ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಮುನ್ನ ಎಚ್ಚರ; ಮಿಂಟೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ 24 ಜನರ ಪೈಕಿ ಕಣ್ಣುಕಳೆದುಕೊಂಡ 19 ಜನರು..

0
226

ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ದೊಡ್ಡ ಅವಘಡ ನಡೆದಿರುವುದು ಬೆಳಕಿಗೆ ಬಂದಿದ್ದು, ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಂದಿ ಈಗ ಕಣ್ಣು ಕಳೆದುಕೊಳ್ಳವ ಆತಂಕದಲ್ಲಿದ್ದಾರೆ. ಚಿಕಿತ್ಸೆಗೆ ಒಳಗಾದ 24 ಜನರಲ್ಲಿ 19 ಜನರಿಗೆ ಕಣ್ಣೆ ಕಾಣುತ್ತಿಲ್ಲ, ಕಣ್ಣಿಗೆ ಪೊರೆ ಉಂಟಾಗಿ ದೃಷ್ಟಿಮಂದವಾಗಿದ್ದ ರೋಗಿಗಳು ಸ್ಪಷ್ಟದೃಷ್ಟಿಯ ಆಸೆಯಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆದರೆ, ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದಾಗಿ ಶಾಶ್ವತವಾಗಿ ಅಂಧರಾಗಿದ್ದು, ಅಂಧತ್ವ ನಿವಾರಣೆಯಾಗುವ ಭರವಸೆ ಇಲ್ಲದೆ ನರಳಾಡುತ್ತಿದ್ದಾರೆ.

Also read: ಮೊಬೈಲ್, ಕಂಪ್ಯೂಟರ್ ಬಳಕೆಯಿಂದ ನಿಮ್ಮ ಕಣ್ಣುಗಳು ಆಯಾಸಗೊಳ್ಳುತ್ತಿವೆ, ಮುಂದೆ ಆಗುವ ಅಪಾಯವನ್ನು ತಡೆಯಲು ಈ ವಿಧಾನಗಳನ್ನು ಮಾಡಿ..

ಏನಿದು ಘಟನೆ?

ರಾಜ್ಯದಲ್ಲೇ ಕಣ್ಣಿನ ಚಿಕಿತ್ಸೆಗೆ ಹೆಸರುವಾಸಿಯಾಗಿರುವ ಸರ್ಕಾರಿ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಜು.9ರಂದು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾದ 24 ಮಂದಿ ಪೈಕಿ ಬರೋಬ್ಬರಿ 19 ಮಂದಿಗೆ ಕಣ್ಣೆ ಕಾಣುತ್ತಿಲ್ಲ, ಶಸ್ತ್ರಚಿಕಿತ್ಸೆಗೆ ಒಳಗಾಗಿ ಆರು ದಿನ ಕಳೆದರೂ 19 ಮಂದಿಗೆ ದೃಷ್ಟಿಬಂದಿಲ್ಲ. ಅಲ್ಲದೆ, ಅವರಿಗೆ ದೃಷ್ಟಿಬರುವ ಬಗ್ಗೆ ಆಸ್ಪತ್ರೆಯು ಭರವಸೆಯನ್ನೂ ನೀಡಿಲ್ಲ. ಇದರಿಂದ ಅಲ್ಪ ಕಾಣುತ್ತಿದ್ದ ಕಣ್ಣು ಶಾಶ್ವತವಾಗಿ ಮುಚ್ಚಿ ಹೋಗಿವೆ. ಇವರೆಲ್ಲರಿಗೂ ಜು.9ರಂದು ಶಸ್ತ್ರಚಿಕಿತ್ಸೆ ಮಾಡಲಾಗಿತ್ತು, ಆದರೆ 24 ಮಂದಿಗೂ ಶಸ್ತ್ರಚಿಕಿತ್ಸೆ ವೇಳೆ ವೈದ್ಯರಿಂದ ಉಂಟಾಗಿರುವ ಲೋಪದಿಂದಾಗಿ ತೀವ್ರ ಕಣ್ಣಿನ ಸಮಸ್ಯೆ ಉಂಟಾಗಿದೆ.

Also read: ಮಲಿನವಾದ ವಾತವರಣದಿಂದ ನಿಮ್ಮ ಕಣ್ಣುಗಳ ಹಾಳಾಗುತ್ತಿವೆ; ಕೂಡಲೇ ಜಾಗೃತಗೊಂಡು ಈ ರೀತಿಯಲ್ಲಿ ಆರೈಕೆ ಮಾಡಿ ನಿಮ್ಮ ಕಣ್ಣುಗಳಿಗೆ ರಕ್ಷಣೆ ನೀಡಿ..

ಕಳೆದ ಆರು ದಿನಗಳಿಂದ ಶಸ್ತ್ರಚಿಕಿತ್ಸೆಯಿಂದ ಉಂಟಾಗಿರುವ ಸಮಸ್ಯೆ ನಿವಾರಿಸಲು ಆಸ್ಪತ್ರೆ ವೈದ್ಯರು ತೀವ್ರ ಕಸರತ್ತು ನಡೆಸುತ್ತಿದ್ದು, ಇದರ ಪರಿಣಾಮ ಈವರೆಗೆ ಐದು ಮಂದಿಗೆ ಮಾತ್ರ ಕಣ್ಣಿನ ದೃಷ್ಟಿಬಂದಿದೆ. ಡ್ರಗ್ಸ್‌ ರಿಯಾಕ್ಷನ್‌ನಿಂದ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ. ಅವರಿಗೆ ದೃಷ್ಟಿಮರುಕಳಿಸುವಂತೆ ಮಾಡಲು ಪ್ರಯತ್ನಿಸುತ್ತಿದ್ದು, ದೃಷ್ಟಿಬರುವ ಬಗ್ಗೆ ಯಾವುದೇ ಭರವಸೆಯನ್ನೂ ಆಸ್ಪತ್ರೆ ವೈದ್ಯರು ನೀಡದಿರುವುದು ರೋಗಿಗಳಿಗೆ ತೀವ್ರ ಆತಂಕ ಸೃಷ್ಟಿಮಾಡಿದೆ. ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡ, ಶಸ್ತ್ರಚಿಕಿತ್ಸೆ ನಡೆಯುವಾಗ ಆಸ್ಪತ್ರೆಯ ಉಸ್ತುವಾರಿ ಹೊತ್ತಿದ್ದವರ ವಿರುದ್ಧ ಪೊಲೀಸ್‌ ದೂರು ನೀಡಲು ರೋಗಿಗಳ ಸಂಬಂಧಿಕರು ನಿರ್ಧರಿಸಿದ್ದಾರೆ. ಅಲ್ಲದೆ, ಇಂಡಿಯನ್‌ ಮೆಡಿಕಲ್‌ ಕೌನ್ಸಿಲ್‌, ಜಿಲ್ಲಾ ಮುಖ್ಯ ಆರೋಗ್ಯಾಧಿಕಾರಿ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಲಿಖಿತ ದೂರು ನೀಡಲು ಮುಂದಾಗಿದ್ದು, ಆಸ್ಪತ್ರೆ ಎದುರು ಬೃಹತ್‌ ಪ್ರತಿಭಟನೆಗೆ ನಿರ್ಧರಿಸಲಾಗಿದೆ.

ಈ ಘಟನೆಗೆ ಕಾರಣವೇನು?

Also read: ಸರಿಗಮಪದ ಋತ್ವಿಕ್ ಅವರ ಸಂಗೀತಕ್ಕೆ ಮನಸೋತು ಕಣ್ಣು ದಾನಮಾಡುತ್ತಿರುವ ವೃದ್ದನನ್ನು ನೋಡಿದರೆ ತಿಳಿಯುತ್ತೆ. ಸಂಗಿತದ ಶಕ್ತಿಯೆಂತದು ಅಂತ…

ಶಸ್ತ್ರಚಿಕಿತ್ಸೆ ವೇಳೆ ಉಂಟಾದ ಅಪಾಯಕ್ಕೆ ಸೋಂಕು ಕಾರಣವೇ ಅಥವಾ ಡ್ರಗ್‌ ರಿಯಾಕ್ಷನ್‌ ಕಾರಣವೇ ಎಂಬುದನ್ನೂ ಈವರೆಗೆ ಆಸ್ಪತ್ರೆಯವರು ಸ್ಪಷ್ಟಪಡಿಸಿಲ್ಲ. ಈ ಪೈಕಿ ಡ್ರಗ್‌ ರಿಯಾಕ್ಷನ್‌ಗೆ ಚಿಕಿತ್ಸೆ ಮುಂದುವರಿಸಿದ್ದು, ಎಂಟು ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಭಾನುವಾರ ಬಿಡುಗಡೆಯಾಗಿದ್ದಾರೆ. ಈ ಪೈಕಿ ಐದು ಮಂದಿಗೆ ದೃಷ್ಟಿಸರಿಯಾಗಿ ಕಾಣುತ್ತಿದ್ದು, ಉಳಿದವರಲ್ಲಿ ಇನ್ನೂ ಚೇತರಿಕೆ ಕಂಡು ಬಂದಿಲ್ಲ. ಉಳಿದಂತೆ ಹದಿನಾರು ಮಂದಿಯ ಕಣ್ಣಿನ ಸ್ಥಿತಿ ಗಂಭೀರವಾಗಿದೆ. ಯಾರಿಗೂ ದೃಷ್ಟಿಕಾಣುತ್ತಿಲ್ಲ. ದೃಷ್ಟಿಮರುಕಳಿಸಲು ವೈದ್ಯರು ಚಿಕಿತ್ಸೆ ಮುಂದುವರಿಸಿದ್ದು, ಎಂಟು ಜನ ಮಾತ್ರ ಚಿಕಿತ್ಸೆಗೆ ಸ್ವಲ್ಪ ಮಟ್ಟಿಗೆ ಸ್ಪಂದಿಸುತ್ತಿದ್ದಾರೆ. ಉಳಿದ ಎಂಟು ಮಂದಿ ಸ್ಥಿತಿ ಗಂಭೀರವಾಗಿದೆ. ಕಣ್ಣಿನ ದೃಷ್ಟಿಬರುವುದೂ ಸಹ ಅನುಮಾನ ಎಂದು ಹೇಳಲಾಗುತ್ತಿದೆ.