ಜನರ ಬವಣೆ, ಕಷ್ಟಕ್ಕೆ ಮಿಡಿದ ಕೆನರಾ ಬ್ಯಾಂಕ್

0
758

ಜನರ ಬವಣೆ, ಕಷ್ಟಕ್ಕೆ ಮಿಡಿದ ಕೆನರಾ ಬ್ಯಾಂಕ್: ಪ್ರಧಾನ ವ್ಯವಸ್ಥಾಪಕರಾದ ಶ್ರೀ ಮನು ಚಿನ್ನಿವಾರ ರಿಂದ ‘ಸಂಚಾರಿ ಏಟಿಎಂ’ ನಿಯೋಜನೆ

ಬೆಂಗಳೂರಿನ ಹೃದಯ ಭಾಗದಲ್ಲಿರುವ ಎಂ.ಜಿ.ರೋಡ್ ನಲ್ಲಿ ಯಾವುದೋ ಕೆಲಸದ ನಿಮಿತ್ತ, ಕೆನರಾ ಬ್ಯಾಂಕಿನ ‘ಪ್ರಧಾನ ವ್ಯವಸ್ಥಾಪಕರಾದ’ ಶ್ರೀ ಚಿನ್ನಿವಾರರು ನಡೆದುಕೊಂಡು ಹೋಗುವಾಗ ಏಟಿಎಂ ನಲ್ಲಿ ದುಡ್ಡಿಲ್ಲದೆ ‘ATM OUT OF ORDER’ ನ ಸೂಚನಾ ಫಲಕಗಳನ್ನು ನೋಡಿದ್ದರು.

ಬ್ಯಾಂಕಿಗೆ ತೆರಳಿದ ನಂತರವೇ ಕಾರ್ಯಪ್ರವೃತ್ತರಾದ ಶ್ರೀ ಮನು ಚಿನ್ನಿವಾರರು ಕೂಡಲೇ ಕೆನರಾ ಬ್ಯಾಂಕಿನ ‘ಸಂಚಾರಿ ಏಟಿಎಂ’ ಅನ್ನು ಎಂ.ಜಿ ರೋಡ್ ನಲ್ಲಿ ಸಾರ್ವಜನಿಕರ ಸೇವೆಗಾಗಿ ನಿಯೋಜಿಸಿದರು.

© indiatimes

 

© indiatimes
© indiatimes

ಸುಮಾರು ೫:೩೦ ಕ್ಕೆ ಸಂಚಾರಿ ಏಟಿಎಂ ಸೇವೆಗೆ ನಿಯುಕ್ತಿಗೊಂಡಿತು. ಸುಮಾರು ೮ ಲಕ್ಷದಷ್ಟು ಹಣವನ್ನು ಬಟವಾಡೆ ಮಾಡಲಾಯಿತು. ಇನ್ನು ಕೆಲ ದಿನಗಳಲ್ಲಿ ಏಟಿಎಂ ನಲ್ಲಿ ಹಣ ತುಂಬಲಾಗುವುದು. ಏಟಿಎಂ ಗಳನ್ನೂ recalibrate ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಇನ್ನೆರಡು ಮೂರು ದಿನಗಳಲ್ಲಿ ಏಟಿಎಂ ಗಳು ಕಾರ್ಯನಿರ್ವಹಿಸುವುದೆಂದು ಚಿನ್ನಿವಾರರು ಹೇಳಿದ್ದಾರೆ.