ಹಿಂದೂ ಧರ್ಮದ ಅವಹೇಳನ ಮತ್ತು ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಐವರು “ಬುದ್ದಿಜೀವಿಗಳ” ಮೇಲೆ ಕೇಸ್!!

0
427

ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಚುನಾವಣಾ ಪ್ರಚಾರ ಮಾಡಿದ ಸಹಬಾಳ್ವೆ ಉಡುಪಿ ಅಧ್ಯಕ್ಷ ಅಮೃತ್‌ ಶೆಣೈ, ಹಿರಿಯ ಪತ್ರಕರ್ತ, ಚಿಂತಕ ದಿನೇಶ್‌ ಅಮೀನ್‌ ಮಟ್ಟು, ದಲಿತ ಮುಖಂಡ ಇಂದೂಧರ ಹೊನ್ನಾಪುರ, ಜಿ.ಎನ್‌. ನಾಗರಾಜ್‌ ಹಾಗೂ ಸಾಮಾಜಿಕ ಚಿಂತಕ ಮಹೇಂದ್ರ ಕುಮಾರ್‌ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹೌದು ಮಾರ್ಚ್ 17ರಂದು ಉಡುಪಿಯ ಕಲ್ಸಂಕದ ರಾಯಲ್ ಗಾರ್ಡನ್ ನಲ್ಲಿ ಈ ಐವರು ಮಾಡಿದ ಭಾಷಣ ಚುನಾವಣಾ ಮಾದರಿ ನೀತಿ ಸಂಹಿತೆಗೆ ವಿರುದ್ಧವಾಗಿದ್ದು ಮಾತ್ರವಲ್ಲದೆ ಧರ್ಮ ನಿಂದನೆ ಸಹ ನಡೆದಿದೆ ಎಂಬ ಮಾಹಿತಿ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅದರಂತೆ ಹಿಂದೂ ಧರ್ಮವನ್ನು ನಿಂದಿಸಿ ಪ್ರಚೋದನಕಾರಿ ಭಾಷಣ ಮಾಡಿ ಚುನಾವಣಾ ಪ್ರಚಾರದ ಜೊತೆಗೆ ಧರ್ಮಗಳ ನಿಂದನೆ ಮಾಡಿದ್ದರು. ಪ್ರಧಾನಿ ಮೋದಿ, ಪೇಜಾವರಶ್ರೀ, ಪ್ರಕಾಶ್ ರೈ ಮೇಲೆ ವಾಗ್ದಾಳಿ ಮಾಡಿದ್ದರು. ಹಿಂದೂ ಧರ್ಮದ ಹೆಸರು ತೆಗೆದು ಟೀಕೆ ಮಾಡಿದ್ದರು.

Also read: ಚುನಾವಣಾ ಸಂಹಿತೆ ಎಂದರೇನು? ಜಾರಿಯಾದನಂತರ ನೀವು ಫಾಸೆಬುಕ್/ವಾಟ್ಸಾಪ್-ಗಳಲ್ಲಿ ನಿಮ್ಮ ಪಕ್ಷದ ಪರ ನೀವು ಪ್ರಚಾರದಲ್ಲಿ ತೊಡಗಬಹುದಾ ಇಲ್ಲವಾ?? ಇಲ್ಲಿದೆ ಉತ್ತರ…

ಐದು ಮಂದಿಯ ಮೇಲೆ ಪ್ರಕರಣ?

ದಿನೇಶ್ ಅಮೀನ್ ಮಟ್ಟು, ಮಹೇಂದ್ರ ಕುಮಾರ್, ಇಂದೂಧರ ಹೊನ್ನಾಪುರ, ಜಿಎನ್ ನಾಗರಾಜ್ ಹಾಗೂ ಕಾರ್ಯಕ್ರಮ ಆಯೋಜಕ ಅಮೃತ್ ಶೆಣೈ ಮೇಲೆ ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ಪ್ರಕರಣ ದಾಖಲಿಸಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅಮೃತ್ ಶೆಣೈ ಈ ಸಮಾವೇಶ ಆಯೋಜಿಸಿದ್ದರೆನ್ನಲಾಗಿದೆ.

ವರದಿಯಲ್ಲಿ ಏನಿದೆ?

Also read: ಸಾವಿರಾರು ಕೋಟಿ ನುಂಗಿ ದೇಶ ಬಿಟ್ಟು ಪರಾರಿಯಾಗಿದ್ದ ಉದ್ಯಮಿ ನೀರವ್ ಮೋದಿ ಕೊನೆಗೂ ಅರೆಸ್ಟ್; ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರ..

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಫ್ಲೈಯಿಂಗ್ ಸ್ಕ್ವಾಡ್ ತಂಡ 2 ರ ಅಧಿಕಾರಿ ಕೆ.ವಿ.ನಾಗರಾಜ್ ಅವರು ಸಲ್ಲಿಸಿದ ದೂರಿನ ಸಾರಾಂಶದಂತೆ ಮಾರ್ಚ್ 17 ರಂದು ಮಧ್ಯಾಹ್ನ 03:00 ಗಂಟೆಯಿಂದ ಸಂಜೆ 7:30 ಗಂಟೆಯವರೆಗೆ ರಾಯಲ್ ಗಾರ್ಡನ್ ಮೈದಾನದಲ್ಲಿ ಸಹಬಾಳ್ವೆ ಎಂಬ ಕಾರ್ಯಕ್ರಮವು ಅಮೃತ ಶೆಣ್ಣೆರವರ ನೇತ್ರತ್ವದಲ್ಲಿ ನಡೆದಿದ್ದು, ಸಭೆಯ ಕಾರ್ಯಕ್ರಮದಲ್ಲಿ ದಿನೇಶ್ ಅಮೀನ್ ಮಟ್ಟು, ಮಹೇಂದ್ರ ಕುಮಾರ್, ಜಿ. ಎನ್ ನಾಗರಾಜ್, ಇಂದೊಧರ ಹೊನ್ನಾಪುರರವರುಗಳು ತಮ್ಮ ಭಾಷಣದಲ್ಲಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಮಾಡಿ.

ಮತದಾರರ ಮೇಲೆ ಪ್ರಭಾವ ಬೀರುವಂತೆ ಮುಂಬರುವ ಚುನಾವಣೆಯಲ್ಲಿ ಮತದಾರರು ಯೋಚಿಸಿ ಮತ ಚಲಾಯಿಸಿವಂತೆ ಕರೆ ನೀಡಿದ್ದು ಅಲ್ಲದೇ ಕಾರ್ಯಕ್ರಮಕ್ಕೆ ಅನುಮತಿ ಪಡೆದ ಅಮೃತ ಶೆಣೈ ಉಡುಪಿರವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿರುವುದಾಗಿ ದೂರು ದಾಖಲಿಸಿದ್ದಾರೆ.