ಇಂದಿನಿಂದ ಪೆಟ್ರೋಲ್ ಬಂಕ್ ಗಳಲ್ಲಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಸ್ವೀಕರಿಸಲ್ಲ.

0
1062

ಬೆಂಗಳೂರ:ಇಂದಿನಿಂದ ಪೆಟ್ರೋಲ್ ಬಂಕ್ ಗಳಲ್ಲಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಸ್ವೀಕರಿಸಲ್ಲ. ಪ್ರತಿ ವಹಿವಾಟಿಗೂ ಬಂಕ್ ಗಳಲ್ಲಿ ಸರ್ವೀಸ್ ಚಾರ್ಜ್ ವಿಧಿಸುತ್ತಿರುವುದರಿಂದ ಪೆಟ್ರೋಲ್ ಬಂಕ್ ಮಾಲೀಕರ ಸಂಘದ ನಿರ್ಧಾರ.

ದೇಶದ ಕೆಲ ಆಯ್ದ ಪೆಟ್ರೋಲ್ ಬಂಕ್ ಗಳಲ್ಲಿ ರೂ. 2000 ವರೆಗೆ ಡೆಬಿಟ್/ಕ್ರೆಡಿಟ್ ಕಾರ್ಡುಗಳನ್ನು ಬಳಸಿ ನಗದು ವಿನಿಮಯ ವ್ಯವಸ್ಥೆಯನ್ನು ಜಾರಿ ತರಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ. ಹಳೆ ನೋಟುಗಳ ಚಲಾವಣೆ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ನಿವಾರಿಸಲು ಈ ಕ್ರಮಕ್ಕೆ ಮುಂದಾಗಿದೆ. ಕೇಂದ್ರ ಸರ್ಕಾರ ಶೀಘ್ರದಲ್ಲೇ ದೇಶದಾದ್ಯಂತ ಆಯ್ದ 2,50ಕ್ಕೂ ಹೆಚ್ಚು ಬಂಕ್ ಗಳಲ್ಲಿ ಈ ವ್ಯವಸ್ಥೆ ಜಾರಿ ಮಾಡಲಿದೆ. ಎಂದು ತಿಳಿಸಿದ್ದರು ಆದರೆ ಈಗ ಕಾರ್ಡ್ ಬಳಕೆಯನ್ನು ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಭಾನುವಾರ ಮಧ್ಯರಾತ್ರಿಯಿಂದಲೇ ಭಾರತದಾದ್ಯಂತ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬಳಕೆಯನ್ನು ಸ್ಥಗಿತಗೊಳಿಸಲಿದ್ದಾರೆ. ಕಾರ್ಡ್ ಬಳಿಕೆ ಮೇಲೆ ಸರ್ವಿಸ್ ಚಾರ್ಜ್ ಜಾರಿ ಹಿನ್ನೆಲೆಯಲ್ಲಿ ಪೆಟ್ರೋಲ್ ಮಾಲೀಕರು ಗ್ರಾಹಕರಿಂದ ಕಾರ್ಡ್ ಪಡೆಯದಿರಲು ತೀರ್ಮಾನಿಸಿದ್ದಾರೆ.

ಈ ಬಗ್ಗೆ ಕರ್ನಾಟಕ ಪೆಟ್ರೋಲ್ ಬಂಕ್ ಮಾಲೀಕರ ಅಧ್ಯಕ್ಷ ರವೀಂದ್ರನಾಥ್ ಈ ಕುರಿತಾಗಿ ಹೇಳಿಕೆ ನೀಡಿದ್ದು, ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಕೆ ಮೇಲೆ ಶೇ.1ರಷ್ಟು ಸರ್ವೀಸ್ ಟ್ಯಾಕ್ಸ್ ಹಾಕುವುದಾಗಿ ಹೇಳಲಾಗಿದೆ.