ಸಿದ್ದರಾಮಯ್ಯ ಸರ್ಕಾರ ರಸ್ತೆ ಸುರಕ್ಷತೆ ಅಂತ ದ್ವಿಚಕ್ರ ವಾಹನದಿಂದ ಸೀಟನ್ನು ತೆಗೆಸಿದರೆ, ಮೋದಿ ಸರ್ಕಾರ ಇನ್ಮೇಲಿಂದ ಕಾರ್-ನಲ್ಲಿ ಏರ್ ಬ್ಯಾಗ್ಸ್-ಅನ್ನು ಕಡ್ಡಾಯ ಮಾಡುತ್ತಿದೆ!!

0
782

ಕರ್ನಾಟಕದಲ್ಲಿ 100 ಸಿಸಿ ಬೈಕ್​​ನಲ್ಲಿ ಇಬ್ಬರು ಸವಾರು ಮಾಡಬಾರದು ಎಂಬ ಆದೇಶ ಬಂದಿರೋದು ಎಲ್ಲರಿಗೂ ಗೊತ್ತೆ ಇದೆ. ಈಗ ಕೇಂದ್ರ ಸರ್ಕಾರ ಹೊಸ ಕಾಯ್ದೆಯನ್ನು ತರಲು ಸಿದ್ಧತೆ ನಡೆಸಿದೆ. ಅದೇನಪ್ಪಾ ಆ ಕಾಯ್ದೆ ಅಂದ್ರೆ ಈ ಸುದ್ದಿಯಲ್ಲಿದೆ ಕಂಪ್ಲೀಟ್​ ಡಿಟೇಲ್ಸ್​.
ಹೌದು 2019ರ ಜುಲೈ 1ರ ನಂತರ ತಯರಾಗುವ ಎಲ್ಲ ಕಾರುಗಳಿಗೆ ಏರ್​ ಬ್ಯಾಗ್ಸ್​​, ಸಿಟ್​ ಬೆಲ್ಟ್​​ ರಿಮೈಂಡರ್​, 80 ಕಿಮಿ ಮೀರಿದ ವೇಗಕ್ಕೆ ಎಚ್ಚರಿಕೆ ವ್ಯವಸ್ಥೆ, ರಿವರ್ಸ್​​ ಪಾರ್ಕಿಂಗ್​​ ಅಲರ್ಟ್​​ ಅಳವಡಿಸುವುದು ಕಡ್ಡಾಯ ಎಂದು ತಿಳಿಸಿದೆ. ಇನ್ನು ಈ ಬಗ್ಗೆ ಕೇಂದ್ರ ಸಾರಿಗೆ ಇಲಾಖೆ ಕೆಲವೇ ದಿನಗಳಲ್ಲಿ ಅಧಿ ಸೂಚನೆಯನ್ನು ಹೊರಡಿಸಲಿದೆ.


ಇದರಿಂದ ಪ್ರಯಾಣಿಕರಲ್ಲಿ ಹೆಚ್ಚಾಗುತ್ತಿರುವ ಸಾವಿನ ಬಗ್ಗೆ ಅರಿವು ಮೂಡಿಸಲು ಈ ಅಧಿಸೂಚನೆ ಮುಖ್ಯವಾಗಿದೆ. ಇನ್ನು ಕಾರಿನ ಸೀಟ್​ ಬೆಲ್ಟ್​​ ಹಾಕಿಕೊಳ್ಳದೇ ಕಾರು ಚಲಾಯಿಸಿದ್ರೆ ಸೈರನ್​ ಆರಂಭವಾಗುತ್ತದೆ. ಅಲ್ಲದೆ ಅಪಘಾತವಾದಗ ಸುರಕ್ಷತೆ ವದಗಿಸುವ ಏರ್​ ಬ್ಯಾಗ್​​ ಹಾಗೂ 80 ಕಿ.ಮಿ ವೇಗಕ್ಕೂ ಹೆಚ್ಚಿನ ವೇಗದಲ್ಲಿ ಓಡಿಸಿದಲ್ಲಿ ಅಲರ್ಟ್​​ ಕೇಳಿ ಬರುತ್ತದೆ. ಇನ್ನು ನೀವು 100 ಕಿಲೋ ಮಿಟರ್​​ ವೇಗದಲ್ಲಿ ಕ್ರಮಿಸಿದ್ರೆ ಅಲರ್ಟ್​​ ಸದ್ದು ದ್ವಿಗುಣವಾಗಲಿದೆ.


ಇನ್ನು ಈ ಎಲ್ಲ ಸೌಲಭ್ಯಗಳು ಉಳ್ಳ ಕಾರು, ಈಗಾಗಲೇ ಐಶಾರಾಮಿ ಕಾರ್​​ಗಳಲ್ಲಿ ಲಭ್ಯ. ಆದ್ರೆ ಮುಂದಿನ ದಿನಗಳಲ್ಲಿ ಈ ವ್ಯವಸ್ಥೆ ಎಲ್ಲ ಕಾರುಗಳಿಗೂ ಸಿಗಲಿದೆ. ಇನ್ನು ಕೇಂದ್ರ ಸಚಿನ ನಿತಿನ್​ ಗಡ್ಕರಿ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಅಂಗೀಕರಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಕಳೆದ ವರ್ಷ 74 ಸಾವಿರ ಸಾವುಗಳಾಗಿವೆ.