ಕೇವಲ ಮಹಿಳೆಯರಿಗೆ ಅಷ್ಟೇ ಅಲ್ಲ ಪುರುಷರಿಗೂ ಸ್ತನ ಕ್ಯಾನ್ಸರ್ ಬರಬಹುದು, ಹೇಗೆ ಅಂತ ಈ ಮಾಹಿತಿ ನೋಡಿ..

0
644

ಕ್ಯಾನ್ಸರ್ ಖಾಯಿಲೆ ಮನುಷ್ಯನಿಗೆ ಮಹಾಮಾರಕವಾಗಿದೆ. ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಮಂದಿ ಕ್ಯಾನ್ಸರ್‍ ಗೆ ತುತ್ತಾಗುತ್ತಿದ್ದಾರೆ. ಈ ಕಾಯಿಲೆಗೆ ವಯಸ್ಸಿನ ಅಂತರ ವಿಲ್ಲದೆ. ಬರುವ ಖಾಯಿಲೆಯಾಗಿದ್ದು. ಇದಕ್ಕೆ ಹಲವು ಕಾರಣಗಳಿವೆ. ಅದರಲ್ಲಿ ಹೆಚ್ಚು ಮಾರಕವಾದ ಸ್ತನ ಕ್ಯಾನ್ಸರ್- ಹೆಚ್ಚಿನ ಸಂಖ್ಯೆಯ ಸಾವನ್ನು ತರುತ್ತಿದೆ. ಈ ಮೊದಲು ಸ್ತನ ಕ್ಯಾನ್ಸರ್ ಎಂದರೆ ಬರಿ ಮಹಿಳೆಯರಿಗೆ ಬರುವದ್ದಾಗಿದೆ ಎಂದು ತಿಳಿದಿದ್ದರೂ, ಇತ್ತೀಚಿಗೆ ಪುರುಷರಲ್ಲೂ ಸ್ತನ ಕ್ಯಾನ್ಸರ್ ಕಂಡು ಬರುತ್ತಿರುವುದು ಆಘಾತಕಾರಿಯಾಗಿದೆ. ರಾಜ್ಯದಲ್ಲಿ ವಾರ್ಷಿಕವಾಗಿ ಶೇ. 2 ರಷ್ಟು ಪುರುಷರಲ್ಲಿ ಸ್ತನ ಕ್ಸಾನ್ಯರ್ ಕಾಣಿಸಿಕೊಳ್ಳುತ್ತಿದೆ ಎಂದು ಗಂಥಿಶಾಸ್ತ್ರಜ್ಞರು ಹೇಳುತ್ತಾರೆ.

Also read: ಪೋಷಕರೇ ನಿಮ್ಮ ಮಕ್ಕಳಿಗೆ ಕ್ಯಾನ್ಸರ್ ಬರದಂತೆ ತಡೆಯಲು ಈ ಕ್ರಮಗಳನ್ನು ಪಾಲಿಸಿ..

ಹೌದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಅಂಕಿಸಂಖ್ಯೆಗಳ ಪ್ರಕಾರ ಒಟ್ಟಾರೆಯಾಗಿ 1200 ಹೊಸ ಸ್ತನ್ಯ ಕ್ಯಾನ್ಸರ್ ಪ್ರಕರಣಗಳಲ್ಲಿ ಕನಿಷ್ಠ ಪಕ್ಷ 30 ರಿಂದ 35 ಪುರುಷರಲ್ಲಿ ಸ್ತನ ಕ್ಯಾನ್ಸರ್ ಸಮಸ್ಯೆ ಕಂಡುಬರುತ್ತಿದೆ. ರಾಜ್ಯದಾದ್ಯಂತ ಪಡೆದ ಪ್ರಕರಣಗಳಿಗಿಂತಲೂ ನಮ್ಮ ಸಂಸ್ಥೆಯಲ್ಲಿ ಕಂಡುಬಂದ ಪ್ರಕರಣಗಳ ಸಂಖ್ಯೆಯಲ್ಲಿ ಬದಲಾವಣೆ ತೋರುತ್ತಿದೆ. 2018ರ ವರ್ಷದ ಮಾಹಿತಿ ಪ್ರಕಾರ 1200 ಹೊಸ ಸ್ತನ ಕ್ಯಾನ್ಸರ್ ಪ್ರಕರಣಗಳಲ್ಲಿ ಕನಿಷ್ಠ 30 ರಿಂದ 35 ಮಂದಿಯಲ್ಲಿ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಡಾ. ರಾಮಚಂದ್ರ ವಿವರಿಸಿದ್ದಾರೆ. ಇದನ್ನು ಹೊರತುಪಡಿಸಿದರೆ ಪ್ರತಿವರ್ಷ ಸುಮಾರು 10 ಸಾವಿರವರೆಗೂ ಸ್ತನ ಕ್ಯಾನ್ಸರ್ ಸಂಬಂಧಿತ ಪ್ರಕರಣಗಳು ಕಂಡುಬರುವ ಸಾಧ್ಯತೆ ಇದೆ.

ಆದರೆ, ಬಹುತೇಕ ಪುರುಷ ರೋಗಿಗಳು 3 ಹಾಗೂ 4 ನೇ ಹಂತದಲ್ಲಿ ವೈದ್ಯರ ಬಳಿಗೆ ಹೋಗುತ್ತಾರೆ. ಏಕೆಂದರೆ ಈಗಲೂ ಕೂಡಾ ಮಹಿಳೆಯರಲ್ಲಿ ಮಾತ್ರ ಸ್ತನ್ಯ ಕ್ಯಾನ್ಸರ್ ಬರುತ್ತದೆ ಎಂಬ ತಪ್ಪು ಕಲ್ಪನೆ ಚಾಲ್ತಿಯಲ್ಲಿದೆ. ಅದರಂತೆ ಪುರುಷರಲ್ಲಿ ಸ್ತನ ಕ್ಯಾನ್ಸರ್ ಆವರಿಸಲು ಏನು ಕಾರಣ ಎಂಬುದನ್ನು ಇದುವರೆಗೆ ವಿಜ್ಞಾನಿಗಳಿಗೆ ಸ್ಪಷ್ಟವಾಗಿ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಉಳಿದ ಕ್ಯಾನ್ಸರ್ ಗಳಂತೆಯೇ ಎದೆಯ ಭಾಗದಲ್ಲಿರುವ ಅಂಗಾಂಶದ ಜೀವಕೋಶಗಳು ಅನಿಯಂತ್ರಿತವಾಗಿ ಹಾಗೂ ಉಳಿದ ಆರೋಗ್ಯವಂತ ಜೀವಕೋಶಗಳಿಗಿಂತಲೂ ವೇಗವಾಗಿ ಬೆಳೆಯುತ್ತಾ ಹೋಗುತ್ತವೆ. ಹೀಗೇ ಬೆಳೆದ ಜೀವಕೋಶಗಳು ಸಾಂದ್ರೀಕೃತಗೊಂಡು ಗಡ್ಡೆಯ ರೂಪ ಪಡೆಯುತ್ತವೆ ಹಾಗೂ ಅಕ್ಕ ಪಕ್ಕದ ಇತರ ಅಂಗಾಂಶಗಳಿಗೂ, ದುಗ್ಧಗ್ರಂಥಿಗಳಿಗೂ ಈ ರೋಗ ಹರಡುವ ಸಾಧ್ಯತೆ ಹೊಂದಿರುತ್ತವೆ.

ಸ್ತನ ಕ್ಯಾನ್ಸರ್ ನೀವೇ ಪತ್ತೆಹಚ್ಚಬಹುದು:

ಪುರುಷರಲ್ಲಿ ಈ ಸ್ಥಿತಿ ಎದುರಾಗಿದೆಯೇ ಎಂಬುದನ್ನು ಸ್ವಪರೀಕ್ಷೆಯ ಮೂಲಕ ನಿಯಮಿತವಾಗಿ ಪರಿಶೀಲಿಸಿಕೊಳ್ಳುವ ಅಗತ್ಯವಿಲ್ಲವಾದರೂ ಎದೆಯ ಭಾಗದಲ್ಲಿ ಒತ್ತಿದಾಗ ನೋವು ಅಥವಾ ಗಡ್ಡೆಗಳು ಇವೆಯೇ ಎಂಬುದನ್ನು ಆಗಾಗ ಪರೀಕ್ಷಿಸಿಕೊಳ್ಳುತ್ತಿರಬೇಕು. ಒಂದು ವೇಳೆ ನೋವು ಇದ್ದರೆ ಇದನ್ನು ಖಂಡಿತಾ ನಿರ್ಲಕ್ಷಿಸಕೂಡದು ಹಾಗೂ ವೈದ್ಯರಿಂದ ತಪಾಸಣೆಗೊಳಗಾಗಬೇಕು. ಮುಂದಿನ ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಅರಿವಿನ ತಿಂಗಳನ್ನಾಗಿ ಆಚರಿಸಲಿರುವ ಮುನ್ನವೇ ಈ ಬಗ್ಗೆ ಬೋಲ್ಡ್ ಸ್ಕೈ ತಂಡ ಈ ಕಾಯಿಲೆ ಇರುವಿಕೆಯ ಲಕ್ಷಣಗಳ ಬಗ್ಗೆ ಅಮೂಲ್ಯ ಮಾಹಿತಿಯನ್ನು ನೀಡುತ್ತಿದೆ ಹಾಗೂ ಪುರುಷರು ಗಮನ ನೀಡಬೇಕಾದ ಕೆಲವು ಸೂಕ್ಷ್ಮ ಸಂಗತಿಗಳನ್ನೂ ವಿವರಿಸಲಾಗಿದೆ.

ಸ್ತನ ಕ್ಯಾನ್ಸರ್ ಗೆ ಕಾರಣಗಳು?

ಕುಟುಂಬದ ಹಿನ್ನೆಲೆ ಇದಕ್ಕೆ ಕಾರಣಗಳೊಂದಾಗಿದೆ. ವೈದ್ಯರು ಅದನ್ನು ಜೀವನಶೈಲಿಯ ಕಾಯಿಲೆ ಎಂದು ಕರೆಯುತ್ತಾರೆ.

  • ಸ್ತನ್ಯ ಕ್ಯಾನ್ಸರ್ ಜೀನ್ಸ್ ಜೆನೆಟಿಕ್ ಇನ್ ಹೆರಿಟೆನ್ಸ್
  • ಕಡಿಮೆ ಪೀಳಿಗೆಯ ಪುರುಷ ಹಾರ್ಮೋನ್ ಗಳ ಮಟ್ಟಗಳು
  • ಸ್ಥೂಲಕಾಯತೆ
  • ಹೆಪಾಟಿಕ್ ಸಾಂಕ್ರಾಮಿಕ ಕಾಯಿಲೆಯು ಸ್ತ್ರೀ ಹಾರ್ಮೋನ್ ಹೈಪರ್ ಪೀಳಿಗೆಗೆ ಕಾರಣವಾಗುತ್ತದೆ
  • ಬೆಂಜೀನ್, ಟ್ರೈ, ಟೆಟ್ರಾಕ್ಲೋರೆಥೈಲಿನ್ ರಂತಹ ವಿಕಿರಣತೆ, ಶಾಖದ ರಾಸಾಯನಿಕಗಳು
  • ಸ್ತನ ಕ್ಯಾನ್ಸರ್ ಸಂಬಂಧಿತ ಅರಿವಿನ ಕೊರತೆ

Also read: ಟಿವಿ ಪ್ರಿಯರೆ ಎಚ್ಚರ; ಹೆಚ್ಚು ಹೊತ್ತು ಟಿವಿ ನೋಡಿದರೆ ಬರಿ ಕಣ್ಣಿಗೆ ಅಪಾಯವಲ್ಲ ಕ್ಯಾನ್ಸರ್ ಕೂಡ ಬರುತ್ತೆ..

ಸ್ತನ ಕ್ಯಾನ್ಸರ್ ಲಕ್ಷಣಗಳು:

1. ಗಡ್ಡೆಗಳು:

ಸಾಮಾನ್ಯವಾಗಿ ಪುರುಷರು ತಮ್ಮ ಎದೆಯಭಾಗದಲ್ಲಿ ಗಡ್ಡೆಯ ಇರುವಿಕೆಯನ್ನೇ ಅಲಕ್ಷಿಸುತ್ತಾರೆ, ಏಕೆಂದರೆ ಇದು ಸ್ತನ ಕ್ಯಾನ್ಸರ್ ಇರಬಹುದು ಎಂಬ ಕಲ್ಪನೆಯೇ ಇವರಿಗೆ ಇರುವುದಿಲ್ಲ. ಸಾಮಾನ್ಯವಾಗಿ ಈ ಗಡ್ಡೆಗಳಲ್ಲಿ ನೋವಿಲ್ಲದಿದ್ದು ಕೆಲವರಲ್ಲಿ ಮಾತ್ರ ಸ್ಪರ್ಶಿಸಿದರೆ ನವಿರಾದ ಕಚಗುಳಿಯಂತಹ ಭಾವನೆ ಮೂಡುತ್ತದೆ. ಒಂದು ವೇಳೆ ಈ ಕ್ಯಾನ್ಸರ್ ಹೆಚ್ಚು ಹರಡುತ್ತಾ ಹೋದರೆ ಕಂಕುಳು ಹಾಗೂ ಭುಜದ ಮೂಳೆಗಳ ಬಳಿಯಲ್ಲಿಯೂ ಗಡ್ಡೆಗಳು ಕಾಣಿಸಿಕೊಳ್ಳಬಹುದು.

2. ಸ್ತನತೊಟ್ಟು ತಗ್ಗುವುದು:

ಆರೋಗ್ಯವಂತರಲ್ಲಿ ಸ್ತನತೊಟ್ಟು ಸದಾ ಹೊರಚಾಚಿಕೊಂಡಿರಬೇಕು. ಒಂದು ವೇಳೆ ಎದೆಯ ಅಂಗಾಂಶ ಕ್ಯಾನ್ಸರ್ ಗೆ ಒಳಗಾದರೆ ಇದು ಸ್ತನತೊಟ್ಟಿನ ಸುತ್ತಲ ಭಾಗವನ್ನು ಸೆಳೆಯಲು ತೊಡಗುತ್ತದೆ. ಪರಿಣಾಮವಾಗಿ ಸ್ತನತೊಟ್ಟಿನ ಅಡಿಭಾಗದಲ್ಲಿ ಖಾಲಿಜಾಗ ಕಂಡುಬಂದು ಸ್ತನತೊಟ್ಟನ್ನು ಒಳಗೆಳೆದುಕೊಳ್ಳುತ್ತದೆ. ಕೆಲವು ಸಂದರ್ಭಗಳಲ್ಲಿ ಸ್ತನತೊಟ್ಟಿನ ಸುತ್ತಲ ಭಾಗದ ಚರ್ಮ ರವೆಯಂತೆ ಆಗುತ್ತೆ.

3. ತೊಟ್ಟುಗಳಿಂದ ಸ್ರವಿಕೆ:

ಪುರುಷರಲ್ಲಿ ಸ್ತನ ಕ್ಯಾನ್ಸರ್ ಪ್ರಾರಂಭವಾಗಿದ್ದರೆ ಸ್ತನತೊಟ್ಟಿನಿಂದ ಕೆಲವು ತೊಟ್ಟು ದ್ರವ ಜಿನುಗಿ ತೊಟ್ಟಿದ್ದ ಬನಿಯನ್ ಅಥವಾ ಶರ್ಟಿನ ಮೇಲೆ ಕಲೆಗಳನ್ನು ಮೂಡಿಸುತ್ತದೆ. ಸಾಮಾನ್ಯವಾಗಿ ಈ ಕಲೆಗಳು ಟೀ ಚೆಲ್ಲಿ ಆಗಿರಬಹುದು ಎಂದೇ ಹೆಚ್ಚಿನ ಪುರುಷರು ಅಸಡ್ಡೆ ತೋರುತ್ತಾರೆ. ಒಂದು ವೇಳೆ ಎದೆಯ ಒಂದೇ ಭಾಗದಲ್ಲಿ ಈ ಸ್ರವಿಕೆ ಸತತವಾಗಿ ಕಂಡುಬರುತ್ತಿದ್ದರೆ ಇದಕ್ಕೆ ಸ್ತನ ಕ್ಯಾನ್ಸರ್ ಗೆ ಒಳಗಾದ ಅಂಗಾಂಶದ ಸುತ್ತಲ ಭಾಗದಲ್ಲಿ ದ್ರವ ತುಂಬಿಕೊಂಡು ಸ್ತನತೊಟ್ಟಿನ ಮೂಲಕ ಹೊರಸ್ರವಿಸುತ್ತದೆ.

4. ಸ್ತನ ಚರ್ಮದಲ್ಲಿ ರಂಧ್ರ :

ಪುರುಷರ ಸ್ತನತೊಟ್ಟಿನ ಚರ್ಮದ ಭಾಗದಲ್ಲಿ ರಂಧ್ರವೊಂದು ಮೂಡುತ್ತದೆ. ಅಡಿಯಲ್ಲಿರುವ ಅಂಗಾಂಶ ಅತಿ ಹೆಚ್ಚೇ ಬೆಳೆದು ಈಗ ಸ್ತನತೊಟ್ಟಿನ ಮೂಲಕ ಹೊರಗೆ ತೂರುವ ಪ್ರಯತ್ನದಲ್ಲಿ ಚರ್ಮ ಹರಿದು ರಂಧ್ರವುಂಟಾಗುತ್ತದೆ. ಈ ಸ್ಥಿತಿ ಎದುರಾದ ಪುರುಷರ ಸ್ತನದ ತೊಟ್ಟಿನಲ್ಲಿ ಈ ರಂಧ್ರ ಈಗ ತಾನೇ ಒಡೆದ ಮೊಡವೆಯಂತೆ ತೋರುತ್ತದೆ. ಈ ಭಾಗದಲ್ಲಿ ಚಿಕ್ಕದೇ ಆದರೂ ಸರಿ, ಯಾವುದೇ ಲಕ್ಷಣಗಳು ಕಂಡುಬಂದರೆ ತಡಮಾಡದೇ ಕೂಡಲೇ ವೈದ್ಯರ ಬಳಿ ಪರೀಕ್ಷಿಸಿ.

Also read: ನಾವ್ ಹೇಳಿದಂತೆ ಈ ರೀತಿ ಮಾಡ್ತಾ ಬನ್ನಿ ನಿಮಗೆ ಬಾಯಿ ಕ್ಯಾನ್ಸರ್ ಬರುವ ಪ್ರಮೇಯ ಶೇಕಡ 50% ಕಮ್ಮಿಯಾಗುತ್ತೆ!!