ನಿಮ್ಮ ಮನೆಯಲ್ಲೇ ಮಾಡಿ ನೋಡಿ ಗೋಡಂಬಿ ಬರ್ಫಿ

0
2133

ಸಿಹಿ ಅಂದರೆ ಮಕ್ಕಳಿ ಮಕ್ಕಳಿಗೆ ಹಾಗೂ ದೊಡ್ಡವರಿಗೆ ಪಂಚಪ್ರಾಣ ಅದರಲ್ಲೂ ಗೋಡಂಬಿ ಫ್ಲೇವರ್ ಇದ್ದರಂತು ಹಿರಿಯರು ತುಂಬಾನೆ ಇಷ್ಟಪಟ್ಟು ತಿನ್ನುತ್ತಾರೆ. ಗೋಡಂಬಿ ತ್ತಿನ್ನುವುದರಿಂದ ಮೆದಳು ಚುರುಕಾಗುತ್ತದೆ ಮತ್ತು ಗೋಡಂಬಿ ಬರ್ಫಿ ತಿನ್ನುವುದರಿಂದ ಜ್ಞಾಪಕಶಕ್ತಿ ಹೆಚ್ಚುತ್ತದೆ. ಸಕ್ಕರೆ ಅಥವಾ ತುಪ್ಪ ಹಾಕಿ ಮಾಡುವ ಬರ್ಫಿ ತುಂಬಾ ರುಚಿಕರವಾಗಿದ್ದು ಮಾಡುವ ವಿಧಾನ ನೋಡಿ ಇಲ್ಲಿದೆ.

ಗೋಡಂಬಿ ಬರ್ಫಿಗೆ ಬೇಕಾಗುವ ಸಾಮಗ್ರಿಗಳು:

ಗೋಡಂಬಿ – ಒಂದು ಕಪ್

ಸಕ್ಕರೆ – ಒಂದು ಕಪ್

ರುಚಿಗೆ ತಕ್ಕಷ್ಟು ಹಾಲು

ಅರ್ಧ ಕಪ್ ಕಂಡೆನ್ಸ್ಡ್ ಮಿಲ್ಕ್

ಒಂದು ಟಿನ್ ತುಪ್ಪ

ಎರಡು ದೊಡ್ಡ ಚಮಚ ಏಲಕ್ಕಿ ಪುಡಿ ಸ್ವಲ್ಪ

ತಯಾರಿಸುವ ವಿಧಾನ:

ಗೋಡಂಬಿಯನ್ನು ಪುಡಿ ಮಾಡಿಕೊಳ್ಳಿ. ಪಾತ್ರೆಗೆ ಸಕ್ಕರೆ ಮತ್ತು ಕಂಡೆನ್ಸ್ಡ್ ಮಿಲ್ಕ್ ಹಾಕಿ ಬೆರೆಸಿ,ಅದಕ್ಕೆ ಗೋಡಂಬಿ ಪುಡಿಯನ್ನು ಹಾಕಿ ಕೆದಕುತ್ತಿರಿ,ಸ್ವಲ್ಪ ಹೊತ್ತಿನ ನಂತರ ತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಕೈ ಬಿಡದೇ ಚೆನ್ನಾಗಿ ಕೆದಕುತ್ತಿರಿ,ತಳ ಹಿಡಿಯದಂತೆ ತಿರುಗಿಸಿ,ಸ್ವಲ್ಪ ಹೊತ್ತಿಗೆ ಅದು ತಳ ಬಿಡುತ್ತಾ ಬರುತ್ತದೆ. ಬರ್ಫಿಯ ಹದ ಬಂದಿದೆ ಎನಿಸಿದ ತಕ್ಷಣ ತುಪ್ಪ ಸವರಿದ ತಟ್ಟೆಗೆ ಹಾಕಿ,ಸಮ ಮಾಡಿ. ಸ್ವಲ್ಪ ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ. ತಿನ್ನಲು ಗೋಡಂಬಿ ಬರ್ಫಿ ತಯಾರಾಗುತ್ತದೆ.ಮಕ್ಕಳಿಗೆ ಪ್ರಿಯವಾದ ಗೋಡಂಬಿ ಬರ್ಫಿ ತಯಾರಾಗುತ್ತದೆ.