ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಅವಾಸ ಯೋಜನೆಯಡಿ ಸೂರು ಕಲ್ಪಿಸಿಕೊಳ್ಳಿ

0
1866

 

ಹೊಸದಿಲ್ಲಿ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಅವಾಸ ಯೋಜನೆಯಡಿ ಸೂರು ಕಲ್ಪಿಸಲು 26 ರಾಜ್ಯಗಳ 2,508 ನಗರಗಳನ್ನು ಆಯ್ಕೆ ಮಾಡಲಾಗಿದೆ. 7 ವರ್ಷಗಳ ಕಾಲಮಿತಿಯಲ್ಲಿ 2 ಕೋಟಿ ಮನೆಗಳನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯನಾಯ್ಡು ಸಂಸತ್ತಿಗೆ ತಿಳಿಸಿದ್ದಾರೆ.

ಯೋಜನೆಯ ಗುರಿ

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಅವಾಸ ಯೋಜನೆಯಡಿ ಸೂರು ಕಲ್ಪಿಸಲು 26 ರಾಜ್ಯಗಳ 2,508 ನಗರಗಳನ್ನು ಆಯ್ಕೆ ಮಾಡಲಾಗಿದೆ. 7 ವರ್ಷಗಳ ಕಾಲಮಿತಿಯಲ್ಲಿ 2 ಕೋಟಿ ಮನೆಗಳನ್ನು ಕಟ್ಟಿಸುವ ಯೋಜನೆ ಇದೆ.

ಪ್ರಧಾನ ಮಂತ್ರಿ ಅವಾಸ ಯೋಜನೆಯ ಸೌಲಭ್ಯ

ವಾರ್ಷಿಕವಾಗಿ 3 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದ್ದು, ಆರ್ಥಿಕವಾಗಿ ತೀರಾ ಹಿಂದುಳಿದ ವರ್ಗದ ಅಡಿಯಲ್ಲಿ ಬರುವ ಹಾಗೂ ವಾರ್ಷಿಕವಾಗಿ 6 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಗುಂಪಿನಲ್ಲಿ ಬರುವವರು ಪ್ರಧಾನ ಮಂತ್ರಿ ಅವಾಸ ಯೋಜನೆಯ ಸೌಲಭ್ಯವನ್ನು ಪಡೆಯಬಹುದು. ಈ ವರ್ಗದ ಅಡಿಯಲ್ಲಿ ದೇಶದ ಲಕ್ಷಾಂತರ ಜನರು ಬರುವುದರಿಂದ ತುಂಬಾ ಕುಟುಂಬಗಳಿಗೆ ಸೂರು ಸೌಲಭ್ಯ ಸಿಗಲಿದೆ. ನಮ್ಮ ದೇಶದಲ್ಲಿ ಸಾವಿರಾರು ಕುಟುಂಬಗಳನ್ನು ಇಲ್ಲಿಯವರೆಗೂ ಸ್ವಂತ ಮನೆಗಳನ್ನು ಹೊಂದಿಲ್ಲ. ಅನೇಕರು ಟೆಂಟ್ ಮತ್ತು ಗುಡಿಸಲುಗಳಲ್ಲಿ ವಾಸವಾಗಿದ್ದಾರೆ.

ಸ್ವಂತ ಮನೆಯನ್ನು ಹೊಂದಿರಬಾರದು ಎಂಬುದು ಎರಡನೇ ಪ್ರಮುಖ ಮಾನದಂಡವಾಗಿದೆ.

ನಿಮ್ಮ ಸ್ವಂತ ಮನೆ ನಿರ್ಮಿಸಲು ನೆರವು

ನೀವು ಆರ್ಥಿಕವಾಗಿ ಹಿಂದುಳಿದ ವರ್ಗದ ಅಡಿಯಲ್ಲಿ (ಕುಟುಂಬದ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ) ಬರುವವರಾದರೆ ಸರ್ಕಾರ ನಿಮಗೆ ರೂ.1.5 ಲಕ್ಷಗಳ ನೆರವಿನಲ್ಲಿ ಮನೆ ನಿರ್ಮಾಣ ಮಾಡಿ ಕೊಡುತ್ತಾರೆ.

ಗೃಹಸಾಲ ಸಬ್ಸಿಡಿ ಯೋಜನೆ

ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರಿಗೆ ಗೃಹಸಾಲ ಸಬ್ಸಿಡಿ ಯೋಜನೆ ಅಡಿಯಲ್ಲಿ ಶೇ. 6.5ರಷ್ಟು ಹೆಚ್ಚಿನ ಬಡ್ಡಿದರಕ್ಕೆ ಸಾಲ ಸಿಗುತ್ತದೆ. ಜತೆಗೆ ಮನೆ ಸಾಲ ಬಡ್ಡಿದರ ಶೇ. 9ರಷ್ಟು ಇರುತ್ತದೆ.

ಹೀಗಾಗಿ ತೀರಾ ಕಡುಬಡವರು ಈ ಬಡ್ಡಿದರದಲ್ಲಿ ಗೃಹ ಸಾಲ ಪಡೆದು ಮನೆ ಕಟ್ಟುವುದು ಕಷ್ಟ. ಅಂತವರಿಗೆ ಶೇ. 2.5ರಷ್ಟು ಬಡ್ಡಿದರದಲ್ಲಿ ಗೃಹಸಾಲ ಲಭ್ಯವಿದ್ದು, ಕನಸಿನ ಮನೆ ಕಟ್ಟಬಹುದು.

ಕೊಳಗೇರಿ ಪುನರ್ವಸತಿ

ಕೊಳಗೇರಿ ವಾಸಿಗಳಿಗೂ ಸಹ ಕೊಳಗೇರಿ ಪುನರ್ವಸತಿ ಸೌಲಭ್ಯ ಕಲ್ಪಿಸಿದ್ದು, ಪುನರ್ವಸತಿಗಾಗಿ ಒಂದು ಲಕ್ಷ ಮೊತ್ತ ನೀಡಲಾಗುತ್ತದೆ. ಕೊಳಗೇರಿ ನಿವಾಸಿಗಳೆಲ್ಲರೂ ಮೂಲಭೂತ ಸೌಕರ್ಯಗಳನ್ನು ಹಾಗೂ ಯೋಗ್ಯ ಪ್ರದೇಶವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಕಡಿಮೆ ಬಡ್ಡಿದರ ಪ್ರಯೋಜನಗಳು

ವಾರ್ಷಿಕವಾಗಿ 3 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಆರ್ಥಿಕವಾಗಿ ತೀರಾ ಹಿಂದುಳಿದ ವರ್ಗದ ಹಾಗೂ ವಾರ್ಷಿಕವಾಗಿ 6 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಗುಂಪಿನಲ್ಲಿ ಬರುವವರಿಗೆ ಈ ಯೋಜನೆ ಅಡಿಯಲ್ಲಿ ಸಾಲಗಳ ಮೇಲೆ ಕಡಿಮೆ ಬಡ್ಡಿದರ ಪ್ರಯೋಜನಗಳನ್ನು ನೀಡಲಾಗುತ್ತದೆ. ಇದನ್ನು 60 ಚದರ ಮೀಟರ್ ಅಂತರದ ಮನೆ ಕಟ್ಟುವ ಜಾಗಕ್ಕಾಗಿ ನೀಡಲಾಗುತ್ತದೆ.