ಉತ್ತರ ಭಾರತದ ಜನಪ್ರೀಯ ಸಿಹಿತಿಂಡಿ ಕ್ಯಾರಟ್ ಹಲ್ವಾ ಮಾಡುವ ವಿಧಾನ

0
5477

ಉತ್ತರ ಭಾರತದ ಜನಪ್ರೀಯ ಸಿಹಿತಿಂಡಿ ಕ್ಯಾರಟ್ ಹಲ್ವಾ. ಚಳಿಗಾಲದಲ್ಲಿ ಡಿಸೆಂಬರ್ ತಿಂಗಳಲ್ಲಿ ಎಲ್ಲಕಡೆಗಳಲ್ಲಿ ಸಿಗುವ ಕೆಂಪು ಕ್ಯಾರಟ್ ನಿಂದ ಮಾಡುತ್ತಾರೆ. ಆ ಕ್ಯಾರಟ್ ಸಿಗದಿದ್ದರೆ ಮಾಮೂಲು ಎಲ್ಲಕಾಲದಲ್ಲಿ ಸಿಗುವ ಸಾಮಾನ್ಯ ಕ್ಯಾರಟ್ ನಿಂದ ಕೂಡ ಮಾಡುತ್ತಾರೆ.

ಬೇಕಾಗಿರುವ ಸಾಮಗ್ರಿಗಳು

ಕ್ಯಾರಟ್ ೧ ಕೆಜಿ
ಸಕ್ಕರೆ ೧ ಕಪ್
ಏಲಕ್ಕಿ ಪುಡಿ ೧/೨ ಟೀ ಸ್ಪೂನ್
ಹಾಲು ೧/೪ ಕಪ್
ತುಪ್ಪ ೩ ಟೇಬಲ್ ಸ್ಪೂನ್
ಕೋವ ೧/೪ ಕಪ್
ತುಪ್ಪದಲ್ಲಿ ಹುರಿದ ಗೋಡಂಬಿ ದ್ರಾಕ್ಷಿ ೧/೪ ಕಪ್

ಮಾಡುವ ವಿಧಾನ :::

ಕ್ಯಾರಟ್ ತುರಿಯನ್ನು ಕುಕ್ಕರ್‌ನಲ್ಲಿ ಕೊಂಚವೇ ನೀರಿನೊಡನೆ ಬೇಯಿಸಿ. ಬಳಿಕ ತಣಿಸಿ ಮುಚ್ಚಳ ತೆಗೆಯಿರಿ. ಕ್ಯಾರಟ್ಅನ್ನು ಹೊರತೆಗೆದು ಒಂದು ತಟ್ಟೆಯ ನಡುವೆ ಹರಡಿ. ಒಂದು ದಪ್ಪತಳದ ಬಾಣಲೆ ಅಥವಾ ಪಾತ್ರೆಯಲ್ಲಿ ಮಧ್ಯಮ ಉರಿಯಲ್ಲಿ ಎರಡು ದೊಡ್ಡ ಚಮಚ ತುಪ್ಪವನ್ನು ಕಾಯಿಸಿ. ತುಪ್ಪ ಬಿಸಿಯಾದ ಕೂಡಲೇ ಬೇಯಿಸಿದ ಕ್ಯಾರಟ್ ತುರಿಯನ್ನು ಹಾಕಿ, ಕ್ಯಾರಟ್ ಪೂರ್ಣವಾಗಿ ಬೇಯುವವರೆಗೆ ತಿರುವುತ್ತಾ ಇರಿ. ನಂತರ ಹಾಲು ಹಾಕಿ ಕಲಕಿ. ಬಳಿಕ ಸಕ್ಕರೆ ಹಾಕಿ ಕಲಕಿ. ಹಾಲನ್ನು ಕ್ಯಾರಟ್ ನ ತುರಿ ಪೂರ್ಣವಾಗಿ ಹೀರಿಕೊಂಡ ಬಳಿಕ ಉರಿಯನ್ನು ಚಿಕ್ಕದಾಗಿಸಿ ಇನ್ನೂ ಎರಡು ದೊಡ್ಡ ಚಮಚ ತುಪ್ಪವನ್ನು ಹಾಕಿ ತಿರುವಿ. ಏಲಕ್ಕಿಪುಡಿ ಹಾಕಿ ತಿರುವಿ. ತುಪ್ಪ ಬಿಡುತ್ತಿದೆ ಎಂದೆನ್ನಿಸಿದಾಗ ಉರಿ ಆರಿಸಿ ಪಾತ್ರೆಯನ್ನು ಕೆಳಗಿಳಿಸಿ. ಇನ್ನೊಂದು ಚಿಕ್ಕ ಪಾತ್ರೆಯಲ್ಲಿ ಇನ್ನೆರಡು ದೊಡ್ಡ ಚಮಚ ತುಪ್ಪ ಬಿಸಿಮಾಡಿ ಗೋಡಂಬಿ, ದ್ರಾಕ್ಷಿಗಳನ್ನು ಹಾಕಿ ಕೆಂಪಗಾಗುವಷ್ಟು ಹುರಿದು ಮಿಶ್ರಣ ಹಾಕಿ. ಕ್ಯಾರಟ್ ಹಲ್ವಾ ಸವಿಯಲು ಸಿದ್ದ