ಹೃದ್ರೋಗ ತಡೆಗಟ್ಟಬೇಕು ಅಂದ್ಕೊಳ್ಳೋವ್ರು ಈ ಆರ್ಟಿಕಲ್ ಓದ್ಲೇ ಬೇಕು…

0
1640

Kannada News | Health tips in kannada

ಹೃದಯ-ನಮ್ಮ ದೇಹದ ಆಗುಹೋಗುಗಳಿಗೆ ಮಿಡಿವ ಕೇಂದ್ರ ಬಿಂದು.ಎದೆಗೂಡಿನಿಂದ ಆವೃತವಾಗಿ ಎರಡು ಶ್ವಾಸಕೋಶಗಳ ನಡುವೆ ಬೆಚ್ಚಗೆ ತನ್ನಪಾಡಿಗೆ ನಿರಂತರ, ಬಿಡಿವಿರದೆ ಕೆಲಸ ಮಾಡುತ್ತಿರುವ ಅಂಗ ಹೃದಯ.ಇದರ ಕಾರ್ಯವೈಖರಿ ಸಮರ್ಪಕವಾಗಿದ್ದಲ್ಲಿ ನಮ್ಮ ಶರೀರ ಮತ್ತದರ ಆರೋಗ್ಯ ಉತ್ತಮವಾಗಿರುವುದರಲ್ಲಿ ಸಂದೇಹವೇ ಇಲ್ಲ.

ಹೃದಯದಲ್ಲಿರುವ ನಾಲ್ಕು ಕವಾಟಗಳು ತಮ್ಮ ಸಂಕುಚಿತ ಮತ್ತು ಹಿಗ್ಗುವ ಪ್ರಕ್ರಿಯೆಯಿಂದ ರಕ್ತನಾಳಗಳ ಮೂಲಕ ಶುದ್ಧ ರಕ್ತವನ್ನು ದೇಹದ ಇನ್ನಿತರ ಭಾಗಕ್ಕೆ ಹರಿದು ಬಿಡುತ್ತದೆ. ಇಂತಹ ಅತಿ ಮುಖ್ಯ ಅಂಗದ ಕಾರ್ಯವೈಖರಿ ಏರುಪೇರಾದಲ್ಲಿ ಅನೇಕ ಹೃದಯ ಸಂಬಂಧಿ ಖಾಯಿಲೆಗಳಿಂದ ಬಳಲಬೇಕಾಗುತ್ತದೆ.

ಆಧುನಿಕ ಜೀವನ ಶೈಲಿ, ಒತ್ತಡ, ಅನಿಯಮಿತ ಆಹಾರ ಪದ್ಧತಿ, ವ್ಯಾಯಾಮ ರಹಿತ ಜೀವನ ಪದ್ಧತಿ , ಅಪೌಷ್ಟಿಕತೆ ಇತ್ಯಾದಿ ಅಂಶಗಳು ಭಾರತವನ್ನು ಹೃದಯ ಸಂಬಂಧಿ ರೋಗಗಳ ರಾಜಧಾನಿಯನ್ನಾಗಿಸಿವೆ.ಸುಮಾರು ೬೦ ವರ್ಷಗಳ ಇತ್ತೀಚಿಗೆ ದೇಶದಲ್ಲಿ ಹೃದ್ರೋಗದಿಂದ ಬಳಲುತ್ತಿರುವವರ ಸಂಖ್ಯೆ ಗಣನೀಯವಾಗಿ ಶೇಕಡಾ ೧% ರಿಂದ ೧೦% ನಷ್ಟು ಹೆಚ್ಚಾಗಿದೆ. ಅದರಲ್ಲೂ ಹಳ್ಳಿಯಲ್ಲಿ ವಾಸಿಸುವವರಿಗಿಂತ ಸಿಟಿ ಗಳಲ್ಲಿ ವಾಸಿಸುವವರಲ್ಲಿ ರೋಗದ ಸಾಧ್ಯತೆ ಹೆಚ್ಚು ಎಂದು ಸಂಶೋಧನೆಗಳಿಂದ ತಿಳಿದುಪಟ್ಟಿದೆ.

ದೇಶದಲ್ಲಿ ಆಗುತ್ತಿರುವ ಸಾವಿನಲ್ಲಿ ಆಕ್ಸಿಡೆಂಟ್ ಅನ್ನು ಹೊರತುಪಡಿಸಿದರೆ ೨೩% ಸಾವು ಹೃದ್ರೋಗಗಳಿಂದ ಸಂಭವಿಸುತ್ತಿದೆ. ಅದ್ರಲ್ಲೂ ಯುವ ಜಾನಾಂಗದಲ್ಲಿ ಶೇಕಡಾ ೩೨% ಮಂದಿ ಹೃದ್ರೋಗದಿಂದ ಸಾವಿಗೀಡಾಗುತ್ತಿದ್ದರೆ.ಜಿಬಿಡಿ ಸ್ಟಡಿ ಪ್ರಕಾರ ಕಳೆದ ೩೦ ವರ್ಷಗಳಲ್ಲಿ ಹೃದ್ರೋಗದಿಂದ ಬಳಲುತ್ತಿರವವರ ಹಾಗು ಸಾಯುತ್ತಿರುವವರ ಸಂಖ್ಯೆ ದುಪ್ಪಟ್ಟಾಗಿದೆ ಎಂದು ತಿಳಿದು ಬಂದಿದೆ. ೧೯೯೦ ಇಸವಿಯಲ್ಲಿ ಇಸ್ಕೆಮಿಕ್ ಹಾರ್ಟ್ ಡಿಸೀಸ್ ಇಂದ ಬಳಲುತ್ತಿದ್ದವರ ಸಂಖ್ಯೆ ೧೫.೮ ಮಿಲಿಯನ್ ಇದ್ದದ್ದು ಅದೇ ೨೦೧೦ ರಸ್ಟರಲ್ಲಿ ೨೬.೨ ಮಿಲಿಯನ್ ಅಷ್ಟಾಗಿದೆ ಎಂದರೆ ನಾವು ಸಾವಿಗೆ ಎಷ್ಟು ಹತ್ತಿರದಲ್ಲಿದ್ದೇವೆ ಅನ್ನುವುದನ್ನು ಯೋಚಿಸಿ ಸ್ನೇಹಿತರೆ..

ಅತಿ ಹೆಚ್ಚು ಪ್ರೋಸೆಸ್ಸ್ಡ್ ಹಾಗು ರಿಫೈನ್ಡ್ ಫುಡ್ ಗಳ ಬಳಕೆ, ರಕ್ತದಲ್ಲಿನ ಹೆಚ್ಚು ಕೊಲೆಸ್ಟ್ರಾಲ್,ಧೂಮಪಾನ, ಮದ್ಯಪಾನ,ತಂಬಾಕು ಸೇವನೆ, ಅಧಿಕ ರಕ್ತದೊತ್ತಡ,ಮಧುಮೇಹ, ಬೊಜ್ಜು, ವ್ಯಾಯಾಮ ರಹಿತ ಜೀವನ ಶೈಲಿ, ಹಣ್ಣು ತರಕಾರಿಗಳ ಸೇವನೆ ಮಾಡದಿರುವುದು, ಒತ್ತಡ ಇತ್ಯಾದಿಗಳು ಹೃದ್ರೋಗ ಬರಲು ಮೂಲಕಾರಣವಾಗಿದೆ.

ಹೃದ್ರೋಗ ತಡೆಗಟ್ಟಲು ಮರಳಿ ಪ್ರಕೃತಿಗೆ:

ನಿಮ್ಮ ಹೃದಯದ ಸ್ವಾಸ್ಥವನ್ನು ಕಾಪಾಡಿಕೊಳ್ಳಲು ಇಲ್ಲಿದೆ ಕೆಲವು ಸರಳ ಸೂತ್ರಗಳು:

೧) ದಿನಕ್ಕೆರಡು ಬಾರಿ ಮಾತ್ರ ಊಟ ಮಾಡಿ:
ಅತಿಯಾದ ಕ್ಯಾಲೊರಿ ಯುಕ್ತ ಆಹಾರಗಳ ಸೇವನೆಯು ನಮ್ಮನ್ನು ಬೊಜ್ಜು, ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ಮೂಳೆಸವೆತ ಇತರ ರೋಗಗಳ ಕಬಂಧ ಬಾಹುವಿನಲ್ಲಿ ಸಿಗಿಸುತ್ತಿದೆ. ನೀವು ತೆಗೆದುಕೊಳ್ಳುವ ಆಹಾರದ ಕ್ಯಾಲೊರಿಯು ನಿಮ್ಮ ಈಗಿನ ತೂಕವನ್ನು(ಕೆಜಿ ಗಳಲ್ಲಿ) 24 ರಿಂದ ಗುಣಾಕರಿಸಿದರೆ ಸಿಗುವ ಅಂಕಿಗಿಂತ ಹೆಚ್ಚಾಗಿರಬಾರದು.
ಉದಾ : ನಿಮ್ಮ ಈಗಿನ ತೂಕವು 64KG ಇದ್ದಲ್ಲಿ ನೀವು ತೆಗೆದುಕೊಳ್ಳುವ ಕ್ಯಾಲೋರಿಯು
64 *24 =1536 ಕ್ಯಾಲೋರಿ ಅನ್ನು ಮೀರಬಾರದು.
ಅದೇ ನಿಮ್ಮ ತೂಕ 90 ಕೆಜಿ ಇದ್ದಲ್ಲಿ 90 *24 =೨೧೬೦ ಕ್ಯಾಲೋರಿ ಅಷ್ಟು ಅಥವಾ ಅದಕ್ಕಿಂತ ಕಡಿಮೆ ಕ್ಯಾಲೊರಿ ಸೇವಿಸಬೇಕು.
ಹೀಗೆ ನಿಮ್ಮ ಕ್ಯಾಲೊರಿ ನಿಯಂತ್ರಣ ಮಾಡಲು ಕಷ್ಟವಾದಲ್ಲಿ ದಿನಕ್ಕೆರಡು ಬಾರಿ ಸರಿಯಾದ,ನಿಯಮಿತ ಆಹಾರ ಸೇವಿಸಿ ಒಂದು ಬಾರಿ ಮಾತ್ರ ಹಣ್ಣು, ಹಸಿ ಮತ್ತು ಬೇಯಿಸಿದ ತರಕಾರಿಗಳನ್ನು ತಿಂದಲ್ಲಿ ಕ್ಯಾಲೊರಿ ಸೇವನೆ ಕಡಿಮೆಯಾಗಿ ಬೊಜ್ಜಿನ ಸಾಧ್ಯತೆ ಇಳಿಕೆಯಾಗುತ್ತದೆ. ಹೊರಗಿನ ತಿಂಡಿಗಳನ್ನು, ಫಾಸ್ಟ್ ಮತ್ತು ಪ್ರೋಸೆಸ್ಸ್ಡ್ ಆಹಾರ ಪದಾರ್ಥಗಳನ್ನು ಆದಷ್ಟು ಕಡಿಮೆ ತಿನ್ನಿ. ಇದರಿಂದ ನಿಮ್ಮ ರಕ್ತದ ಕೊಲೆಸ್ಟ್ರಾಲ್ ಹಾಗು ಸಕ್ಕರೆ ಪ್ರಮಾಣಗಳು ಹತೋಟಿಯಿಂದಿದ್ದು ಹೃದ್ರೋಗ ತಡೆಗಟ್ಟಲು ಸಾಧ್ಯವಾಗುತ್ತದೆ. ನಿಮ್ಮ ಊಟದಲ್ಲಿ ಸಂಸ್ಕರಿಸದ, ಪೋಲಿಷ್ ಮಾಡದಂತಹ ಧಾನ್ಯಗಳನ್ನು ಹೇರಳವಾಗಿ ಬಳಸಿ. ಇದರಿಂದ ರಕ್ತದಲ್ಲಿನ ಅತಿಯಾದ ಸಕ್ಕರೆ ಪ್ರಮಾಣ ಗಣನೀಯವಾಗಿ ಇಳಿಯುತ್ತದೆ.ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಕಡಿಮೆ ಬಳಸಿ.. ಆದಷ್ಟು ಎಣ್ಣೆಯ ಬಳಕೆಯನ್ನು ನಿಯಮಿತಗೊಳಿಸಿದ್ದಲ್ಲಿ ರಕ್ತದಲ್ಲಿ ಕೆಟ್ಟ ಕೊಬ್ಬು ಸಂಗ್ರಹವಾಗುವುದು ತಡೆಗಟ್ಟಬಹುದು.

೨) ದಿನಕ್ಕೆ ಕನಿಷ್ಠ ಅರ್ಧ ಗಂಟೆ ವ್ಯಾಯಾಮಕ್ಕೆ ಮೀಸಲಿಡಿ:

ನಮಗೆ ನಿಮಗೆ ಗೊತ್ತಿರುವ ಹಾಗೆ ವ್ಯಾಯಾಮ ಎಷ್ಟೋ ಖಾಯಿಲೆಗಳಿಗೆ ರಾಮಬಾಣ. ದಿನಕ್ಕೊಂದು ಗಂಟೆ ಎಕ್ಸರ್ಸೈಜ್ ಮಾಡಿದ್ದಲ್ಲಿ
– ಕ್ಯಾಲೊರಿ ಬರ್ನಿಂಗ್ ಅಧಿಕವಾಗಿ ಬೊಜ್ಜು ನಿಯಂತ್ರಣಕ್ಕೆ ಬರುತ್ತದೆ.
-ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಒಳ್ಳೆಯ ಕೊಲೆಸ್ಟ್ರಾಲ್ ಅಧಿಕವಾಗುತ್ತದೆ.
-ಜೀವಕೋಶಗಳಲ್ಲಿ ಇನ್ಸುಲಿನ್ ರೆಸಿಸ್ಟೆನ್ಸ್ ಕಡಿಮೆಯಾಗಿ ರಕ್ತದಲ್ಲಿನ ಸಕ್ಕರೆ ಅಂಶಗಳು ಕಡಿಮೆಯಾಯಾಗುತ್ತದೆ.
– ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.
– ಹೃದಯದ ಹಾಗು ಮಾಂಸಖಂಡಗಳ ಕಾರ್ಯಕ್ಷಮತೆ ಹೆಚ್ಚುತ್ತದೆ.
ವ್ಯಾಯಾಮವು ಹೃದ್ರೋಗಕ್ಕೆ ಮೂಲಕಾರಣಗಳನ್ನು ಬೇರಿನಿಂದಲೇ ತೊಡೆದು ಹಾಕುವುದರಿಂದ
ಅವುಗಳು ಬಾರದಂತೆ ತಡೆಗಟ್ಟುತ್ತದೆ. ದಿನಕ್ಕೆ ೩೦ ನಿಮಿಷದಂತೆ ವಾರದಲ್ಲಿ ಕನಿಷ್ಠ ಐದು ಬಾರಿ ದೈಹಿಕ ಅಭ್ಯಾಸವನ್ನು ಮಾಡಿದರೂ ಸಹ ಹೃದ್ರಾಗದ ಸಾಧ್ಯತೆ ಶೇಕಡಾ ೭೫% ರಷ್ಟು ಇಳಿಕೆಯಾಗುತ್ತದೆ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ.

೩) ದಿನಕ್ಕೆ ೧೫ ನಿಮಿಷ ಪ್ರಾರ್ಥನೆ/ ಪ್ರಾಣಾಯಾಮ/ ಧ್ಯಾನ ಮಾಡಿ:

ಆಧುನಿಕ ಜೀವನದಲ್ಲಿ ಒತ್ತಡವು ಹಾಸುಹೊಕ್ಕಾಗಿದೆ.ಒತ್ತಡದ ಸಂದರ್ಭದಲ್ಲಿ ದೇಹದಲ್ಲಿ ಅನೇಕ ಬದಲಾವಣೆಗಳಗುತ್ತವೆ. ಒತ್ತಡಯುಕ್ತ ಪರಿಸ್ಥಿತಿ ಎದುರಾದಾಗ ದೇಹದಲ್ಲಿ ಅಡ್ರಿನಾಲಿನ್ ಹಾರ್ಮೋನ್ ಗಳ ಉತ್ಪತ್ತಿ ಹೆಚ್ಚಾಗಿ ಹೃದಯ ಬಡಿತ ಏರುವುದು, ಉಸಿರಾಟ ವೇಗವಾಗುವುದು, ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುವುದು, ಜೀರ್ಣಾಂಗ ರಸಗಳು ಅಧಿಕ ಸ್ರವಿಸುವುದು,ಸ್ನಾಯುಗಳು ಸಂಕುಚಿತಗೊಳ್ಳುವುದು ಹೀಗೆ ಅನೇಕ ವಿಧವಾದ ಬದಲಾವಣೆಗಳು ಗೋಚರವಾಗುತ್ತವೆ. ಇದೆ ಒತ್ತಡಗಳು ಮುಂದುವರೆಯುತ್ತ ಹೋದಲ್ಲಿಅಧಿಕ ರಕ್ತದೊತ್ತಡ, ಮಧುಮೇಹ ದಂತಹ ಖಾಯಿಲೆಗಳ ದಾಸರಾಗುತ್ತೇವೆ ಕ್ರಮೇಣ ಹೃದ್ರೋಗಗಳಿಗೂ ಬಲಿಯಾಗುತ್ತೇವೆ. ಈ ಒತ್ತಡಗಳನ್ನು ನಿಗ್ರಹಿಸಲು ಸರಳ ಸುಂದರ ಉಪಾಯವೆಂದರೆ ಧ್ಯಾನ ಅಥವಾ ಪ್ರಾರ್ಥನೆ. ಧ್ಯಾನ ಅಥವಾ ಪ್ರಾರ್ಥನೆಯ ಸಂದರ್ಭದಲ್ಲಿ ದೇಹ ಮತ್ತು ಮನಸ್ಸು ವಿಶ್ರಮಿಸಿ ಮಾನಸಿಕ ಮತ್ತು ದೈಹಿಕ ಒತ್ತಡಗಳನ್ನು ಕಡಿಮೆಮಾಡುತ್ತವೆ. ಆದ್ದರಿಂದ ದಿನಕ್ಕೆ ಕನಿಷ್ಠ ೧೫ ನಿಮಿಷಗಳ ಕಾಲ ಮನಸ್ಸನ್ನು ಕೇಂದ್ರೀಕರಿಸಿದ್ದಲ್ಲಿ ಆತಂಕ ಉದ್ವೇಗಗಳು ಕಡಿಮೆಯಾಗಿ ಹೃಗ್ರೋಗ ಬಾರದಂತೆ ತಡೆಗಟ್ಟುತ್ತವೆ.

೪) ವ್ಯಸನಗಳಿಂದ ದೂರವಿರಿ:

ಮಧ್ಯಪಾನ ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಎಲ್ಲರೂ ಹೇಳುತ್ತಾ ಬಂದಿದ್ದರೂ ಅದನ್ನು ಸೇವಿಸುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ..ಅತಿಯಾದ ಮಧ್ಯಪಾನ ಮತ್ತು ಧೂಮಪಾನವು ರಕ್ತದೊತ್ತಡವನ್ನು ಅಧಿಕ ಮಾಡಿ, ರಕ್ತದಲ್ಲಿ ಕೆಟ್ಟ ಕೊಬ್ಬಿನ ಅಂಶಗಳನ್ನು ಅಧಿಕ ಮಾಡಿ ಕೊರೋನರಿ ರಕ್ತನಾಳಗಳಲ್ಲಿ ಅಥೆರೋಸ್ಕ್ಲೆರೋಟಿಕ್ ಬ್ಲಾಕ್ ಗಳನ್ನುಂಟು ಮಾಡಿ ಹೃದಯಕ್ಕೆ ರಕ್ತಪರಿಚಲನೆಯನ್ನು ಕುಂಠಿತಗೊಳಿಸುತ್ತದೆ.ಇದರಿಂದ ಹೃದ್ರೋಗಗಳ ಸಾಧ್ಯತೆ ಅಧಿಕವಾಗುತ್ತದೆ. ಆದ್ದರಿಂದ ವ್ಯಸನಗಳಿಂದ ಆದಷ್ಟು ದೂರವಿರಿ.

Also read: ನಿಯತವಾಗಿ ಕಲ್ಲಂಗಡಿ ಹಣ್ಣು ತಿನ್ನೋದಕ್ಕೆ ಶುರು ಮಾಡಿದ್ದೇ ಆದರೆ, ಮಾತ್ರೆಗಳನ್ನು ತಿನ್ನೋ ಪ್ರಮೇಯನೇ ಬರೋಲ್ಲ!!