ದಶಕಗಳ ಕಾಲ ವಿವಾದದಲ್ಲಿರುವ ಕಾವೇರಿ ನದಿನೀರಿನ ಹಂಚಿಕೆಗೆ ಇಂದು ಅಂತಿಮ ತೀರ್ಪು!!

0
389

Kannada News | Karnataka News

ಇಂದು ದಶಕಗಳ ಕಾಲ ಎರಡು ರಾಜ್ಯಗಳ ನಡುವೆ ಕೆಂಡದಂತಿದ್ದ ಕಾವೇರಿ ನದಿ ನೀರು ಹಂಚಿಕೆ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಹೊರಬೀಳಲಿದೆ. ಈ ತೀರ್ಪು ಕರ್ನಾಟಕ, ತಮಿಳುನಾಡು ರಾಜ್ಯಗಳಿಗೆ ಹೆಚ್ಚಿನ ಮಹತ್ವದ್ದಾಗಿದೆ. ಇನ್ನು ಈ ತೀರ್ಪಿನ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಇನ್ನು ಕೆಲವೇ ಕ್ಷಣಗಳಲ್ಲಿ ಸುಪ್ರೀಂ ಕೋಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎಎಂ ಖಾನ್ವೀಲ್ಕರ್ ಮತ್ತು ಅಮಿತಾವ್ ರಾಯ್ ಒಳಗೊಂಡ ತ್ರಿಸದಸ್ಯ ಪೀಠ ಎರಡು ರಾಜ್ಯಗಳ ನಡುವೆ ವಿವಾದದ ಕೇಂದ್ರ ಬಿಂದುವಾಗಿರುವ ಕಾವೇರಿ ನದಿಯ ನೀರು ಹಂಚಿಕೆ ಕುರಿತು ತೀರ್ಪು ಹೊರಹಾಕಲಿದೆ.

ಇನ್ನು ಸುಪ್ರೀಂ ಕೋಟ್ ಮುಖ್ಯ ನ್ಯಾಯಮೂರ್ತಿ ಅಮಿತಾವ್ ರಾಯ್ ಇದೇ ಮಾರ್ಚ್ 1 ಕ್ಕೆ ನಿವೃತ್ತಿಯಾಗುತ್ತಿದ್ದು, ಫೆಬ್ರವರಿ 26 ರಿಂದ ಮಾರ್ಚ್ 3 ರವರೆಗೆ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‍ಗೆ ರಜೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಇಂದೇ ತೀರ್ಪು ಬರಲಿದೆ ಎಂದು ನಿರೀಕ್ಷಿಸಲಾಗಿದೆ. 2007 ರ ಕಾವೇರಿ ನ್ಯಾಯಾಧಿಕರಣದ ಹೈ-ತೀರ್ಪು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಮೇಲ್ಮನವಿ ಸಲ್ಲಿಸಿದ್ದವು.

ತ್ರಿಸದಸ್ಯ ಪೀಠ ಸೆಪ್ಟೆಂಬರ್ 20 ರಂದು ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಅರ್ಜಿ ವಿಚಾರಣೆಯನ್ನು ಅಂತಿಮಗೊಳಿಸಿ, ತೀರ್ಪನ್ನು ಕಾಯ್ದಿರಿಸಿತ್ತು. ಇಂದು ನೀಡುವ ತೀರ್ಪಿನಿಂದ ಎರಡು ರಾಜ್ಯಗಳಲ್ಲಿ ಕೋಲಾಹಲ ಆಗುವ ನಿರೀಕ್ಷೆ ತಳ್ಳಿಹಾಕುವಂತಿಲ್ಲ. ಅದಕ್ಕೆ ಎರಡು ರಾಜ್ಯಗಳ ಸರ್ಕಾರವು ಜನರ ಸುರಕ್ಷತೆಗಾಗಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಒದಗಿಸಿದೆ.

ಕರ್ನಾಟಕ, ಬೆಂಗಳೂರಿಗೆ ಕುಡಿಯುವ ನೀರನ್ನು ಒದಗಿಸಬೇಕು, ತಮಿಳುನಾಡಿನ ಕಾವೇರಿ ಕೊಳ್ಳದ ಭಾಗದಲ್ಲಿ ದೊರೆಯುವ 20 ಟಿಎಂಸಿ ಅಂತರ್ಜಲವನ್ನು ಕೋರ್ಟ್ ಪರಿಗಣಿಸಬೇಕು. ಕೃಷಿ ನೀರಾವರಿ ಭೂಮಿ ಹೆಚ್ವಿಸಲು, ಮೇಕೆದಾಟು ಡ್ಯಾಂ ಕಟ್ಟಲು ಅವಕಾಶ ಕೊಡಬೇಕು ಮತ್ತು ಮಿಳುನಾಡಿಗೆ ಹರಿಸುವ 192 ಟಿಎಂಸಿ ನೀರನ್ನು 102 ಟಿಎಂಸಿಗೆ ಇಳಿಸಬೇಕು ಎಂದು ರಾಜ್ಯದ ಪರವಾಗಿ ವಾದಿಸಿದ್ದ ವಕೀಲರು ಹೇಳಿದ್ದರು.

ಇನ್ನು ತಮಿಳುನಾಡು ಯಾವುದೇ ಕಾರಣಕ್ಕೂ ಮೇಕೆದಾಟು ಡ್ಯಾಂ ಕಟ್ಟಲು ಅವಕಾಶ ನೀಡಬಾರದು, 20 ಟಿಎಂಸಿ ಅಂತರ್ಜಲವನ್ನು ಕೋರ್ಟ್ ಪರಿಗಣಿಸಬಾರದು. ಕೃಷಿ ನೀರಾವರಿ ಭೂಮಿ ಹೆಚ್ಚಿಸಕೂಡದು. ನಮ್ಮ ಬೆಳೆಗಳಿಗೆ 192 ಟಿಎಂಸಿ ನೀರು ಅವಶ್ಯಕತೆಯಿದೆ ಎಂದಿದ್ದರು.

Also read: ಕನ್ನಡಿಗರ ಭಾವನೆಗಳ ಜೊತೆ ಆಟವಾಡುತಿದ್ಯಾ ರಾಜ್ಯ ಸರ್ಕಾರ?? ಅಧಿಕೃತ ಧ್ವಜ ಎಂದು ಹಳದಿ ಕೆಂಪು ಧ್ವಜವನ್ನು ಬದಲಾಯಿಸಿದ್ದೇಕೆ??