ರಿಷಬ್ ಶೆಟ್ಟಿ ಅವರ ಹೊಸ ಸಿನಿಮಾ ‘ರುದ್ರಪ್ರಯಾಗ’ ದಲ್ಲಿ ನಟಿಸಲು ಹೊಸ ಕಲಾವಿದರಿಗೆ ಅವಕಾಶ; ಸಿನಿಮಾದಲ್ಲಿ ನಟಿಸುವ ಆಸಕ್ತಿ ಇದ್ದರೆ ಈ ಮಾಹಿತಿ ನೋಡಿ.!

0
329

ಪ್ರತಿಯೊಂದು ಹೊಸ ಸಿನಮಾದಲ್ಲಿ ಹೊಸ ಕಲಾವಿದರಿಗೆ ಅವಕಾಶವನ್ನು ಕೊಟ್ಟು ಬೇರೆಯೇ ಸೊಗಡಿನಲ್ಲಿ ಸಿನಿಮಾ ಮಾಡಿ ಕನ್ನಡಿಗರ ನೆಚ್ಚಿನ ಹೀರೋ ಆದ ನಟ ರಿಷಬ್ ಶೆಟ್ಟಿಯವರ ಮತ್ತೊಂದು ಸಿನಿಮಾ ‘ರುದ್ರಪ್ರಯಾಗ’ ಕ್ಕೆ ಹೊಸ ಕಲಾವಿದರನ್ನು ಹುಡುಕುತ್ತಿದ್ದು ಅದಕ್ಕಾಗಿ ಅವಕಾಶವನ್ನು ನೀಡಿದ್ದಾರೆ. ನಿಮಗೂ ಸಿನಿಮಾದಲ್ಲಿ ನಟಿಸುವ ಆಸೆ ಇದ್ದರೆ ರಿಷಬ್ ಶೆಟ್ಟಿ ಅವರು ಹೇಳಿದ ರೀತಿಯಲ್ಲಿ ಮಾಡಿ ಸಿನಾಮದಲ್ಲಿ ಅವಕಾಶ ಪದೆಯರಿ. ಇದರಲ್ಲಿ ಇನ್ನೊಂದು ವಿಷಯ ಅಂದರೆ ಉತ್ತರ ಕರ್ನಾಟಕದವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ರಿಷಬ್ ಶೆಟ್ಟಿ ಸಿನಿಮಾದಲ್ಲಿ ನಟಿಸುವ ಅವಕಾಶ?

ಹೌದು ಈಗಾಗಲೇ ಹಲವು ಸಿನಿಮಾ ಮಾಡಿ ಯಶಸ್ವಿಯಾದ ‘ಬೆಲ್ ಬಾಟಂ’ ರಿಷಬ್ ಶೆಟ್ಟಿ ರುದ್ರಪ್ರಯಾಗ’ ಸಿನಿಮಾಗಾಗಿ ಸಿದ್ಧತೆ ನಡೆಸಿದ್ದಾರೆ. ಇವರ ಸಿನಿಮಾಗಳಲ್ಲಿ ಒಂದಿಲ್ಲೊಂದು ವಿಶೇಷತೆ ಇರುವುದು ಸಿನಿಮಾ ಯಶಸ್ವಿಯಾಗಲು ಕಾರಣವಾಗುತ್ತೆ, ಅದರಂತೆ ಈ ಬಾರಿ ಟೈಟಲ್ ಮೂಲಕವೇ ಕುತೂಹಲ ಮೂಡಿಸಿ ‘ರುದ್ರಪ್ರಯಾಗ’ ಸಿನಿಮಾಗಾಗಿ ಹೊಸ ಕಲಾವಿದರ ಹುಟುಕಾಟವನ್ನು ನಡೆಸಿದ್ದಾರೆ. ಈ ಕುರಿತು ಕಲಾವಿದರು ಬೇಕಾಗಿದ್ದಾರೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಉತ್ತರ ಕರ್ನಾಟಕದವರಿಗೆ ವಿಶೇಷ ಅವಕಾಶ?

ಕಲಾವಿದರ ಆಯ್ಕೆ ಹಲವು ವಿಚಾರಗಳನ್ನು ತಿಳಿಸಿದ್ದು ಆಸ್ತಕಿ ಇರುವವರು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ. ವಿಶೇಷ ಎಂದರೆ ಬೆಳಗಾವಿ, ಹುಬ್ಬಳ್ಳಿ, ಧಾರವಾಡದ ಮಂದಿಗೆ ರಿಷಬ್ ಪ್ರಾತಿನಿಧ್ಯ ನೀಡಿದ್ದಾರೆ. ಅದರಂತೆ ರಿಷಬ್ ಅವರ ಆಹ್ವಾನ ಹೀಗಿದ್ದು ‘ರುದ್ರಪ್ರಯಾಗ’ ಸಿನಿಮಾದಲ್ಲಿ ನಟಿಸಲು ಪುರುಷ ಹಾಗೂ ಮಹಿಳಾ ಕಲಾವಿದರಿಗೆ ಅವಕಾಶವಿದೆ. ಪುರುಷರಿಗೆ 35 ರಿಂದ 55 ವಯಸ್ಸು ನಿಗದಿ ಮಾಡಿದ್ದು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಜಿಲ್ಲೆಯವರಾಗಿರಬೇಕು ಎಂದು ಹೇಳಿದ್ದಾರೆ. ಅಲ್ಲದೇ 30 ರಿಂದ 35 ವಯಸ್ಸಿನ ಮಹಿಳಾ ಕಲಾವಿದರು ಬೇಕಾಗಿದ್ದಾರೆ ಎಂದು ತಿಳಿಸಿದ್ದು, ಇಲ್ಲಿಯೂ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಜಿಲ್ಲೆಯವರಾಗಿರಬೇಕು ಎಂದು ಹೇಳಿದ್ದಾರೆ.

ಅರ್ಹತೆ ಏನು?

‘ರುದ್ರಪ್ರಯಾಗ’ ಸಿನಿಮಾದಲ್ಲಿ ನಟಿಸಲು ಆಸಕ್ತಿ ಹೊಂದಿರುವವರು ತಮ್ಮ 4 ಫೋಟೋ(ಮುಖದ ಮುಂಭಾಗ, ಎಡ, ಬಲ, ಮತ್ತು ಫುಲ್‍ಲೆಂಥ್ ಫೋಟೋ) ಕಳುಹಿಸಬೇಕು. ಆಡಿಷನ್ ಮಾಡಲು ಒಂದು ವಿಷಯವನ್ನು ನೀಡಿದ್ದಾರೆ. ಸರ್ಕಾರಿ ನೌಕರರಾಗಿ ಅಭಿನಯಿಸಿ ಮೇಲಾಧಿಕಾರಿ ಜೊತೆ 1 ತಿಂಗಳು ರಜೆ ನೀಡುವಂತೆ ಕೇಳುವ ದೃಶ್ಯವನ್ನು 60 ಸೆಕೆಂಡ್ ಮೀರದಂತೆ ಚಿತ್ರೀಕರಿಸಿ ಕಳುಹಿಸಿ ಕೊಡಬೇಕೆಂದು ರಿಷಭ್ ಶೆಟ್ಟಿ ಕೇಳಿಕೊಂಡಿದ್ದಾರೆ.

ಇದರ ಜೊತೆ ವೈಯಕ್ತಿಕ ವಿವರಗಳಾದ – ಹೆಸರು, ವಯಸ್ಸು, ಮೊಬೈಲ್ ಸಂಖ್ಯೆ, ವಿಳಾಸ, ನಟನಾ ಅನುಭವ (ಇದ್ದಲ್ಲಿ) ಕುರಿತು ಮಾಹಿತಿ ನೀಡಬೇಕಿದೆ. ಮಾಹಿತಿಗಳನ್ನು ತಿಳಿಸಲು ಇದೇ ತಿಂಗಳು 15 ಕೊನೆಯ ದಿನವಾಗಿದ್ದು, 8088808302 ಮೊಬೈಲ್ ಸಂಖ್ಯೆಗೆ ವಾಟ್ಸಪ್ ಮೆಸೇಜ್ ಕಳುಹಿಸಬಹುದಾಗಿದೆ. ಅಂದಹಾಗೇ ‘ರುದ್ರಪ್ರಯಾಗ’ ಸಿನಿಮಾದ ಮುಖ್ಯ ಪಾತ್ರದಲ್ಲಿ ಅನಂತ್ ನಾಗ್ ಅವರು ನಟಿಸುವುದು ಖಚಿತವಾಗಿದ್ದು, ನಾಯಕಿಯಾಗಿ ಶ್ರದ್ದಾ ಶ್ರೀನಾಥ್ ಕಾಣಿಸಿಕೊಳ್ಳಲಿದ್ದಾರೆ. ಇಂತಹ ದೊಡ್ಡ ಸಿನಿಮಾದಲ್ಲಿ ನಟಿಸಲು ನಿಮಗೂ ಅವಕಾಶವಿದ್ದು, ಅದರಲ್ಲಿ ಉತ್ತರ ಕರ್ನಾಟಕದ ಜನರಿಗೆ ಅವಕಾಶ ವಿದ್ದು ಕೂಡಲೇ ನಿಮ್ಮ ವಿವರವನ್ನು ಕಳುಹಿಸಿ.