CCTV ಹೋಯಿತು SUSUTV ಬಂತು ಡುಂ ಡುಂ…!!

0
2412

CCTV ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಕಂಡ ಕಂಡಲ್ಲಿ CCTV ಕಾಣ ಸಿಗುತ್ತವೆ. ಆಭರಣ ಮಳಿಗೆಗಳಲ್ಲಿ ಇವುಗಳ ಪಾತ್ರ ಮಹತ್ವದ್ದಾಗಿದೆ. ಕಳ್ಳರಿಗಂತೂ CCTV ದೊಡ್ಡ ತಲೆನೋವಾಗಿ ಪರಿಣಮಿಸಿರುವುದು ಒಳ್ಳೆಯ ಬೆಳವಣಿಗೆಯೇ ಸರಿ. ಆದರೆ ಈಗ ವಿದ್ಯಾರ್ಥಿಗಳಿಗೂ ಈ ಟಿವಿಗಳು ನುಂಗಲಾರದ ತುಪ್ಪ..!!

ಕಾಲೇಜುಗಳಲ್ಲಿ ಹೆಚ್ಚು ಎಂದರೆ ಎಲ್ಲಿ CCTV ಅಳವಡಿಸಬಹುದು!! ಕ್ಯಾಂಪಸ್ನಲ್ಲಿ, ಕಾರಿಡಾರ್ ನಲ್ಲಿ, ಅಥವಾ ಕ್ಲಾಸ್ ರೂಮ್ ನಲ್ಲಿ ಅಳವಡಿಸಬಹುದು, ಆದರೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಗಂಡು ಮಕ್ಕಳ ಶೌಚಾಲಯದಲ್ಲೂ CCTV ಬಲ ಪ್ರಯೋಗ ಮಾಡಿದೆ… ಹೌದು, Teachers Academy PU College ಹೀಗೊಂದು ಸಾಹಸಕ್ಕೆ ಕೈ ಹಾಕಿದೆ, ಪಾಪ, ಬಹಳ ಹುಡುಗರು ಶೌಚ ಗೃಹದಲ್ಲಿ ಮುಜುಗರದಿಂದಲೇ ತಮ್ಮ ಕೆಲಸ ಮುಗಿಸಿ ಹೊರ ಬರುವಂತಹ ಪರಿಸ್ಥಿತಿ ಎದುರಾಗಿದೆ. ಎಷ್ಟೋ ಮಂದಿ ಹೋಗಬೇಕೆನ್ನಸಿದರು CCTV ಗೆ ಹೆದರಿ ಜಲ ಬಾದೆಯನ್ನು ಜೀರ್ಣಿಸಿಕೊಳ್ಳಲಾಗದೆ ವ್ಯಥೆ ಪಡುವಂತಾಗಿದೆ.

© bangaloremirror
© bangaloremirror

ಆದರೆ ಕಾಲೇಜು ಆಡಳಿತ ಮಂಡಳಿ ಕೊಡುವ ಕಾರಣವೇ ಬೇರೆ, ಹುಡುಗರ ಹಾವಳಿಯಿಂದ ವರ್ಷಕ್ಕೆ 3 ರಿಂದ 4 ಲಕ್ಷದಷ್ಟು ಬೆಲೆಬಾಳುವ commode ಗಳು ಹಾಳಾಗುತ್ತಿದ್ದು, ಇದರ ಬಗ್ಗೆ ಕಣ್ಗಾವಲು ಇರಿಸಲು CCTV ಅಳವಡಿಸಿದ್ದೇವೆ ಎನ್ನುತ್ತಾರೆ. ಆದರೆ ಉತ್ತರ ಭಾರತದ ಹುಡುಗರು ಹೆಚ್ಚಾಗಿ ಗಾಂಜಾ ಸೇದುವ ಹಿನ್ನೆಲೆಯವರಾಗಿದ್ದು, ಈ ದುಶ್ಚಟಕ್ಕಾಗಿ ಶೌಚಾಲಯ ಬಳಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಅದೆಲ್ಲ ಸರಿ ಈ ಶೌಚಾಲಯದ CC ಕ್ಯಾಮರ ದೃಶ್ಯಗಳನ್ನು ನೋಡೋ ಧೀರನಿಗೆ ದೇವ್ರು ಎರಡು ಗುಂಡಿಗೆ ಕೊಡಲಿ…!! ಎನ್ನುವುದೇ ನಮ್ಮೆಲ್ಲರ ಪ್ರಾರ್ತನೆಯಾಗಿದೆ.