ನೀವು ಈ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದೀರ? ಹಾಗಾದ್ರೆ ಪಕ್ಕಾ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಚ್ಚರ…

0
385

ಮನುಷ್ಯನ ಜೀವನ ಕ್ರಮಗಳು ಹೇಗೆ ಬದಲಾವಣೆಗೆ ಜಾರುತ್ತಿವೆ ಹಾಗೆಯೇ ಅಪಾಯವನ್ನು ಎದುರಿಸುತ್ತಿವೆ. ಏಕೆಂದರೆ ತಿನ್ನುವ ಆಹಾರದ ಕ್ರಮಗಳು ಹಾಗಿವೆ. ಹಿಂದಿನ ಕಾಲದಲ್ಲಿ ತಿನ್ನಲು ಸರಿಯಾಗಿ ಆಹಾರ ವಿಲ್ಲದಿದ್ದರೂ ಬಹಳಷ್ಟು ವರ್ಷ ಆರೋಗ್ಯಯುತವಾಗಿ ಬದುಕುತ್ತಿದರು. ಆ ದಿನಗಳಲ್ಲಿ ರಾಸಾಯನಿಕಗಳ ಬಳಕೆ ಮತ್ತು ವಿದ್ಯುತ್ ಉಪಕರಣಗಳಿಂದ ಆಹಾರವನ್ನು ತಯಾರಿಸುವುದು ಮತ್ತು ಗುಣಮಟ್ಟ ಕಾಪಾಡಲು ಪ್ರಿಜ್- ಅಂತ ವಸ್ತುಗಳನ್ನು ಬಳಸುತ್ತಿರಲಿಲ್ಲ. ಅದೇ ಮುಖ್ಯವಾಗಿತ್ತು. ಈಗಿನ ದಿನಗಳಲ್ಲಿ ಒಂದು ತಿಂಗಳಲ್ಲಿ ಬೆಳೆಯುವ ತರಕಾರಿ ಒಂದೆ ದಿನದಲ್ಲಿ ಬೆಳೆಸುವಷ್ಟು ವೈಜ್ಞಾನಿಕತೆ ಬೆಳೆದುಕೊಂಡಿದೆ. ಇದೆ ಮನುಷ್ಯನಿಗೆ ಮುಳುವಾಗಿ ಹಲವಾರು ಖಾಯಿಲೆಗಳನ್ನು ತರುತ್ತಿದೆ ಎಂಬುವುದು ಸಂಶೋಧನೆ ಒಂದು ತಿಳಿಸಿದೆ.

Also read: ಮಹಿಳೆಯರೇ ಸ್ತನ ಕ್ಯಾನ್ಸರ್-ನ ಈ ಲಕ್ಷಣಗಳು ಕಂಡರೆ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ, ದಯವಿಟ್ಟು ನಿರ್ಲಕ್ಷಿಸಬೇಡಿ!!

ಹೌದು ನಮ್ಮ ಆಹಾರ ಕ್ರಮದಿಂದ ಅನೇಕ ರೀತಿಯ ಅನಾರೋಗ್ಯ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಮುಖ್ಯವಾಗಿ ನಾವು ಸೇವಿಸುವ ದೈನಂದಿನ ಆಹಾರಗಳಿಂದಲೇ ಕ್ಯಾನ್ಸರ್​ ಎಂಬ ಮಾರಕಕ್ಕೆ ತುತ್ತಾಗುತ್ತಿದ್ದೇವೆ ಎಂಬ ಅಚ್ಚರಿಯ ಸಂಗತಿಯನ್ನು ವೈದ್ಯಲೋಕ ಮುಂದಿಟ್ಟಿದೆ. ಆಹಾರ ಪದ್ದತಿ ಮತ್ತು ಆಹಾರ ಸೇವನೆಯ ಕ್ರಮವು ಶರೀರದಲ್ಲಿ ಕೊಬ್ಬಿನಾಂಶವನ್ನು ಅಧಿಕಗೊಳಿಸಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ. ಹಾಗಾದ್ರೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಕೆಲ ಆಹಾರಗಳು ಮತ್ತು ಅವುಗಳ ಬಳಕೆ ಇಲ್ಲಿದೆ ನೋಡಿ.

ಆಲೂಗೆಡ್ಡೆ ಚಿಪ್ಸ್:

ಭಾರತವು ಆಲೂಗಡ್ಡೆ ಚಿಪ್ಸ್​ನ ಬಹೃತ್​ ಮಾರುಕಟ್ಟೆಯಾಗಿದೆ. ಹೀಗಾಗಿಯೇ ಅನೇಕ ಕಂಪೆನಿಗಳು ಆಲೂಗಡ್ಡೆ ಚಿಪ್ಸ್​ಗಳನ್ನು ಪ್ಯಾಕೆಟ್​ಗಳ ಮೂಲಕ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಆದರೆ ಇಂತಹ ಚಿಪ್ಸ್​ಗಳಲ್ಲಿ ಸೋಡಿಯಂ ಹಾಗೂ ರಾಸಾಯನಿಕ ಬಣ್ಣಗಳನ್ನು ಬಳಸಲಾಗುತ್ತದೆ. ಇದರಿಂದ ಕೂಡ ಕ್ಯಾನ್ಸರ್ ರೋಗ ಉಂಟಾಗಬಹುದು. ಎಂದು ತಿಳಿಸಿದ್ದಾರೆ.

ಫ್ರಿಜ್​ನಲ್ಲಿಡುವ ಹಣ್ಣುಗಳು:

ಬಹಳ ದಿನಗಳವರೆಗೆ ಫ್ರಿಜ್​ನಲ್ಲಿಡುವ ಹಣ್ಣುಗಳು ನೋಡಲು ತಾಜಾತನದಿಂದ ಕೂಡಿರುತ್ತವೆ. ಆದರೆ ಇಂತಹ ಹಣ್ಣುಗಳ ಪದರದ ಮೇಲೆ ರಾಸಾಯನಿಕ ಅಂಶಗಳು ಉಳಿದುಕೊಂಡಿರುತ್ತದೆ. ಇವುಗಳನ್ನು ಹೆಚ್ಚಾಗಿ ತಿನ್ನುವುದರಿಂದ ಕ್ಯಾನ್ಸರ್ ಸಂಭವಿಸುತ್ತದೆ. ಫ್ರಿಜ್​ನಲ್ಲಿ ನಿರ್ದಿಷ್ಟ ಸಮಯದವರೆಗೆ ಮಾತ್ರ ಹಣ್ಣು-ತರಕಾರಿಗಳನ್ನು ಇಡುವುದು ಆರೋಗ್ಯಕ್ಕೆ ಒಳ್ಳೆಯದು.

ಕಾಯ್ದಿರಿಸಿದ ಟೊಮ್ಯಾಟೊ ಪೇಸ್ಟ್:

ಟೊಮ್ಯಾಟೊ ಪೇಸ್ಟ್​ನ್ನು ದೀರ್ಘಕಾಲದವರೆಗೆ ಹಾಳಾಗದಂತೆ ಇಡಲು ಬಿಸ್ಫೆನಾಲ್-ಎ ಎಂಬ ರಾಸಾಯನಿಕವನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಡಬ್ಬಾದಲ್ಲಿ ಸಿಗುವ ಇಂತಹ ಟೊಮ್ಯಾಟೊ ಪೇಸ್ಟ್​ಗಳನ್ನು ಹೆಚ್ಚಾಗಿ ಬಳಸುವುದರಿಂದ ಕ್ಯಾನ್ಸರ್​ ರೋಗಕ್ಕೀಡಾಗುವ ಸಾಧ್ಯತೆ ಹೆಚ್ಚಿದೆ.

ಸಂಸ್ಕರಿಸಿದ ಮಾಂಸ:

ಈಗೀಗ ಪ್ರತಿಯೊಬ್ಬರೂ ಸಂಸ್ಕರಿಸಿದ ಆಹಾರ ಉತ್ಪನ್ನಗಳ ಮೊರೆ ಹೋಗುವವರೇ ಹೆಚ್ಚು. ಆದರೆ ಇಂತಹ ಮಾಂಸಾಹಾರಗಳನ್ನು ಕೆಡದಂತೆ ಸಂರಕ್ಷಿಸಿಡಲು ಸೋಡಿಯಂ ನೈಟ್ರೈಟ್​ ರಾಸಾಯನಿಕವನ್ನು ಬಳಸುತ್ತಾರೆ. ಈ ರೀತಿಯ ಸಂಸ್ಕರಿಸಿದ ಮಾಂಸವನ್ನು ಸೇವಿಸುವುದರಿಂದ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ರೋಗಗಳು ಹೆಚ್ಚುತ್ತಿವೆ.

ಪಾಪ್​ಕಾರ್ನ್​:

ಮೈಕ್ರೋವೇವ್​ನಲ್ಲಿ ತಯಾರಿಸಿದ ಪಾಪ್​ಕಾರ್ನ್​ನಿಂದ ಕೂಡ ಕ್ಯಾನ್ಸರ್​ ಬರಬಹುದು. ಏಕೆಂದರೆ ಮೈಕ್ರೋವೇವ್​ನಲ್ಲಿ ಪಾಪ್​ಕಾರ್ನ್​ನ್ನು ತಯಾರಿಸಿದರೆ ಪರ್ಫ್ಯೂಕ್ಟಾನೊಯಿಕ್ ಎಂಬ ಆ್ಯಸಿಡ್​ ಉತ್ಪತ್ತಿಯಾಗುತ್ತದೆ. ಹೀಗೆ ಸಿದ್ಧಪಡಿಸುವ ಪಾಪ್​ಕಾರ್ನ್​ನಿಂದ ಕ್ಯಾನ್ಸರ್​ ರೋಗದ ಅಪಾಯ ಹೆಚ್ಚಿದೆ. ಹೀಗಾಗಿಯೇ ಅಮೆರಿಕದಲ್ಲಿ ಪಾಪ್​ಕಾರ್ನ್​ ತಯಾರಿಸುವಾಗ ಸೋಯಾಬೀನ್ ಎಣ್ಣೆಯನ್ನು ಬಳಸುತ್ತಾರೆ.​

ಸಾಕಿದ ಮೀನು:

ಸಾಮಾನ್ಯವಾಗಿ ಸಾಲ್ಮನ್ ಮೀನುಗಳನ್ನು ಸಣ್ಣ ನೀರಿನ ತೊಟ್ಟಿಗಳಲ್ಲಿ ಸಾಕಲಾಗುತ್ತದೆ. ಏಕೆಂದರೆ ಈ ಮೀನುಗಳು ತಮ್ಮದೇ ಜಾತಿಯ ಮೀನುಗಳನ್ನೇ ತಿನ್ನುತ್ತದೆ. ಇದರಿಂದ ಈ ಮೀನುಗಳ ದೇಹದಲ್ಲಿ ಪಾದರಸದಂತಹ ಅಂಶಗಳು ಸಮೃದ್ಧವಾಗಿರುತ್ತದೆ. ಇಂತಹ ಮೀನುಗಳನ್ನು ದೀರ್ಘಕಾಲದವರೆಗೆ ಫ್ರೀಜರ್​​ನಲ್ಲಿರಿಸಿದರೆ ಅದು ವಿಷವಾಗಿ ಪರಿಣಮಿಸುತ್ತದೆ. ಅಮೆರಿಕದ ಅಲಸ್ಕಾದಲ್ಲಿ ತೆರೆದ ನೀರಿನ ತೊಟ್ಟಿಗಳಲ್ಲಿನ ಸಾಲ್ಮನ್ ಮೀನುಗಳನ್ನು ಸೇವಿಸಲು ಅವಕಾಶವಿದೆ. ಅದೇ ರೀತಿ ಫ್ರೀಜರ್​ನಲ್ಲಿರಿಸಿದ ಸಾಲ್ಮನ್​ ಮೀನುಗಳ ಮಾರಾಟವನ್ನು ನಿಷೇಧಿಸಲಾಗಿದೆ. ಇಂತಹ ಮೀನುಗಳನ್ನು ಆಹಾರ ಕ್ರಮದಲ್ಲಿ ಅಳವಡಿಸಿದರೂ ಕ್ಯಾನ್ಸರ್​ ರೋಗ ಉಂಟಾಗುವ ಸಾಧ್ಯತೆಯಿದೆ.

Also read: ವ್ಯದ್ಯರಿಂದ ವಾಸಿಯಾಗದ ಕ್ಯಾನ್ಸರ್-ಗೆ ಇಲ್ಲಿ ಸಿಗುತ್ತೆ ಔಷಧಿ; ಈ ಔಷಧಿಯಿಂದ ಲಕ್ಷಾಂತರ ಜನರ ಕೊನೆಯ ಹಂತದಲ್ಲಿರುವ ಕ್ಯಾನ್ಸರ್ ವಾಸಿಯಾಗಿದೆ..