3185 ಕೋಟಿ ಕಪ್ಪುಹಣ ವಶ: ಇದರಲ್ಲಿ 86 ಕೋಟಿ ಹೊಸ 2000 ನೋಟುಗಳು!

0
758

3185 ಕೋಟಿ ಕಪ್ಪುಹಣ ವಶ: ಇದರಲ್ಲಿ 86 ಕೋಟಿ ಹೊಸ 2000 ನೋಟುಗಳು!

ನವದೆಹಲಿ: ಹಳೇ ನೋಟುಗಳ ನಿಷೇಧದ ನಂತರ ದೇಶಾದ್ಯಂತ ದಾಳಿ ನಡೆಸುತ್ತಿರುವ ತೆರಿಗೆ ಇಲಾಖೆ ಇದುವರೆಗೂ ಲೆಕ್ಕಕ್ಕೆ ಸಿಗದ 3185 ಕೋಟಿ ರೂ. ಪತ್ತೆಹಚ್ಚಿದ್ದು, ಇದರಲ್ಲಿ 86 ಕೋಟಿ ಮೊತ್ತ ಕೇವಲ 2000 ನೋಟುಗಳೇ ಆಗಿವೆ.

ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ಈ ವಿವರ ನೀಡಿದ್ದು, ನ.8ರಂದು ನೋಟು ರದ್ದು ಮಾಡಿದ ನಂತರ ಇದುವರೆಗೂ 677 ದಾಳಿಗಳನ್ನು ನಡೆಸಲಾಗಿದೆ. ಇನ್ನು ಕಪ್ಪುಹಣ ಇರುವ ಬಗ್ಗೆ ತನಿಖೆ ಹಾಗೂ ಸಮೀಕ್ಷೆ ಎರಡೂ ನಡೆಯುತ್ತಿದೆ, ಈಗಾಗಲೇ 3100 ನೋಟೀಸ್‍ ನೀಡಲಾಗಿದ್ದು, ಹವಾಲಾ ಸೇರಿದಂತೆ ನಾನಾ ಪ್ರಕರಣಗಳನ್ನು ಬೆಳಕಿಗೆ ತರುತ್ತಿದೆ.

ದಾಳಿ ವೇಳೆ 428 ಕೋಟಿ ಬೆಲೆಬಾಳುವ ಆಭರಣಗಳು ಹಾಗೂ ಇತರೆ ಮೌಲ್ಯದ ನೋಟುಗಳನ್ನು ವಶಕ್ಕೆ ಪಡೆಯಲಾಗಿದ್ದು, ಡಿಸೆಂಬ್‍ 19ರವರೆಗೆ ನಡೆದ ದಾಳಿಗಳಲ್ಲಿ 3185 ಕೋಟಿ ವಶಪಡಿಸಿಕೊಂಡಿದ್ದು, ಇದರಲ್ಲಿ 86 ಕೋಟಿ ಹೊಸ 2000 ನೋಟುಗಳಾಗಿವೆ. ಹೀಗೆ ವಶಪಡಿಸಿಕೊಂಡ ಹೊಸ ನೋಟುಗಳನ್ನು ಮರುಚಲಾವಣೆಗೆ ಬಿಡಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.

ಒಟ್ಟು ಪ್ರಕರಣಗಳಲ್ಲಿ ಸುಮಾರು 220 ಪ್ರಕರಣಗಳನ್ನು ಸಿಬಿಐ, ಜಾರಿ ನಿರ್ದೇಶನಾಲಯ ಮುಂತಾದ ಸೋದರ ಸಂಸ್ಥೆಗಳು ತನಿಖೆ ಕೈಗೆತ್ತಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದರು.