ಕೇಂದ್ರ ಸರ್ಕಾರ ಟ್ರಾಯ್‌ ಮೂಲಕ ಹೊಸ ನಿಯಮ ಜಾರಿ; ಟಿವಿ ವಿಕ್ಷಕರಿಗೆ ಬಾರಿ ದುಬಾರಿಯಾದ ಟಿವಿ ಚಾನೆಲ್-ಗಳು..

0
865

ಟಿವಿ ಪ್ರಿಯರಿಗೆ ಆಘಾತಕರ ಸುದ್ದಿ; ಬರುವ ಹೊಸ ವರ್ಷಕ್ಕೆ ಈಗಿರುವ ಕೇಬಲ್ ಹಾಗೂ ಡಿಟಿಎಚ್​ ಮಾಸಿಕ ದರ ಬದಲಾಗಲಿದೆ. ಇದರಿಂದ ಈಗಿರುವ ದರಕ್ಕಿಂತ 10 ರಷ್ಟು ಹೆಚ್ಚಾಗಲಿದ್ದು ಕಡಿಮೆ ದರದಲ್ಲಿ ಹೆಚ್ಚು ಚಾನೆಲ್-ಗಳನ್ನು ವಿಕ್ಷಿಸುವ ಆಪರ್- ಗೆ ಹುನ್ನಾರ ಹಾಕಿದ್ದು tv ಮಾಧ್ಯಮ ಪ್ರಿಯರ ಜೇಬಿಗೆ ಕತ್ತರಿ ಬಿಳ್ಳಲಿದೆ. ಇದು ಕೇಂದ್ರ ಸರಕಾರದ ಸಂಚು ಆಗಿದ್ದು, ಬಂಡವಾಳಶಾಹಿಗಳಿಗೆ ಆದ್ಯತೆ ನೀಡಿ ಜನಸಾಮಾನ್ಯರ ಮೇಲೆ ಹೊರೆ ಮಾಡುತ್ತಿದೆ ಎಂಬ ಕಾರವಾದ ಮಾತುಗಳು ಕೇಳಿ ಬರುತ್ತಿವೆ.


Also read: ವಾಹನ ಸವಾರರಿಗೆ ಸಿಹಿ ಸುದ್ದಿ; ಈ ಕಾರ್ಡ್ ಬಳಸಿದರೆ ಸಿಗುತ್ತೆ 71 ಲೀಟರ್ ಉಚಿತ ಪೆಟ್ರೋಲ್.! ಆಫರ್ ಪಡೆಯಲು ಈ ಮಾಹಿತಿ ನೋಡಿ..

ಏನಿದು ಸುದ್ದಿ?

ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ(ಟ್ರಾಯ್) ಅಧಿ ಸೂಚನೆ ಪ್ರಕಾರ ಹೊಸವರ್ಷದಿಂದ ನಿಮ್ಮ ಕೇಬಲ್ ಹಾಗೂ ಡಿಟಿಎಚ್​ ಮಾಸಿಕ ದರ ಬದಲಾಗಲಿದೆ. ಇದು​ವ​ರೆಗೂ 150 ರು.ನಿಂದ 250 ರು. ಮಾಸಿಕ ಶುಲ್ಕ ನೀಡಿ 400ರಿಂದ 500 ಚಾನಲ್‌​ಗ​ಳನ್ನು ವೀಕ್ಷಿ​ಸು​ತ್ತಿದ್ದ ಗ್ರಾಹ​ಕರು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ನೀತಿಯಿಂದಾಗಿ ಹೊಸ ವರ್ಷ​ದಿಂದ ಇಷ್ಟೇ ಚಾನಲ್‌​ಗ​ಳಿ​ಗಾಗಿ ಮಾಸಿಕ 1500 ರು. ಪಾವ​ತಿ​ಸು​ವಂತಾ​ಗ​ಲಿ​ದೆ. ಹೊಸ ದರಗಳು ಜನವರಿ 1 ರಿಂದ ಜಾರಿಯಾಗಲಿದ್ದು, ಈ ನಿಯಮದಿಂದ ಇನ್ನು ಮುಂದೆ ಗ್ರಾಹಕರು ಆಯ್ಕೆ ಮಾಡಿಕೊಂಡು ಹಣ ಪಾವತಿಸಿದ ಚಾನೆಲ್​ಗಳು ಮಾತ್ರ ಸಿಗಲಿವೆ.


Also read: ಕೇವಲ ಬಿ.ಪಿ.ಎಲ್. ಕಾರ್ಡ್ ದಾರರಲ್ಲದೇ ಬೇರೆ ಬಡವರಿಗೂ ಉಚಿತ ಗ್ಯಾಸ್ ಸಿಲಿಂಡರ್, ಎಲೆಕ್ಷನ್ ಸೋತಿದ್ದಕೆ ಬಿ.ಜೆ.ಪಿ. ಮಾಡಿರುವ ಹೊಸ ತಂತ್ರಾನ?

ಹೊರೆಯಾಗಲಿದೆಯೇ ಟ್ರಾಯ್ ಹೊಸ ನಿಯಮ?

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್‌ ಇಂಡಿಯಾ ಮೂಲಕ ಬರಲಿರುವ ಹೊಸ ನಿಯಮ ಡಿ.29ರಿಂದ ಜಾರಿಗೆ ಬರಲಿದೆ. ಆಗ ಕೇಬಲ್‌ ಟೀವಿ ಗ್ರಾಹಕರು ವೀಕ್ಷಣೆ ಮಾಡುತ್ತಿರುವ ಚಾನಲ್‌ಗಳಿಗೆ ಪಾವತಿಸುವ ಶುಲ್ಕದ ಮೊತ್ತ ಸುಮಾರು 10 ಪಟ್ಟು ಹೆಚ್ಚಾಗಲಿದೆ. ಈ ನಿಯಮ ಡಿಟಿಎಚ್‌ ಗ್ರಾಹಕರಿಗೂ ಅನ್ವಯವಾಗಲಿದ್ದು. ಪ್ರಸಕ್ತ ರಾಜ್ಯಾದ್ಯಂತ 400ರಿಂದ 500 ಚಾನಲ್‌ಗಳನ್ನು ಕೇಬಲ್‌ ಟೀವಿ ಗ್ರಾಹಕರಿಗೆ ಕೇಬಲ್‌ ಆಪರೇಟರ್‌ಗಳು ನೀಡುತ್ತಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ 150 ರು. ಬೆಂಗಳೂರು, ಮೈಸೂರು ಸೇರಿದಂತೆ ಮಹಾನಗರದಲ್ಲಿ 250 ರು.ಗಳಿಂದ 350 ರು.ವರೆಗೆ ಮಾಸಿಕ ಶುಲ್ಕ ಸಂಗ್ರಹಿಸುತ್ತಿದ್ದಾರೆ. ಹೊಸ ನಿಯಮದಿಂದ ಏಕರೂಪದ ಶುಲ್ಕ ಪಾವತಿ ವ್ಯವಸ್ಥೆ ಜಾರಿಗೆ ಬರುವುದರ ಜತೆಗೆ ಶುಲ್ಕದ ಪ್ರಮಾಣ ಹೆಚ್ಚಾಗಲಿದ್ದು, ಗ್ರಾಹಕರಿಗೆ ದೊಡ್ಡ ಹೊರೆಯಾಗಲಿದೆ ಎಂದು ತಿಳಿದು ಬಂದಿದೆ.


Also read: ಇನ್ಮುಂದೆ ಬ್ಯಾಂಕ್ ಖಾತೆಗಳಿಗೆ ಮತ್ತು ಮೊಬೈಲ್ ಪೋನ್ ಸಂಪರ್ಕಗಳಿಗೆ ಆಧಾರ್ ಕಡ್ಡಾಯವಲ್ಲ..

ಈ ನಿಯಮದ ಪ್ರಯೋಜನವೇನು?

ಟ್ರಾಯ್ ಹೊರಡಿಸಿರುವ ಹೊಸ ನಿಯಮದಿಂದ ಅನಗತ್ಯ ಚಾನೆಲ್​ಗಳ ಚಂದಾ ಕಟ್ಟುವುದು ತಪ್ಪಲಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಚಾನೆಲ್​ಗಳು ತನ್ನ ಎ-ಲಾ-ಕಾರ್ಟೆ ದರವನ್ನು ಪರೀಷ್ಕರಿಸಿದ್ದು, ಜನವರಿಯಿಂದ ಹೊಸ ದರ ನೀಡಬೇಕಾಗುತ್ತದೆ. ಹಳೆಯ ಚಾನೆಲ್​ ದರಗಳು ಡಿ.29ಕ್ಕೆ ಅಂತ್ಯವಾಗಲಿದ್ದು, ದೇಶಾದ್ಯಂತ ಕೇಬಲ್‌ ದರ ಹಾಗೂ ಡಿಟಿಎಚ್‌ ಎರಡಕ್ಕೂ ಹೊಸ ದರ ನಿಗದಿ ಮಾಡಲಾಗಿದೆ. ಇದರಿಂದ ಗ್ರಾಹಕರಿಗೆ ಅನಗತ್ಯ ಚಾನೆಲ್‌ ಸೇವೆಯನ್ನು ತಪ್ಪಿಸಲು ಹಾಗೂ ಅವರ ಇಷ್ಟದ ವಾಹಿನಿ ನೋಡಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಹೊಸ ದರ ಜಾರಿಗೊಳಿಸಲಾಗಿದೆ’ ಎಂದು ಟ್ರಾಯ್ ಅಧ್ಯಕ್ಷ ಆರ್.ಎಸ್.ಶರ್ಮಾ ಹೇಳಿದ್ದಾರೆ. ಇದರಿಂದ ಗ್ರಾಹಕರಿಗೆ ಅನುಕೂಲ ಜೊತೆ ದರ ವ್ಯತ್ಯಾಸವಾಗಲಿದೆ ಎಂಬುದನ್ನು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಸಕ್ತ ದರ ಮತ್ತು ಹೆಚ್ಚಾಗಲಿರುವ ದರ:

ಬೆಂಗಳೂರು ಮತ್ತು ಮಹಾನಗರ 250-350 ರು. 1500 ರು. ಗ್ರಾಮಾಂತರ ಪ್ರದೇಶ 150 ರು. 1500 ರು.
ಪ್ರಾಥಮಿಕ ಶುಲ್ಕ- 130 ರು. (ಬಾಡಿಗೆ), ತೆರಿಗೆ- ಶೇ.18 (24 ರು.), ಒಟ್ಟು- 154 ರು. (ಉಚಿತ 124 ಚಾನಲ್‌ಗೆ)
ಪ್ರತಿ ಜನಪ್ರಿಯ ಚಾನಲ್‌ಗೆ 1ರಿಂದ 19 ರು,