ಡಿಜಿಟಲ್ ಇಂಡಿಯಾ : ಕ್ಯಾಶ್ ಲೆಸ್ ವ್ಯವಹಾರ ಮಾಡಿದರೆ ದುಪ್ಪಟು ದುಡ್ಡು ಕೊಡಬೇಕು ಎಚ್ಚರ !!

0
658

ನಗದು ರಹಿತ ವ್ಯವಹಾರವನ್ನು[Cashless transaction] ಉತ್ತೇಜಿಸಲು ಕೇಂದ್ರ ಸರ್ಕಾರ ಹಲವಾರು ಕ್ರಮ ಕೈಗೊಂಡಿದೆ. ಪ್ರಮುಖವಾಗಿ ಅಪನಗಧೀಕರಣ (Demonetisation) ಬಗ್ಗೆ ರಾಷ್ಟ್ರಾದ್ಯಅಂತ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಭ್ರಷ್ಟಾಚಾರ, ಖೋಟಾ ನೋಟು ಮತ್ತು ಭಯೋತ್ಪಾದನೆಯನ್ನು ಮಟ್ಟ ಹಾಕಲು ಪ್ರಧಾನಿಗಳಾದ ಶ್ರೀ ಮೋದಿ ಯವರು ಕೈಗೊಂಡಿರುವ ದಿಟ್ಟ ಕ್ರಮವೆಂದು ಅನೇಕರು ಕೊಂಡಾಡಿದ್ದಾರೆ. ಆದರೆ, ಒಬ್ಬ ಸಾಮಾನ್ಯ ನಾಗರೀಕನಿಗೆ ಇದರಿಂದಾಗುವ ಪ್ರಯೋಜನಗಳೇನು. ಬೆಂಗಳೂರಿನಿಂದ – ಮೈಸೂರಿಗೆ ಹೊರಡುವ ಟಿಪ್ಪು ಎಕ್ಸ್ಪ್ರೆಸ್ ನಲ್ಲಿ ಟಿಕೆಟ್ ಕಾಯ್ದಿರಿಸಲು ನಾವು ಮಾಡಿದ ರಿಯಾಲಿಟಿ ಚೆಕ್ ಇಳಿದೆ ನೋಡಿ:

ಬೆಂಗಳೂರಿಂದ ಮೈಸೂರಿಗೆ ಟ್ರೈನ್ ಶುಲ್ಕ: ರೂ.60 /- (ಕೌಂಟರ್ ನಲ್ಲಿ ಕೊಂಡಾಗ)

ಬೆಂಗಳೂರಿನಿಂದ ಮೈಸೂರಿಗೆ ಟ್ರೈನ್ ಶುಲ್ಕ (ಆನ್ಲೈನ್ ನಲ್ಲಿ ಟಿಕೆಟ್ ಬುಕಿಂಗ್ ಮಾಡಿದಾಗ)

ರೂ. 60 +15 ರೂ (ರಿಸೆರ್ವೆಷನ್ ಚಾರ್ಜ್) + 15 roo (ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ಚಾರ್ಜ್) + 15 ರೂ ಬ್ಯಾಂಕ್ ಕಮಿಷನ್ = 105 ರೂ/-

ಅಂದರೆ ಟಿಕೆಟ್ ನ 75% ರಷ್ಟು ಹೆಚ್ಚು ಶುಲ್ಕವನ್ನು ನಾವು ಪಾವತಿಸುತ್ತಿದ್ದೇವೆ. ನಿಮಗೆ ಬರಲಿಲ್ಲವೇ, ಹಾಗಿದ್ದಲ್ಲಿ ನಿಮ್ಮ IRCTC ಅಕೌಂಟ್ ಗೆ ಲಾಗಿನ್ ಮಾಡಿ ನೀವೇ ಒಂದ್ಸಲ ನೋಡಿ.

ಉನ್ನತೀಕರಣ, ಆಧುನೀಕರಣ, ಡಿಜಿಟಲೀಕರಣವೆಂಬ ನೆಪದಲ್ಲಿ ಮೂರು ನಾಮ ಎಳೆಯುತ್ತಿರುವುದು ಸತ್ಯವಲ್ಲವೇ ?

ಒಂದು ಟಿಕೆಟ್ ನ ಮುಖಬೆಲೆಯ 75% ಕ್ಕೂ ಹೆಚ್ಚು ದರವನ್ನು ಬರಿ ಕಮಿಷನ್, ಆನ್ಲೈನ್ ಪಾವತಿ ಶುಲ್ಕದ ನೆಪದಲ್ಲಿ ಒಬ್ಬ ಸಾಮಾನ್ಯ ನಾಗರೀಕನ ಮೇಲೆ ಹೇರುತ್ತಿರುವುದು ಸರಿಯೇ?

ಕೇವಲ 60 ರೂ ಮುಖಬೆಲೆಯ ಟಿಕೆಟನ್ನು, ಆನ್ಲೈನ್ ನಲ್ಲಿ ಕಾಯ್ದಿರಿಸಿದಾಗ ನಾವು ಕಟ್ಟು ಶುಲ್ಕ ಬರೋಬ್ಬರಿ ೧೦೫ ರೂ. ನಗದುರಹಿತ ಆರ್ಥಿಕವ್ಯಸ್ಥೆ ಯನ್ನು ಪ್ರೋತ್ಸಾಹಿಸಲು ಬಡವನ ಮೇಲೆ ಬರಿಯ ಎಳೆಯೋದು ಸರಿಯೇ? ಅಷ್ಟಕ್ಕೂ, ನಗದುರಹಿತ ವ್ಯವಹಾರಗಳಿಗೆ ಉತ್ತೇಜನ ನೀಡಬೇಕಾದ ಕೇಂದ್ರ ಸರ್ಕಾರ ಈ ರೀತಿ ಮಾಡುವುದು ಎಷ್ಟು ಸರಿ?