ವಾಹನ ಸವಾರರೆ ಎಚ್ಚರ; ಪೆಟ್ರೋಲ್ ಪಂಪ್-ಗಳಲ್ಲಿ ನಡೆಯುತ್ತಿದೆ ರಿಮೋಟ್ ಕಂಟ್ರೋಲ್ ಮೋಸ..

0
906

ಈ ಕಾಲದಲ್ಲಿ ಪ್ರತಿಯೊಂದು ಮನೆಯಲ್ಲಿ ಎರಡರಿಂದ ಮೂರು ವಾಹನಗಳು ಇದೆ ಇರುತ್ತೇವೆ, ಆದಕಾರಣ ಪ್ರತಿದಿನವೂ ಪೆಟ್ರೋಲ್ ಹಾಕಲು ಪಂಪ್ -ಗಳಿಗೆ ಹೋಗುತ್ತಿರ ಆ ಸಮಯದಲ್ಲಿ ಯಾವುದೋ ಒಂದು ಒತ್ತಡದಲ್ಲಿ ಸರಿಯಾಗಿ ಪರೀಕ್ಷಿಸದೆ ಪೆಟ್ರೋಲ್ ಹಾಕಿಕೊಂಡು ಬರುತ್ತಿರ. ಇನ್ನೂ ಕೆಲವೊಬ್ಬರು ಎಷ್ಟೋ ಕಾಳಜಿ ವಹಿಸಿದರು ಪೆಟ್ರೋಲ್ ಪಂಪ್- ನಲ್ಲಿ ಮೋಸ ಮಾಡುವುದು ಗೊತ್ತೇ ಆಗುವುದಿಲ್ಲ. ಇದು ನಡೆಯುತ್ತಿರುವುದು ಹೊಸದೇನಲ್ಲ ಈ ವಿಷಯವಾಗಿ ಮಾದ್ಯಮಗಳಲ್ಲಿ, ಮತ್ತು ಇಂಟರ್ನೆಟ್-ಗಳಲ್ಲಿ ಹಲವಾರು ಪ್ರಕರಣಗಳು ಬಂದಿರುವುದು ಗೊತ್ತೇ ಇದೆ. ಇಂತಹ ಮೋಸಗಳನ್ನು ತಡೆಗಟ್ಟಲು ಎಷ್ಟೇ ಪ್ರಯತ್ನ ಪಟ್ಟರು ಹೊಸ ತಂತ್ರಜ್ಞಾನದ ಮೂಲಕ ಮತ್ತೊಂದು ರೀತಿಯಲ್ಲಿ ಮೋಸ ಮಾಡುತ್ತಿದ್ದಾರೆ. ಅದು ಹೇಗೆ ಅಂತ ಇಲ್ಲಿದೆ ನೋಡಿ.


Also read: ಮುಂದಿನ ವರ್ಷದ ಮೇ ತಿಂಗಳಿಂದ 1kg ಯ ವ್ಯಾಖ್ಯಾನ ಬದಲಾಗಿದೆಯಂತೆ!

ಹೌದು ಸಿಲಿಕಾನ್ ಸಿಟಿಯ ಮುಖ್ಯ ಏರಿಯಾದಲ್ಲಿರುವ Indian oil ಪೆಟ್ರೋಲ್ ಬಂಕ್‌ನಲ್ಲಿ ನಡೆದಿದ್ದು, ಪೆಟ್ರೋಲ್ ಪ್ರಮಾಣದಲ್ಲಿ ಗ್ರಾಹಕರಿಗೆ ಮೋಸಗೊಳಿಸುತ್ತಿರುವಾಗ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದಾರೆ. ಪ್ರತಿನಿತ್ಯವೂ ಮೋಸಕ್ಕೆ ಒಳಗಾಗುತ್ತಿದ್ದ ಯುವಕರು ಇದನ್ನು ಹೇಗಾದರೂ ಮಾಡಿ ಪತ್ತೆಹಚ್ಚಲೆ ಬೇಕು ಅಂತ ಪ್ಲಾನ್ ಮಾಡಿ ಮೊದಲು 130 ರೂ ಹಣ ನೀಡಿ ಎರಡು ಲೀಟರ್ ಪೆಟ್ರೋಲ್ ಬೈಕ್ -ಗೆ ಹಾಕಲು ಹೇಳಿದ್ದಾರೆ. ಬಂಕ್ ಹುಡುಗ ನಂಬರ್ ಒತ್ತಿ ಪೆಟ್ರೋಲ್ ಹಾಕಲು ಬಂದಾಗೆ ಅದನ್ನು ತಡೆದು 2 ಲೀಟರ್ ಬಾಟಲಿಗೆ ಹಾಕಲು ಹೇಳಿದ್ದಾರೆ, ಅಲ್ಲಿ ಎರಡು ಲೀಟರ್ ಬಿಳ್ಳಬೇಕಾದ ಪೆಟ್ರೋಲ್ ಬರಿ ಅರ್ಧ ಲೀಟರ್ ಬಿದ್ದಿದೆ. ಇದನ್ನು ಕಂಡ ಜನರಿಗೆ ಒಂದು ನಿಮಿಷ ದಿಕ್ಕುತಪ್ಪಿದೆ. ಪ್ರತಿನಿತ್ಯವೂ ಎಷ್ಟೊಂದು ಮೋಸ ಆಗುತ್ತಿದೆ ದುಡಿದ ಹಣವನ್ನು ಪಟ್ರೋಲ್-ಗೆ ಹಾಕಿ ಮೋಸ ಹೋಗುತ್ತಿದೇವೆ ಎಂದು ಪಂಪ್ ಮಾಲಿಕರನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ.


Also read: ಆರೋಗ್ಯದ ದೃಷ್ಟಿಯಿಂದ ನೀವು ಕುಡಿಯುತ್ತಿರುವ ಪ್ಯಾಕೆಟ್ ಹಾಲು ಹಾಲಲ್ಲ; ಅದು ಬೆಳ್ಳಗಿರುವ ವಿಷ..

ರಿಮೋಟ್ ಕಂಟ್ರೋಲ್ ಮೂಲಕ ನಡೆಯುತ್ತೆ ಮೋಸ:

ಹೌದು.. ಇದು ನಿಮಗೆ ನಂಬಲು ಸಾಧ್ಯವಾಗದಿದ್ದರು ನಿಜ. ಕಳೆದ ತಿಂಗಳ ಹಿಂದಷ್ಟೇ ಉತ್ತರ ಪ್ರದೇಶದಲ್ಲಿ ನಡೆದ ಎಸ್‌ಐಟಿ ಅಧಿಕಾರಿಗಳು ಗ್ರಾಹಕರ ದೂರಿನ ಮೇಲೆ ನಡೆಸಿದ ದಾಳಿ ವೇಳೆ ಪೆಟ್ರೋಲ್ ಬಂಕ್‌ಗಳಲ್ಲಿ ನೂರಾರು ರಿಮೋಟ್‌ಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ರಿಮೋಟ್ ಮೂಲಕ ಪೆಟ್ರೋಲ್ ಬಂಕ್‌ನ ಫ್ಯೂಲ್ ಯೂನಿಟ್‌ಗಳನ್ನು ನಿಯಂತ್ರಿಸುವ ಮಾಲೀಕರು ಬೈಕ್ ಸವಾರರಗಿಂತ 1 ಸಾವಿರ, 2 ಸಾವಿರ ರೂಪಾಯಿ ಲೆಕ್ಕದಲ್ಲಿ ಡೀಸೆಲ್, ಪೆಟ್ರೋಲ್ ತುಂಬಿಸುವ ಕಾರು ಮಾಲೀಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಮೋಸ ಮಾಡುತ್ತಾರೆ.


Also read: ಬೆಂಗಳೂರು ನಾಗರಿಕರೇ ಎಚ್ಚರ!! ಬೆಂಗಳೂರಿಗೆ ಬರುತ್ತಿರುವ ಆಹಾರ ಪದಾರ್ಥಗಳಲ್ಲಿ ಅಡಗಿದೆ ಭಯಾನಕ ವಿಷ!!

ಬೈಕ್‌ಗಳಿಗೆ ಪೆಟ್ರೋಲ್ ತುಂಬಿಸುವಾಗ ಮೋಸ ಮಾಡಿದ್ದಲ್ಲಿ ಮಾಲೀಕರಿಗೆ ಇದು ಗೊತ್ತಾಗಬಹುದಾದ ಎನ್ನುವ ಉದ್ದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಇಂಧನ ತುಂಬಿಸುವಾಗ ಮಾತ್ರ ರಿಮೋಟ್ ಕಂಟ್ರೋಲ್ ಬಳಕೆ ಮಾಡಿ ಇಂಧನ ಪ್ರಮಾಣದಲ್ಲಿ ಕಡಿತ ಮಾಡುತ್ತಾರೆ. ಅದು ಹೇಗೆ ಅಂದ್ರೆ, ನೀವು ಒಂದು ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸಿದ್ದರೆ ನಿಮ್ಮ ವಾಹನದಲ್ಲಿ ಕೇವಲ 900ಮಿ. ಲೀಟರ್ ಮಾತ್ರ ತುಂಬಿಕೊಳ್ಳುತ್ತದೆ. ಆದ್ರೆ ಮೀಟರ್‌ನಲ್ಲಿ ಮಾತ್ರ 1 ಲೀಟರ್ ಹಾಕಿದ್ದಾಗಿ ಲೆಕ್ಕ ತೋರಿಸುತ್ತದೆ. ಕರ್ನಾಟಕದಲ್ಲೂ ಸುಮಾರು 2 ಸಾವಿರಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳಲ್ಲಿ ಈ ರೀತಿಯಾಗಿ ಮೋಸ ನಡೆಯುತ್ತಿದ್ದು ಇದರ ಹಿಂದೆ ರಾಜಕೀಯ ನಾಯಕರು ಇರುವುದು ಸತ್ಯವಾಗಿದೆ. ಆದ ಕಾರಣ ಪೆಟ್ರೋಲ್ ಪಂಪ್-ನಲ್ಲಿ ಅನುಮಾನ ಬಂದರೆ ಕಾಲಿ ಬಾಟಲಿಯಲ್ಲಿ ತುಂಬಿಸಿ ಪರೀಕ್ಷಿಸಿ, ಇದರ ವಿರುದ್ದ ದೂರು ನೀಡಿ.