ತಮಿಳು ನಾಡಿಗೆ ನೀರು ಹರಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ಯಾ??

0
644

ಸೋಮವಾರ ನಡೆದ ನಾಟಕೀಯ ಬೆಳವಣಿಗೆಗಳು ಅಚ್ಚರಿ ಮೂಡಿಸಿದರೂ ಕರ್ನಾಟಕ ಬೀಸೊ ದೊಣ್ಣೆ ಯಿಂದ ಪಾರಾಗಿದೆ.
ಕಳೆದ ಒಂದು ತಿಂಗಳಿಂದ ಕಾವೇರಿ ವಿವಾದ ಭುಗಿಲೆದ್ದಿದ್ದರೂ ಮೌನಕ್ಕೆ ಶರಣಾಗಿದ್ದ ಕೇಂದ್ರ ಸರಕಾರ ಸೋಮವಾರ ಬೆಳಗ್ಗೆ ದಿಢೀರನೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಧ್ಯಕ್ಕೆ ಅಗತ್ಯವಿಲ್ಲ ಮತ್ತು ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಸಂಬಂಧ ನೀಡಿರುವ ನೀಡಿರುವ ತೀರ್ಪನ್ನು ಮರು ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿತು.
ಸೆಪ್ಟೆಂಬರ್ ೩೦ರ ವಿಚಾರಣೆ ವೇಳೆ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒಪ್ಪಿಗೆ ಸೂಚಿಸಿದ್ದ ಅಟಾರ್ನಿ ಜನರಲ್ ಮುಖೇಶ್ ರೊಹ್ಟಗಿಗೆ ಸುಪ್ರೀಂಕೊರ್ಟ್ ತರಾಟೆಗೆ ತೆಗೆದುಕೊಂಡಿತು.
ಮಂಡಳಿ ರಚನೆಗೆ ಆಗ ಒಪ್ಪಿಕೊಂಡು ಈಗ ಆಗೊಲ್ಲ ಅಂದರೆ ಹೇಗೆ ಎಂದು ಪ್ರಶ್ನಿಸಿದಾಗ ನಮ್ಮಿಂದ ತಪ್ಪಾಗಿದೆ ಕ್ಷಮಿಸಿ ಎಂದು ಅಟಾರ್ನಿ ಕೇಳಿಕೊಂಡರು.
ಈ ಹಿನ್ನೆಲೆಯಲ್ಲಿ ಮರುಪರಿಶಿಲನಾ ಅರ್ಜಿಯನ್ನು ಅಂಗೀಕರಿಸಿದ ಸುಪ್ರೀಂಕೊರ್ಟ್, ಮಂಗಳವಾರ ಮಧ್ಯಾಹ್ನ ೨ ಗಂಟೆಗೆ ವಿಚಾರಣೆ ಮುಂದೂಡಿತು. ಕೇಂದ್ರದ ನಿಲುವಿಗೆ ಆಕ್ಷೇಪ ಸಲ್ಲಿರುವ ತಮಿಳುನಾಡು, ನಿರ್ವಹಣಾ ಮಂಡಳಿ ರಚಿಸಬೇಕು ಎಂದು ಪಟ್ಟು ಹಿಡಿದಿದೆ.
ಇದೇ ವೇಳೆ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ತಮ್ಮ ಆದೇಶವನ್ನು ಕರ್ನಾಟಕ ಪಾಲನೆ ಆಗಿದೆಯೇ ಎಂದು ಪರಿಶೀಲಿಸುವಂತೆ ಕೇಂದ್ರಕ್ಕೆ ಸೂಚಿಸಿತು.
ಅಧಿವೇಶನದಲ್ಲಿ ಗಲಿಬಿಲಿ
ಕೇಂದ್ರ ಸರಕಾರದ ಈ ನಡೆ ಸೋಮವಾರ ಆರಂಭಗೊಂಡಿದ್ದ ಕರ್ನಾಟಕ ವಿಧಾನಸಭೆಯ ಉಭಯ ಸದನಗಳ ಅಧಿವೇಶನದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ನೀರು ಬಿಡದಿದ್ದರೆ ವಾದಿಸಲು ಕಷ್ಟ ಎಂದು ಕರ್ನಾಟಕದ ಪರ ವಾದ ಮಂಡಿಸಲು ಬಯಸಿದ್ದ ಹೊಸ ವಕೀಲರ ತಂಡ ಅಭಿಪ್ರಾಯಪಟ್ಟಿತ್ತು. ಅಲ್ಲದೇ ಕೇಂದ್ರ ಕರ್ನಾಟಕ ಪರ ವಾಲಿದ್ದರೂ ನೀರು ಬಿಡಿಸಬೇಕಾದ ಒತ್ತಡಕ್ಕೆ ಸಿಲುಕಿತ್ತು. ಈ ಹಿನ್ನೆಲೆಯಲ್ಲಿ ಅಧಿವೇಶನ ಕೆಲಕಾಲ ಮುಂಡೂಡಿಕೆಯಾದಾಗ ಮುಖ್ಯಮಂತ್ರಿ ಸಿದ್ಧರಾಮಯ್ಯ ನೀರು ಬಿಡದಿದ್ದರೆ ಕರ್ನಾಟಕಕ್ಕೆ ಭಾರೀ ಹಿನ್ನಡೆಗೆ ಸಿಲುಕಲಿದೆ. ಆದ್ದರಿಂದ ನೀರು ಬಿಡಲು ಸದನ ನಿರ್ಣಯಿಸಬೇಕು ಎಂದು ಪ್ರತಿಪಕ್ಷಗಳಲ್ಲಿ ಮನವಿ ಮಾಡಿದರು. ನೀರು ಬಿಡುವ ನಿರ್ಧಾರ ಕೈಗೊಂಡರೆ ಸದನ ಬಹಿಷ್ಕರಿಸುವುದಾಗಿ ಬಿಜೆಪಿ ಮತ್ತು ಜೆಡಿಎಸ್ ಬೆದರಿಕೆ ಒಡ್ಡಿದವು.
ಈ ವಿಷಯದಲ್ಲಿ ಕೆಲವು ಸಮಯ ವಾದ ವಿವಾದಗಳು ನಡೆದವು. ಅಂತಿಮವಾಗಿ ಬೀಸೊ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ನೀರು ಬಿಡಲು ಸಮ್ಮತಿಸಲಾಯಿತು.