ಭಾರತ ಪಾಕ್ ಮೇಲೆ ದಾಳಿ ಮಾಡಿದರೆ ದೇಶದಲ್ಲಿ ಹಿಂದೂ-ಮುಸ್ಲಿಂ ಸಂಘರ್ಷಕ್ಕೆ ದಾರಿ; ದೇಶ ವಿರೋಧಿಗಳ ಪರ ಬ್ಯಾಟಿಂಗ್ ಮಾಡುತ್ತಿದ್ದಾರ ಮುಖ್ಯಮಂತ್ರಿ ಎಚ್.ಡಿ.ಕೆ??

0
376

ಪಾಕ್ ಮೇಲೆ ಭಾರತ ದಾಳಿ ಮಾಡಿ ಸಂಭ್ರಮ ಆಚರಿಸಿಸುತ್ತಿರುವುದು ಬಿಜೆಪಿಯರು ತಾವೇ ಯುದ್ದ ಗೆದ್ದಂತೆ ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಇದರಿಂದ ಭಾರತದಲ್ಲಿ ಎರಡು ಸಮುದಾಯಗಳ ಮದ್ಯ ಸಂಘರ್ಷಕ್ಕೆ ದಾರಿ ಮಾಡುತ್ತಿದೆ. ಮತ್ತು ದೇಶದಲ್ಲಿ ನಡೆಯುತ್ತಿರುವ ಯುದ್ದವು ರಾಜಕೀಯ ಲಾಭಕ್ಕಾಗಿ ಎಂದು ಹೇಳಿದ ಕುಮಾರಸ್ವಾಮಿ ಬಿಜೆಪಿ ಪಕ್ಷದ ಒಂದು ಗಿಮಿಕ್ ಈ ಪಾಕ್ ಭಾರತದ ಘರ್ಷಣೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಹಲವರು ಬಿಜೆಪಿ ನಾಯಕರು ಟ್ವೀಟ್ ಮಾಡಿ ಬಾರಿ ವಿರೋಧ ವ್ಯಕ್ತಪಡಿಸಿದ್ದಾರೆ.

Also read: ಬೆಂಗಳೂರಿನ ನಿವಾಸಿಗಳಿಗೆ ಸಿಹಿ ಸುದ್ದಿ; ಬಡವರಿಗೆ ಸೂರು ಕಲ್ಪಿಸಲು ಯೋಜನೆಯಲ್ಲಿ 1600 ಎಕರೆ ಭೂಮಿ; 1 ಲಕ್ಷ ಗುಂಪು ಮನೆಗಳ ನಿರ್ಮಾಣ..

ಹೌದು ಫೆಬ್ರವರಿ 28 ರಂದು, ಬಿಜೆಪಿಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರು ಬಾಲಾಕೋಟ -ನಲ್ಲಿ ನಡೆದ ಉಗ್ರರ ಹತ್ಯೆವು ಬಿಜೆಪಿಗೆ ಕರ್ನಾಟಕದಲ್ಲಿ 22 ಸ್ಥಾನಗಳನ್ನು ತಂದು ಕೊಡುತ್ತದೆ ಎಂದು ಹೇಳಿದ್ದರು ಇದ್ದಕ್ಕೆ ಉತ್ತರವಾಗಿ ಶುಕ್ರವಾರ, ಮೈಸೂರಿನಲ್ಲಿ ನಡೆದ ಒಂದು ಪಕ್ಷದ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಭಾರತದಲ್ಲಿ ಬಾಂಬ್ ಸ್ಫೋಟಿಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಬೆಂಕಿಗೆ ಇಂಧನವನ್ನು ಸೇರಿಸುತ್ತಿದ್ದಾರೆ ಮತ್ತು ದೇಶದೊಳಗಿನ ಎರಡು ಸಮುದಾಯಗಳನ್ನು ದೂರ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಪಾಕಿಸ್ತಾನದ ಭಯೋತ್ಪಾದನೆಯನ್ನು ಇಟ್ಟುಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಮಿಂಚುತ್ತಿರುವ ಬಿಜೆಪಿ ನಾಯಕರು ಬೀದಿಗಳಲ್ಲಿ ನಿಂತು ಚಾ ವಿತರಿಸಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿರುವುದು ಕೋಮು ಉದ್ವಿಗ್ನತೆಗೆ ದಾರಿ ಮಾಡಿಕೊಡುತ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ರಾಜಕೀಯ ಲಾಭಕ್ಕಾಗಿ ಯುದ್ದ;

ಭಾರತ ಪಾಕ್ ನಡುವಿನ ಗಲಭೆ ಸಂಪೂರ್ಣವಾಗಿ ಬಿಜೆಪಿ ಪಕ್ಷದ ಲಾಭವಾಗಿದೆ. ಈ ಯುದ್ದದಲ್ಲಿ ಅಮಾಯಕ ಜೀವಗಳು ಬಲಿಯಾಗುತ್ತಿವೆ. ಇದಕ್ಕೆ ಬಿಜೆಪಿಯೇ ಕಾರಣ ಎಂಬುದಾಗಿಯೂ ಪರೋಕ್ಷವಾಗಿ ಹೇಳಿರುವ ಸಿಎಂ, ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಎರಡು ಸಮಾಜದ ಮಧ್ಯೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟು, ಅಮಾಯಕರನ್ನು ಬಲಿ ಪಡೆಯುವ ಕೆಲಸ ಮಾಡಲಾಗುತ್ತಿದೆ ಎಂದು ಕುಮಾರಸ್ವಾಮಿ ಮಾತನಾಡಿದ್ದಾರೆ. ಆದರೆ ಇದಕ್ಕೆ ದೇಶದೆಲ್ಲದೆ ವ್ಯಾಪಕ ವಿರೋಧ ಕೇಳಿ ಬಂದು ಒಂದು ದೇಶದ ಅಳುವು ಉಳಿವಿನಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ರಾಜಕೀಯಕ್ಕೆ ಬಳಸಿಕೊಂಡು ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿರೋಧ

ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಕುಮಾರಸ್ವಾಮಿ ಅವರ ಹೇಳಿಕೆಯನ್ನು ವಿರೋಧಿಸಿದ್ದಾರೆ. ಮುಸ್ಲಿಂ, ಕ್ರಿಶ್ಚಿಯನ್ನರು, ಹಿಂದೂಗಳು ಮೂವರು ಒಟ್ಟಿಗೆ ನಿನ್ನೆ ಹಾಗೂ ಪಾಕ್‌ ಉಗ್ರರ ಮೇಲೆ ದಾಳಿ ನಡೆದಾಗ ಸಂಭ್ರಮಿಸಿದ್ದಾರೆ. ಆದರೆ ಸಿಎಂ ಅವರಿಗೆ ಇದು ಕೋಮು ಸಂಘರ್ಷಕ್ಕೆ ದಾರಿ ಎಂಬಂತೆ ಕಂಡಿದೆ ಇವರು ಮಾಡುತ್ತಿರುವ ಕೆಲಸವೂ ರಾಜಕೀಯ ಅಲ್ಲವೇ? ಜನರಿಗೆ ಇಲ್ಲ ಸಲ್ಲದ ಮಾತುಗಳಿಂದ ಮರಳು ಮಾಡುತ್ತಿರುವ ಇವರು ಮೈತ್ರಿ ಸರ್ಕಾರದ ಕೂಸು ಎನ್ನುವುದು ಮರೆತು ಈ ಮಾತುಗಳನ್ನು ಆಡುತ್ತಿದ್ದಾರೆ ಎಂದು ಟಿಕೆಗಳು ಕೇಳಿ ಬರುತ್ತಿವೆ.

ಶಾಸಕ ಸಿ.ಟಿ. ರವಿ ಟ್ವೀಟ್;

ಕುಮಾರಸ್ವಾಮಿಯವರ ಮಾತಿಗೆ ಟ್ವೀಟ್ ಮಾಡಿದ ಬಿಜಿಯವರು ದೊಡ್ಡ ಮಟ್ಟದ ವಿರೋಧವನ್ನು ಹೊರಹಾಕಿದ್ದಾರೆ. ಅದರಲ್ಲಿ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಕೂಡ ಪ್ರತಿಕ್ರಿಯೆ ನೀಡಿದ್ದು, ಎರಡು ಸಮುದಾಯಗಳ ಮದ್ಯ ಬಿರುಕು ಹುಟ್ಟಿಸುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ದೇಶವನ್ನು ಉಗ್ರರು ಪ್ರವೆಶಿದಾಗ ಅದನ್ನು ತಡೆದರೆ ಅದು ರಾಜಕೀಯ ಲಾಭವೇ? ಎರಡು ಸಮುದಾಯಗಳ ನಡುವೆ ಗಲಬೆ ಎಂದು ಪ್ರಶ್ನಿಸಿದ್ದಾರೆ.

ಶೋಭಾ ಕರಂದ್ಲಾಜೆ ಟ್ವೀಟ್

ಕುಮಾರಸ್ವಾಮಿ ಅವರ ಹೇಳಿಕೆಯನ್ನು ಶೋಭಾ ಕರಂದ್ಲಾಜೆ ಅವರು ತೀವ್ರವಾಗಿ ಖಂಡಿಸಿದ್ದು, ಉಗ್ರರ ವಿರುದ್ಧ ದಾಳಿಗೆ ಭಾರತೀಯರು ಸಿಹಿ ಹಂಚುವುದು ಎರಡು ಕೋಮುಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇದು ಮತ ಬ್ಯಾಂಕ್‌ ರಾಜಕೀಯ. ಮೋದಿ ವಿರುದ್ಧ ದ್ವೇಷದಿಂದಲೇ ಇವರು ಪಾಕಿಸ್ತಾನವನ್ನು ಬೆಂಬಲಿಸುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಟ್ವಿಟ್ಟರ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸುರೇಶ್‌ ಕುಮಾರ್ ಫೇಸ್‌ಬುಕ್ ಪೋಸ್ಟ್

ಬಿಜೆಪಿಯ ಮುಖಂಡ ಸುರೇಶ್ ಕುಮಾರ್ ಅವರು ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿ, ‘ಪುಲ್ವಾಮಾ ದಾಳಿಗೆ ಪ್ರತೀಕಾರದ ದಾಳಿ ನಡೆದಾಗ ಭಾರತ್ ಮಾತಾ ಕೀ ಜೈ ಎಂದು ಕರೆಯುವುದು ಅಪಚಾರ ಎಂದು ಸಿಎಂ ಹೇಳಿದ್ದಾರೆ. ಹೋರಾಟದ ಹಿನ್ನೆಲೆಯಿಲ್ಲದೆ ಬಂದಿರುವವರಿಂದ ಇನ್ನು ಏನು ತಾನೆ ನಿರೀಕ್ಷಿಸಲು ಸಾಧ್ಯ ಎಂದು ಸುರೇಶ್ ಕುಮಾರ್ ಅವರು ಹೇಳಿದ್ದಾರೆ.

Also read: ಭಾರತ ಗಡಿಯಲ್ಲಿ ಮತ್ತೆ ಬಾಂಬ್ ಸ್ಪೋಟ; ಉಗ್ರರ ಗುಂಡಿನ ದಾಳಿಯಲ್ಲಿ ಒಬ್ಬ ನಾಗರಿಕ ಸೇರಿದಂತೆ ನಾಲ್ವರು ಸೈನಿಕರು ಬಲಿ..