ನಿತ್ಯ ಏಲಕ್ಕಿ ನೀರು ಕುಡಿದರೆ ದೇಹಕ್ಕೆ ಇಷ್ಟೆಲ್ಲ ಲಾಭವಾಗುತ್ತೆ ಎಂದು ತಿಳಿದರೆ, ಈಗಿನಿಂದಲೇ ಇದನ್ನು ಕುಡಿಯಲು ಶುರುಮಾಡ್ತೀರ…!

0
3042

Kannada News | Health tips in kannada

ಇಂದಿನ ಜೀವನ ಶೈಲಿಯಲ್ಲಿ ಗೊಂದಲ, ಒತ್ತಡದಿಂದ ಕೂಡಿರುವುದರಿಂದ ನೆಮ್ಮದಿಯೂ ದೂರವಾಗುತ್ತಿದೆ. ಮನಸ್ಸಿನ ನೆಮ್ಮದಿ ದೂರವಾದರೆ ದೇಹದ ಆರೋಗ್ಯವು ಹದಗೆಡುತ್ತದೆ. ಬಾಡಿ ಫಿಟ್ ಆಗಬೇಕು ಅನ್ನುವ ಕಾರಣಕ್ಕೆ ಜನರು ಹಲವಾರು ವಿಧಾನಗಳಿಗೆ ಮೊರೆ ಹೋಗುತ್ತಿದ್ದಾರೆ. ಆದರೆ ಅವು ಎಷ್ಟರ ಮಟ್ಟಿಗೆ ನಮಗೆ ಉಪಯೋಗ ವಾಗುತ್ತಿದೆ ಅನ್ನುವುದು ಮಾತ್ರ ತಿಳಿಯದು.

ಇವೆಲ್ಲವುಕ್ಕಿಂತಲೂ ನೈಸರ್ಗಿಕವಾಗಿಯೇ ಸಾಕಷ್ಟು ವಿಧಾನಗಳಿವೆ. ಶೀಫ್ರ ಪರಿಣಾಮ ಕಾಣಿಸದಿದ್ದರೂ ದೀರ್ಘಕಾಲದವರೆಗೂ ಉಳಿಯುತ್ತದೆ ಅನ್ನುವುದೇ ಪ್ಲಸ್ ಪಾಯಿಂಟ್. ಅದರಲ್ಲೂ ನಿತ್ಯ ಏಲಕ್ಕಿ ನೀರನ್ನು ಕುಡಿಯುವುದರಿಂದ ಆರೋಗ್ಯಕರ ಜೀವನಶೈಲಿ ನಿಮ್ಮದಾಗುವುದು. ನಿತ್ಯ ನಿಮ್ಮ ದಿನವನ್ನು ಏಲಕ್ಕಿ ನೀರು ಕುಡಿಯುವುದರಿಂದ ಪ್ರಾರಂಭ ಮಾಡಿ. ಈ ರೀತಿ ಮಾಡುವುದರಿಂದ ನಿಮ್ಮ ಆರೋಗ್ಯ ವೃದ್ಧಿಸುವು ಖಚಿತ. ಏಲಕ್ಕಿ ಕಾಳುಗಳು ನಿಮ್ಮ ಚಯಾಪಚಯ ಕ್ರೀಯೆಯು ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದಲ್ಲಿ ಅಥವಾ ನಿಷ್ಕ್ರೀಯಗೊಂಡಿದ್ದಲ್ಲಿ ಏಲಕ್ಕಿ ನೀರನ್ನು ಕುಡಿಯಿರಿ. ಏಲಕ್ಕಿ ನೀರು ನಮ್ಮ ದೇಹದಲ್ಲಿ ಉಂಟಾಗುವ ಬಹುತೇಕ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುತ್ತದೆ. ಇದು ನಿಮ್ಮ ದೇಹದ ಶಕ್ತಿಯನ್ನು ಉದ್ದೀಪನಗೊಳಿಸಿ ನಿಮ್ಮನ್ನು ಆರೋಗ್ಯವಾಗಿಡುತ್ತದೆ. ಇದನ್ನು ಪ್ರತಿದಿನ ಕುಡಿಯುವುದು ಅತೀ ಅಗತ್ಯ.

14 ದಿನಗಳ ಕಾಲ ಈ ನೀರನ್ನು ಕುಡಿದರೆ, ನೀಡೋ ಪರಿಣಾಮ ಮಾತ್ರ ಅದ್ಭುತ.

ದೇಹದಲ್ಲಿ ನೀರಿನಂಶವನ್ನು ಕಾಪಾಡುತ್ತದೆ

ದೇಹದಲ್ಲಿ ನೀರಿನಂಶ ಕಡಿಮೆ ಆದರೆ, ವಯಸ್ಸಿಗೆ ಮುಂಚೆ ಚರ್ಮ ಸುಕ್ಕಾಗುವುದು, ತ್ವಚೆ ಸೌಂದರ್ಯ ಹಾಳಾಗುವುದು ಮುಂತಾದ ಸಮಸ್ಯೆ ಉಂಟಾಗುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 1 ಲೀಟರ್‌ ಬಿಸಿ ನೀರಿಗೆ ಒಂದು ಏಲಕ್ಕಿ ಹಾಕಿ ಒಂದು ಲೋಟ ಕುಡಿಯಿರಿ. ಉಳಿದ ನೀರನ್ನು ಮಧ್ಯಾಹ್ನದ ಒಳಗೆ ಕುಡಿದು ಮುಗಿಸಿ. ಏಲಕ್ಕಿ ನೀರು ಕುಡಿಯುವುದರಿಂದ ಬಾಯಾರಿಕೆ ಅನಿಸುವುದರಿಂದ ದಿನಕ್ಕೆ 8 ಗ್ಲಾಸ್‌ ನೀರು ಕುಡಿಯುತ್ತೇವೆ. ಇದರಿಂದಾಗಿ ನಮ್ಮ ದೇಹದಲ್ಲಿ ನೀರಿನಂಶ ಸಮತೋಲನದಲ್ಲಿರುವಂತೆ ನೋಡಿಕೊಳ್ಳುತ್ತದೆ.

ದಿನಪೂರ್ತಿ ಚೈತನ್ಯದಿಂದ ಇರಲು ಸಹಾಯ ಮಾಡುತ್ತದೆ.

ಕೆಲಸ ಮಾಡಿದಾಗ, ಮಾನಸಿಕವಾಗಿ ದಣಿದಾಗ, ಒತ್ತಡಕ್ಕೆ ಒಳಗಾದಾಗ, ಕಾಯಿಲೆ ಬಿದ್ದಾಗ ಸುಸ್ತು ಮತ್ತು ಬಳಲಿಕೆ ಕಾಣಿಸಿಕೊಳ್ಳುವುದು ಸಹಜ. ಈ ರೀತಿ ಆಯಾಸವಾದಾಗ ಏಲಕ್ಕಿ ನೀರು ಕುಡಿಯಿರಿ. ಏಲಕ್ಕಿಯಲ್ಲಿ ಪೊಟ್ಯಾಸಿಯಂ, ರಂಜಕ, ಮ್ಯಾಂಗನೀಸ್ ಹಾಗು ಸ್ಟಾರ್ಚ್ ಗಳಿರುತ್ತವೆ. ಈ ನೀರನ್ನು ಕುಡಿಯುವುದರಿಂದ ನೀವು ದಿನಪೂರ್ತಿ ಚೈತನ್ಯದಿಂದ ಉತ್ಸಾಹದಿಂದ ಇರುವಿರಿ.

ತೂಕ ಕಡಿಮೆ ಮಾಡಲು ಸಹಕರಿಸುತ್ತದೆ.

ಸ್ವಲ್ಪ ಏಲಕ್ಕಿ ಕಾಳುಗಳನ್ನು ಇಡಿಯ ರಾತ್ರಿ ನೆನೆಸಿಡಿ. ಬೆಳಿಗ್ಗೆ ಇದನ್ನು ಕುದಿಸಿ ನಂತರ ಸೋಸಿ ಕುಡಿಯಿರಿ. ಈ ನೀರನ್ನು ಖಾಲಿಹೊಟ್ಟೆಯಲ್ಲಿ ಸೇವಿಸಿ ಮುಂದಿನ ಮುಕ್ಕಾಲು ಘಂಟೆ ಏನೂ ಸೇವಿಸದಿರಿ. ಈ ರೀತಿಯಾಗಿ ಏಲಕ್ಕಿ ನೀರನ್ನು ಸೇವಿಸುತ್ತಾ ಬಂದರೆ ಎರಡೇ ವಾರದಲ್ಲಿ ತೂಕ ಕಡಿಮೆಯಾಗುತ್ತಿರುವುದು ಕಂಡುಬರುತ್ತದೆ.

Watch:

ನಿಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ

ಹಗಲಿನಲ್ಲಿ ಆದಷ್ಟೂ ಚೆನ್ನಾಗಿ ಏಲಕ್ಕಿ ನೀರು ಕುಡಿಯಿರಿ. ಶರೀರದೊಳಗೆ ಸಾಕಷ್ಟು ಜಲಸಂಚಯನವಾದರೆ, ಚರ್ಮದ ಕಾಂತಿ ಹೆಚ್ಚಾಗಿ, ಕಲೆಗಳು ಅಳೆಸಿಹೋಗುತ್ತವೆ. ಹೀಗೆ ಪ್ರತಿದಿನ ಏಲಕ್ಕಿ ನೀರು ಕುಡಿಯುತ್ತಿದ್ದರೆ ಕೆಲವೇ ದಿನಗಳಲ್ಲಿ ನಿಮ್ಮ ತ್ವಚೆಯ ಕಾಂತಿ ಹೆಚ್ಚಾಗಿರುವುದು ನಿಮ್ಮ ಗಮನಕ್ಕೆ ಬರುವುದು.

Also Read: ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಒಳ್ಳೆ ಕೊಲೆಸ್ಟ್ರಾಲ್ ಹೆಚ್ಚಿಸೋದು ಹೇಗಪ್ಪಾ ಅಂತ ಯೋಚ್ನೆ ಮಾಡ್ತಿರೋವ್ರು ಮೊದ್ಲು ಈ ಆರ್ಟಿಕಲ್ ಓದಿ..