ಕಾರು ಚಾಲಕನೊಬ್ಬ ಡಿಕ್ಕಿ ಹೊಡೆದು ೩ ಕಿ.ಮೀ ಗಾಯಾಳುವನ್ನು ಎಳೆದುಕೊಂಡು ಹೋದ

0
831

ಕಾರು ಚಾಲಕನೊಬ್ಬ ಡಿಕ್ಕಿ ಹೊಡೆದಿದ್ದು ಅಲ್ಲದೇ ಸುಮಾರು ೩ ಕಿ.ಮೀ.ವರೆಗೂ ಕಾರಿನ ಮೇಲೆ ಬಿದ್ದಿದ್ದ ಗಾಯಾಳುವನ್ನು ಎಳೆದುಕೊಂಡು ಹೋದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಸೋಮವಾರ ರಾತ್ರಿ ತೆಲಂಗಾಣದ ಮೆಹಬುಬ್ ನಗರ ದಲ್ಲಿ ಈ ಘಟನೆ ಸಂಭವಿಸಿದೆ. ಕೆಲವು ಸ್ಥಳೀಯ ವಾಹನ ಚಾಲಕರು ಅಡ್ಡಗಟ್ಟಿದ ನಂತರ ಕಾರು ನಿಲ್ಲಿಸಿದ ದುಷ್ಕರ್ಮಿ ತಲೆ ಮರೆಸಿಕೊಂಡಿದ್ದಾನೆ. ದುಷ್ಕರ್ಮಿಯನ್ನು ರಾಜಶ್ರಿ ರೆಡ್ಡಿ ಎಂದು ಗುರುತಿಸಲಾಗಿದೆ.

ರಸ್ತೆ ದಾಟುತ್ತಿದ್ದ ೩೮ ವರ್ಷದ ಶ್ರೀನಿವಾಸುಲು ಅವರಿಗೆ ಕೆಂಪು ಬಣ್ಣದ ಚೆರ್ಲೊಟ್ ಕಾರು ಡಿಕ್ಕಿ ಹೊಡಡಯೊತು. ಡಿಕ್ಕಿ ಹೊಡೆದ ರಭಸಕ್ಕೆ ಶ್ರೀನಿವಾಸುಲು ಮೇಲಕ್ಕೆ ಚಿಮ್ಮಿ ಕಾರಿನ ಮೇಲೆ ಬಿದ್ದಿದ್ದಾರೆ.
ಆದರೆ ಚಾಲಕ ಕಾರು ನಿಲ್ಲಿಸುವ ಬದಲು ಹಾಗೇ ೩ ಕಿ.ಮೀ. ದೂರದವರೆಗೆ ಸಾಗಿದ್ದಾರೆ. ಸ್ಥಳೀಯ ರೊಬ್ಬರು ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದಾಗ ಆರೋಪಿ ಓಡಿ ಹೋಗಿ ದ್ದಾನೆ. ಮಾಹಿತಿ ಪಡೆದ ಪೊಲೋಸೊಬ್ಬರು ಕೂಡಲೇ ಬೈಕ್ ನಲ್ಲಿ ಬಂದಿದ್ದಾರೆ.

ಕಾರಿನಲ್ಲಿ ಮೃತ ಶರೀರ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಬಂದಿತು. ತಕ್ಷಣವೇ ಕಾರ್ಯಪ್ರವೃತ್ತರಾದೆವು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ
ಕಾರು ಹೈದರಾಬಾದ್ ಮೂಲದ ಉದ್ಯಮಿ ಕಿಸ್ಟಪಾಡಿ ಚಂದ್ರಕಲಾ ಎಂಬುವವರಿಗೆ ಸೇರಿದ್ದು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.