ರೂ40 ರ ಬದಲು 4ಲಕ್ಷ ಸ್ವೈಪ್ ಮಾಡಿದ ಟೋಲ್ ಪ್ಲಾಝ ಸಿಬ್ಬಂದಿ!!

0
928
ಕ್ಯಾಶ್ ಲೆಸ್ ವ್ಯವಹಾರ ಮಾಡುವಂತೆ ಪ್ರಧಾನಿ ಮೋದಿ ದೇಶ ವಾಸಿಗಳಲ್ಲಿ ಕೇಳಿಕೊಳ್ಳುತ್ತಿದ್ದಾರೆ. ಅಲ್ಲದೆ ಮುಂದಿನ ಪೀಳಗೆಯನ್ನು ಡಿಜಿಟಲ್ ಮಾಡಲು ದೊಡ್ಡ ಪಣವನ್ನು ತೊಟ್ಟಿದ್ದಾರೆ. ಮೊದಿ ಅವರು ಹಾಕಿಕೊಂಡ ಯೋಜನೆ ತಪ್ಪಲ್ಲ, ಆದರೆ ಅದನ್ನು ನಮ್ಮ ಜನರು ಬಳಸುವ ರೀತಿ ನಿಜಕ್ಕೂ ಬೇಸರ ತರಿಸುತ್ತದೆ.
Image result for indian toll plaza
ಹೌದು ಈ ವರದಿಯೂ ಕ್ಯಾಶ್‌ಲೆಸ್ ವ್ಯವಹಾರದಲ್ಲಿ ಕೈ ಸುಟ್ಟುಕೊಂಡು ತನ್ನದೆ ಹಣವನ್ನು ಪಡೆಯಲು ಜಾತಕ ಪಕ್ಷಿಯಂತೆ ಕಾದ ವೈದ್ಯನ್ನದು. ಸಾಮಾನ್ಯವಾಗಿ ಶಿಶಿಕ್ಷಿತರು ಈಗ ಕ್ಯಾಶ್‌ಲೆಸ್ ಮೊರೆ ಹೋಗುತ್ತಿದ್ದಾರೆ. ಮಾಲ್‌ಗಳಲ್ಲಿ.. ಪೆಟ್ರೋಲ್ ಪಂಪ್‌ಗಳಲ್ಲಿ… ಹೋಟೇಲ್‌ಗಳಲ್ಲಿ… ತಮ್ಮ ಡೇಬಿಟ್ ಕಾರ್ಡ್ ಬಳಸಿ ಪೇಮೆಂಟ್ ಮಾಡುತ್ತಾರೆ.
ಮಾರ್ಚ್ ೧೧ರ ಶನಿವಾರ ರಾತ್ರಿ ಸುಮಾರು ೧೦.೩೦ರ ಸುಮಾರಿಗೆ ಉಡುಪಿಯಿಂದ ಮುಂಬೈಗೆ ಹೋಗುವ ದಾರಿಯಲ್ಲಿ ಬರುವ ಗುಂಡ್ಮಿಯ ಟೋಲ್‌ಗೇಟ್‌ನಲ್ಲಿ ವೈದ್ಯರೊಬ್ಬರು ೪೦ ರೂ. ಟೋಲ್ ಹಣ ನೀಡಬೇಕಾಗುತ್ತದೆ. ಆಗ ಅವರು ತಮ್ಮಲ್ಲಿನ ಡೆಬಿಟ್ ಕಾರ್ಡ್ ಸ್ಪ್ಯಾಪ್ ಮಾಡುತ್ತಾರೆ. ಅವರಿಗೆ ಟೋಲ್ ಅಧಿಕಾರಿ ಹಣ ಪಡೆದ ಬಗ್ಗೆ ರಶೀದಿ ಸಹ ನೀಡುತ್ತಾರೆ.
Image result for indian toll plaza debit card machine
ಈ ರಶೀದಿಯನ್ನು ಪಡೆದು ವೈದ್ಯರು ಸುಮಾರು ದೂರ ಕಾರ್ ಡ್ರೈವ್ ಮಾಡುತ್ತಾ ಮುಂದೆ ಸಾಗುತ್ತಾರೆ. ಆಗ ಅವರ ಮೊಬೈಲ್‌ಗೆ ಮೆಸೆಜ್ ಬರುತ್ತದೆ. ಓ ಹಣ ಕಟ್ಟಾಗಿರುವ ಮೆಸೆಜ್ ಎಂದು ಅವರು, ನೋಡದೆ ಇದ್ದಿದ್ದರೆ ಫಜೀತಿ ಆಗುತ್ತಿತ್ತು. ಆದರೆ ಅವರು ಹಾಗೇ ಮಾಡದೆ ಮೆಸೆಜ್ ನೋಡುತ್ತಾರೆ. ಮೆಸೆಜ್‌ನಲ್ಲಿ ತಮ್ಮ ಖಾತೆಯಲ್ಲಿನ  ೪ ಲಕ್ಷ ಕಡಿತವಾದ ಬಗ್ಗೆ ತಿಳಿದು ಕಕ್ಕಾಬಿಕ್ಕಿಯಾಗುತ್ತಾರೆ.
ಮತ್ತೆ ವೈದ್ಯರು ತಮ್ಮ ಕಾರ್‌ನ್ನು ತೆಗೆದುಕೊಂಡು ಟೋಲ್ ಬಳಿ ಬಂದು ತಮಗೆ ಆದ ಅನ್ಯಾಯದ ಬಗ್ಗೆ ಟೋಲ್ ಅಧಿಕಾರಿಗಳು ಹಾಗೂ ಪೊಲೀಸ್‌ರಿಗೆ ತಿಳಿಸುತ್ತಾರೆ. ಆದರೆ ಹಣ ಈಗಲೇ ಬೇಕು.. ಚೆಕ್ ಬೇಡ ಎಂದು ವೈದ್ಯರು ತಕರಾರು ಮಾಡುತ್ತಾರೆ. ಇದರಿಂದ ವಿಚಲಿತರಾದ ಟೋಲ್ ಅಧಿಕಾರಿಗಳು ರಾತ್ರಿ ಹಣ ಜಮಾವಣೆ ಮಾಡಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.