿತಿಗೆ ವೆಬ್‌ : www.canfinhomes.com

ಒಟ್ಟು ಹುದ್ದೆಗಳ ಸಂಖ್ಯೆ: 32

ಹುದ್ದೆಗಳ ವಿವರ:
ಬೆಂಗಳೂರು-8, ಚೆನ್ನೈ-4, ಹೈದಾರಾಬಾದ್‌-5, ಮುಂಬೈ-4, ಜೈಪುರ-2, ಭೋಪಾಲ್‌-1, ಇಂದೋರ್‌-1, ದೆಹಲಿಯಲ್ಲಿ -5 ಹುದ್ದೆ ಸೇರಿದಂತೆ ಒಟ್ಟು 30 ಅಸಿಸ್ಟೆಂಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ:
ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಡೇಟಾ ಎಂಟ್ರಿ ಮತ್ತು ಕಂಪ್ಯೂಟರ್‌ ಬಳಕೆಯಲ್ಲಿ ಪರಿಣತಿ ಪಡೆದವರಿಗೆ ಆದ್ಯತೆ ನೀಡಲಾಗುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ಶಾಖೆಯ ವ್ಯಾಪ್ತಿಯ ಪ್ರಾದೇಶಿಕ ಭಾಷೆಯಲ್ಲಿ ಮಾತನಾಡಲು ತಿಳಿದಿರಬೇಕು. ಪ್ರೊಬೆಷನರಿ ಅವಧಿ 1 ವರ್ಷವಾಗಿರುತ್ತದೆ.

ವಯೋಮಿತಿ:
ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ಮತ್ತು ಗರಿಷ್ಠ 28 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಅಂದರೆ ಮೇ 1, 1989ರ ನಂತರ ಮತ್ತು ಮೇ 1, 1996ರ ಮೊದಲು ಜನಿಸಿದವರು ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ 100 ರೂಪಾಯಿ. ಕೆನರಾ ಬ್ಯಾಂಕ್‌ನ ಬೆಂಗಳೂರಿನ ಲಾಲ್‌ಬಾಗ್‌ ಶಾಖೆಯ ವಿಳಾಸಕ್ಕೆ ಕೆನ್‌ ಫಿನ್‌ ಹೋಮ್ಸ್‌ ಲಿಮಿಟೆಡ್‌ ಹೆಸರಿನಲ್ಲಿ (ಖಾತೆ ಸಂಖ್ಯೆ: 0684201001486) ಶುಲ್ಕ ಪಾವತಿಸಬೇಕು.

ನೇಮಕ ಹೇಗೆ?:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್‌ ಮಾಡಿ 1 ಹುದ್ದೆಗೆ 5 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಸಂದರ್ಶನದಲ್ಲಿ ಪಡೆದ ಒಟ್ಟು ಅಂಕಗಳ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.